ಅಕ್ಟೋಬರ್ 20 ಭಾರತ್- ಪಾಕ್ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಅತ್ಯಂತ ರಕ್ತಸಿಕ್ತ ದಿನ. ಎರಡೂ ರಾಷ್ಟ್ರಗಳ ನಡುವಣ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 9 ಸೈನಿಕರು ಹಾಗೂ ನಾಗರಿಕರು ಮೃತಪಟ್ಟಿರೋದು ದೃಢಪಟ್ಟಿದೆ. ಅಷ್ಟೇ ಏಕೆ? ಎರಡೂ ಕಡೆ ಭಾರಿ ಪ್ರಮಾಣದಲ್ಲಿ ಹಾನಿಯೂ ಆಗಿದೆ.
ಭಾರತೀಯ ಭೂಸೇನೆ ಪಾಕಿಸ್ತಾನಿ ಪೋಸ್ಟ್ಗಳ ಮೇಲೆ ದಾಳಿ ನಡೆಸಿ ದ್ವಂಸಗೊಳಿಸಿದೆ. ಈ ವೇಳೆ ಆರು ಪಾಕಿಸ್ತಾನಿ ಸೈನಿಕರು ಹತರಾಗಿದ್ದು, ಮೂರು ಉಗ್ರರ ಕ್ಯಾಂಪ್ಗಳು ನಾಶವಾಗಿವೆ ಎಂದು ಭಾರತೀಯ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಭಾರತೀಯ ಸೇನಾ ಮುಖ್ಯಸ್ಥರ ಹೇಳಿಕೆಯನ್ನ ಸಹಜವಾಗೇ ಪಾಕಿಸ್ತಾನದ ಸೇನಾ ವಕ್ತಾರರು ತಳ್ಳಿ ಹಾಕಿದ್ದು, ಪ್ರತಿಯಾಗಿ ಭಾರತದ 9 ಸೈನಿಕರು ಪಾಕ್ ದಾಳಿಯಿಂದ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ಮಾತುಗಳು, ಹೇಳಿಕೆಗಳು ಭಾರತ - ಪಾಕಿಸ್ತಾನದ ನಡುವೆ ಸಹಜವಾಗೇ ಕೇಳಿ ಬರುತ್ತಿವೆ. ಟ್ವಿಟರ್ ನಲ್ಲಿ ಈ ಸಂಬಂಧದ ವಿಡಿಯೋಗಳು ಎರಡೂ ಕಡೆ ಹರಿದಾಡುತ್ತಿವೆ. ಇದು ನಿಜವಾಗಿಯೂ ಪಾಕ್- ಭಾರತ ಅಂತಾರಾಷ್ಟ್ರೀಯ ಗಡಿಯಲ್ಲಿ (ಲೈನ್ ಆಫ್ ಕಂಟ್ರೋಲ್ನಲ್ಲಿ) ನಡೆಯುತ್ತಿರುವುದನ್ನ ಮರೆ ಮಾಚುತ್ತಿವೆಯಷ್ಟೇ.
ಸುಮಾರು ದಶಕಗಳ ಕಾಲ ನಡೆದ ಗಡಿಗುಂಟದ ಸಮರದ ಬಳಿಕ ಭಾರತ - ಪಾಕಿಸ್ತಾನ 2003 ರಲ್ಲಿ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದವು. ಇದಾದ ಬಳಿಕ ಸುಮಾರು 10 ವರ್ಷಗಳ ಕಾಲ ಈ ಒಪ್ಪಂದದಿಂದ ಅಲ್ಲಿನ ಜನರಿಗೆ ತುಸು ನೆಮ್ಮದಿ ಸಿಕ್ಕಿತ್ತು. ನಾನು ಇಲ್ಲಿ ಹೇಳಲು ಬಯಸುವುದು ಏನೆಂದರೆ, ಗಡಿಗುಂಟ ಕದನ ವಿರಾಮ ಒಪ್ಪಂದ ಉಲ್ಲಂಘನೆ ಆಗುವುದರಿಂದ ಸಂಕಷ್ಟ ಅನುಭವಿಸುವುದು ಗಡಿಯಲ್ಲಿರುವ ಹಳ್ಳಿಗಳ ಜನ. 2018 ರ ಮೇ ನಲ್ಲಿ ಸುಮಾರು 76 ಸಾವಿರಕ್ಕೂ ಹೆಚ್ಚು ಹಳ್ಳಿಗರು ಪಾಕಿಸ್ತಾನದ ಶೆಲ್ ದಾಳಿಗಳಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ಅನಿವಾರ್ಯವಾಗಿ ಬಂಧಿಯಾಗಿರಬೇಕಾಯಿತು. ಇಂತಹ ಪರಿಸ್ಥಿತಿ ಎರಡೂ ರಾಷ್ಟ್ರಗಳ ಗಡಿಯ ಎರಡೂ ಬದಿಯಲ್ಲಿ ಅನುಭವಿಸುವ ನೋವಿದು.
