ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರ ಜೊತೆಗೆ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲೂ ಏರಿಕೆ ಕಾಣ್ತಿದೆ. ಇನ್ನೊಂದೆಡೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 1456 ಮಂದಿ ಕೊರನಾ ವೈರಸ್ನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಈವರೆಗೆ ಅತಿ ಹೆಚ್ಚು ಸಂಖ್ಯೆ. ಈ ಮೊದಲು, ಕಳೆದ ಮಾರ್ಚ್ 4ರಂದು 1074 ಜನ ಗುಣಮುಖರಾಗಿದ್ದರು. ಅದೇ ಸಂಖ್ಯೆ ಈವರೆಗಿನ ಹೆಚ್ಚು ಗುಣಮುಖರ ಸಂಖ್ಯೆಯಾಗಿತ್ತು. ಇಂದು 1456 ಜನ ಗುಣಮುಖರಾಗುವುದರೊಂದಿಗೆ ದೇಶದ ಒಟ್ಟು ಗುಣಮುಖರ ಸಂಖ್ಯೆ 14,182ಕ್ಕೇರಿದೆ.
ಮೇ ತಿಂಗಳಲ್ಲಿ ದೇಶದ ಗುಣಮುಖರ ಸಂಖ್ಯೆ ಹೀಗಿದೆ...
ದಿನಾಂಕ | ಗುಣಮುಖರ ಸಂಖ್ಯೆ |
1-5-20 | 564 |
2-5-20 | 1062 |
3-5-20 | 682 |
4-5-20 | 1074 |
5-5-20 | 1020 |
6-5-20 | 1456 |
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಅತಿ ಹೆಚ್ಚು ಜನ ಗುಣಮುಖರಾಗಿದ್ದು, 354 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನೊಂದೆಡೆ ಕೇರಳದಲ್ಲಿ ದೇಶದಲ್ಲಿ ಅತಿ ಹೆಚ್ಚು ