ನವದೆಹಲಿ: ಸ್ಪೀಕರ್ ಹಾಗೂ ಸರ್ಕಾರಕ್ಕೆ ಇಂದೇ ವಿಶ್ವಾಸಮತ ಸಾಬೀತು ಮಾಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನ ಇಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು.
ಮಂಗಳವಾರ ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದಿಗೆ ಮುಂದೂಡಿತ್ತು. ಇಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸಿಜೆಐ, ಪಕ್ಷೇತರ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ, ಹಾಗೂ ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಇಬ್ಬರು ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ಅಭಿಷೇಕ್ ಮನು ಸಿಂಘ್ವಿ ಕೋರ್ಟ್ ಕಲಾಪಕ್ಕೆ ಹಾಜರಾಗಿರಲಿಲ್ಲ.
ಹಿರಿಯ ವಕೀಲರಾದ ರೋಹ್ಟಗಿ ಹಾಗೂ ಸಿಂಘ್ವಿ ಅನುಪಸ್ಥಿತಿಯಲ್ಲಿ ಆದೇಶ ನೀಡಲು ಸಾಧ್ಯವಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ, ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.
-
#Karnataka rebel MLAs case in SC: Supreme Court today said, "We will pass appropriate orders & dispose of the petition with respect to Karnataka floor test, but only in presence of Mukul Rohatgi (rebel MLAs' lawyer) & Abhishek Manu Singhvi (Congress lawyer)." pic.twitter.com/LsLhv1RUU8
— ANI (@ANI) July 24, 2019 " class="align-text-top noRightClick twitterSection" data="
">#Karnataka rebel MLAs case in SC: Supreme Court today said, "We will pass appropriate orders & dispose of the petition with respect to Karnataka floor test, but only in presence of Mukul Rohatgi (rebel MLAs' lawyer) & Abhishek Manu Singhvi (Congress lawyer)." pic.twitter.com/LsLhv1RUU8
— ANI (@ANI) July 24, 2019#Karnataka rebel MLAs case in SC: Supreme Court today said, "We will pass appropriate orders & dispose of the petition with respect to Karnataka floor test, but only in presence of Mukul Rohatgi (rebel MLAs' lawyer) & Abhishek Manu Singhvi (Congress lawyer)." pic.twitter.com/LsLhv1RUU8
— ANI (@ANI) July 24, 2019
ಸದನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಸೋತ ಪರಿಣಾಮ ಇಂದಿನ ವಿಚಾರಣೆ ಮಹತ್ವ ಕಳೆದುಕೊಂಡಿತ್ತು. ವಿಪ್ ಜಾರಿ ಬಗ್ಗೆ ಗೊಂದಲ ಹಾಗೂ ಕಲಾಪದ ವೇಳೆ ರಾಜ್ಯಪಾಲರು ಸೂಚನೆ ನೀಡಬಹುದೇ ಎನ್ನುವ ಕುರಿತಾಗಿ ಎರಡು ಅರ್ಜಿಗಳು ಸುಪ್ರೀಂನಲ್ಲಿ ಸಲ್ಲಿಕೆಯಾಗಿದ್ದು, ಹೀಗಾಗಿ ಮೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಒಂದೇ ದಿನ ತೀರ್ಪು ನೀಡುವ ಸಾಧ್ಯತೆ ಇದೆ.