ನನ್ನ ಪ್ರಕಾರ, 2013ರಲ್ಲಿ ಎಲ್ಲವೂ ಬದಲಾವಣೆ ಆಯಿತು. ಏಕೆಂದರೆ ಭಾರತದ ಬಗ್ಗೆ ತುಸು ಸಾಪ್ಟ್ ಕಾರ್ನರ್ ಆಗಿರುವ ನವಾಜ್ ಷರೀಫ್ ಪಾಕ್ನ ಅಧ್ಯಕ್ಷರಾದ ಬಳಿಕ ಅಲ್ಲಿನ ಸೇನೆಗೆ ಜಮ್ಮು - ಕಾಶ್ಮೀರದ ಗಡಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಾಗಿರಲಿಲ್ಲ. ಅದ್ಯಾಗ್ಯೂ ಪಾಕ್ ಸೇನೆ ತನ್ನ ಹಳೆ ನಿಲುವು ಮಾತ್ರ ಬದಲಿಸುವುದಿಲ್ಲ. ಅದು ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಲೇ ಇರುತ್ತೆ. ಪರಿಣಾಮ ಹೀರಾನಗರ, ಸಂಬಾ, ಜಂಗ್ಲೋಟೆಯಲ್ಲಿ ದಾಳಿ ನಡೆಸಿತ್ತು.
ಇನ್ನು 2014 ರಲ್ಲಿ ಭಾರತದಲ್ಲಿ ಪರಿಸ್ಥಿತಿ ಬದಲಾಗಿದೆ. 2014 ರಲ್ಲಿ ಭಾರತದಲ್ಲಿ ರಚನೆಯಾದ ಸರ್ಕಾರ ಪಾಕಿಸ್ತಾನ ಹಾಗೂ ಅಲ್ಲಿಂದ ಉದ್ಭವವಾಗುವ ಭಯೋತ್ಪಾದಕ ಕೃತ್ಯಗಳ ವಿರುದ್ಧ ಕಠಿಣ ನಿಲುವು ತಾಳಿದೆ. ಹೀಗಾಗಿ ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. 2012 ರಲ್ಲಿ 200 ರಷ್ಟಿದ್ದ ಉಲ್ಲಂಘನೆ ಈಗ ಅಂದರೆ 2018ರಷ್ಟೊತ್ತಿಗೆ 2 ಸಾವಿರದಷ್ಟು ಹೆಚ್ಚಾಗಿದೆ. 2019ರ 10 ತಿಂಗಳ ಅವಧಿಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಕದನ ವಿರಾಮ ಉಲ್ಲಂಘನೆ ಆಗ್ತಿರೋದೇಕೆ?:
ಉಗ್ರರು ಭಾರತೀಯ ಗಡಿಯೊಳಗೆ ನುಸುಳಲು ಅನುಕೂಲವಾಗುವಂತೆ ಪಾಕಿಸ್ತಾನ ಸೇನೆ ಗಡಿಗುಂಟ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತದೆ. ಈ ಮೂಲಕ ಬಹಳಷ್ಟು ಗಡಿ ನುಸುಳುವಿಕೆ ಪ್ರಯತ್ನಗಳು ಗಡಿಗುಂಟ ನಡೆಯುತ್ತಲೇ ಇರುತ್ತವೆ. ಭಾರತೀಯ ಗೃಹ ಇಲಾಖೆ ವಾರ್ಷಿಕ ವರದಿ ಪ್ರಕಾರ, 2014 - 2018 ರ ಅವಧಿಯಲ್ಲಿ ಕಾಶ್ಮೀರದಲ್ಲಿ ಸುಮಾರು 1461 ಉಗ್ರರು ದೇಶದ ಗಡಿಯೊಳಗೆ ಅತಿಕ್ರಮ ಪ್ರವೇಶ ಯತ್ನ ಮಾಡಿದ್ದಾರೆ.
