ನವದೆಹಲಿ : ಭಾರತ ಮತ್ತು ಯುಎಸ್ ನಾಗರಿಕರು ತಮ್ಮ ಡಿಎನ್‌ಎಯಲ್ಲಿ ಸಹಿಷ್ಣುತೆಯನ್ನು ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಅದು ಕಣ್ಮರೆಯಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಮಾಜಿ ರಾಜತಾಂತ್ರಿಕ ನಿಕೋಲಸ್ ಬರ್ನ್ಸ್ ಜೊತೆಗಿನ ವಿಡಿಯೋ ಸಂವಾದದಲ್ಲಿ ರಾಹುಲ್ ಈ ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮ (ಭಾರತ ಮತ್ತು ಯುಎಸ್) ಪಾಲುದಾರಿಕೆ ಏಕೆ ಕೆಲಸ ಮಾಡುತ್ತದೆ ಎಂದರೆ ನಾವು ಸಹಿಷ್ಣು ವ್ಯವಸ್ಥೆ ಹೊಂದಿದ್ದೇವೆ. ಹಾಗಾಗಿ ನಮ್ಮ ಡಿಎನ್‌ಎ ಸಹಿಷ್ಣುವಾಗಿರಬೇಕು. ಆದರೆ, ಆಶ್ಚರ್ಯಕರ ಸಂಗತಿಯೆಂದರೆ ನಮ್ಮ ಆ ಸಹಿಷ್ಣುತೆಯ ಡಿಎನ್‌ಎ ಒಂದು ರೀತಿ ಕಣ್ಮರೆಯಾಗುತ್ತಿದೆ. ಯುಎಸ್ ಮತ್ತು ಭಾರತದಲ್ಲಿ ನಾವು ನೋಡುತ್ತಿದ್ದ ಸಹನೆಯ ಮಟ್ಟ ಈಗ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬರ್ನ್ಸ್, ನೀವು ಯುಎಸ್ನ ಕೇಂದ್ರ ಸಮಸ್ಯೆ ಗುರುತಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಒಳ್ಳೆಯ ಸುದ್ದಿ ಎಂದರೆ ಸಹಿಷ್ಣುತೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಈ ವಾರ ದೇಶಾದ್ಯಂತ ಜನರು ಬೀದಿಗಿಳಿದಿದ್ದಾರೆ ಎಂದರು.