ನವದೆಹಲಿ: ಶೈತ್ಯಕಾರಕ ಹೊಂದಿರುವ ಎಲ್ಲಾ ಹವಾನಿಯಂತ್ರಣ ಸಾಧನ(ಎಸಿ)ಗಳ ಆಮದನ್ನು ಸಂಪೂರ್ಣವಾಗಿ ರದ್ದು ಮಾಡಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಈ ಮೊದಲು ಹವಾನಿಯಂತ್ರಣ ಸಾಧನಗಳ ಆಮದು ನಿಯಮದಲ್ಲಿ ಹಾರ್ಮೊನೈಸ್ಡ್ ಸಿಸ್ಟಮ್ ಕೋಡ್ (HS Code) 84151010 ಮತ್ತು 84151090 ಇರುವ ಎಸಿಗಳ ಆಮದು ''ಉಚಿತ'' ಎಂಬುದನ್ನು ''ನಿಷೇಧಿಸಲ್ಪಟ್ಟಿದೆ'' ಎಂದು ತಿದ್ದುಪಡಿ ಮಾಡಲಾಗಿದೆ ಎಂದು ಇಲಾಖೆ ಸ್ಪಷ್ಟನ ನೀಡಿದೆ.
ಶೈತ್ಯಕಾರಕಗಳನ್ನು ಹೊಂದಿರುವ ವಿಂಡೋ ಮತ್ತು ಸ್ಪ್ಲಿಟ್ ( window and split) ಎಸಿಗಳು ಈ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳುವುದು ರದ್ದಾಗಲಿದೆ.
ಭಾರತದಲ್ಲಿ ಅತ್ಯಂತ ಪ್ರಮುಖ ಹಬ್ಬಗಳು ಆರಂಭವಾಗಲಿದ್ದು, ಮಾರುಕಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಸರಕುಗಳ ಮೇಲೆ ಆಫರ್ಗಳನ್ನು ಹೆಚ್ಚಾಗಿ ನೀಡುವ ವೇಳೆಯೇ ಎಸಿಗಳ ಆಮದನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದನ್ನು ಗಮನಿಸಬೇಕಿದೆ.