ಹೀಗಾಗಿ ಸಹಜವಾಗೇ ಅತಿಕ್ರಮವಾಗಿ ಉಗ್ರರು ಒಳ ನುಸುಳುವಿಕೆಯನ್ನು ತಡೆಗಟ್ಟಲು ಭಾರತೀಯ ಸೇನೆ ಗಡಿಗುಂಟ ಪ್ರತಿದಾಳಿ ನಡೆಸಲೇಬೇಕಾಗುತ್ತದೆ. ಇದು ಕಣ್ಣಿಗೆ ಕಣ್ಣು ನೀತಿಯನ್ನ ಅನುಸರಿಸಲು ಪ್ರೇರಣೆ ಒದಗಿಸುತ್ತದೆ. ಆದರೆ ರಕ್ಷಣಾತ್ಮಕ ಮನೋಭಾವವು ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ನಿಯೋಜಿಸಲಾದ ಪಡೆಗಳ ಸ್ಥೈರ್ಯ ಮತ್ತು ಮನೋಭಾವವನ್ನು ನಿಧಾನವಾಗಿ ಕಡಿಮೆ ಮಾಡಬಹುದು. ಇನ್ನು ಯುದ್ಧ ಎಂಬ ವಿಷಯ ಸಾಮಾನ್ಯವಾಗಿ ಪರಸ್ಪರ ಎದುರಾಳಿ ಕಮಾಂಡರ್ಗಳ ಮನಸಿನಲ್ಲಿ ನಿರ್ಧಾರವಾಗುವ ವಿಷಯವಾಗಿದೆ. ಬದಲಾಗಿ ಇದು ದೇಹಳಗಳ ಮೂಲಕ ಆಗುವ ಚಲನೆ ಅಲ್ಲ ಎನ್ನುವುದು ಮುಖ್ಯ. ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ.
ಅಂದ ಹಾಗೆ ಈ ಹಿಂಸಾಚಾರ ಕೊನೆಗೊಳಿಸುವುದು ಹೇಗೆ? :
ಇದಕ್ಕೆ ಸರಳ ಉತ್ತರ ಸುಲಭವಾಗಿ ಮಾತಿನಲ್ಲಿ ಬಗೆಹರಿಸಬಹುದು. ಆದರೆ,ವಾಸ್ತವದಲ್ಲಿ ಅದನ್ನ ಆಚರಣೆಗೆ ಅಂದರೆ ಜಾರಿಗೆ ತರುವುದು ತುಸು ಕಷ್ಟವೇ ಸರಿ. ವಿಶೇಷ ಅಂದರೆ ಈಗ ಚೆಂಡು ಪಾಕಿಸ್ತಾನ ಸೇನಾ ಅಂಗಳದಲ್ಲಿದೆ. ಅದು ಒಳನುಸುಳುವಿಕೆಯ ಬಗ್ಗೆ ಪರಿಶೀಲಿಸಬೇಕಿದೆ. ಒಂದೊಮ್ಮೆ ಪಾಕ್ ಸೇನೆ ಅದನ್ನು ಕಡಿಮೆ ಮಾಡಿದ್ದೇ ಆದ್ರೆ ಗಡಿಗುಂಟ ಕದನ ವಿರಾಮ ಉಲ್ಲಂಘನೆ ತನ್ನಿಂದ ತಾನೆ ಕಡಿಮೆ ಆಗುತ್ತದೆ. ಅಲ್ಲಿಂದ ದಾಳಿ ಕಡಿಮೆ ಆದರೆ ಇತ್ತ ಭಾರತದ ಕಡೆಯಿಂದ ಪ್ರತಿದಾಳಿ ತನ್ನಿಂದ ತಾನೇ ನಿಂತು ಹೋಗುತ್ತದೆ.
ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಪಾಕಿಸ್ತಾನ ಸೇನೆ ಇಂತಹ ನಿರ್ಣಯ ಕೈಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನು ಎರಡೂ ಕಡೆ ಸಂಬಂಧ ತೀರಾ ಕ್ಷೀಣಿಸಿರುವುದರಿಂದ ಗಡಿಗುಂಟ ಇಂತಹ ಸನ್ನಿವೇಶವನ್ನ ಹತೋಟಿಗೆ ತರುವುದು ತೀರಾ ಕಷ್ಟ.
ಕಠೋರ ವಾಸ್ತವವೆಂದರೆ, ಸದ್ಯಕ್ಕಂತೂ ಗಡಿಯುದ್ದಕ್ಕೂ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಈಗೇನಿದ್ದರೂ ಬಂದೂಕುಗಳ ಸದ್ದಿನ ಮಾತಷ್ಟೇ.
ಡಿ.ಎಸ್. ಹೂಡಾ, ನಿವೃತ್ತ ಲೆಫ್ಟಿನೆಂಟ್ ಜನರಲ್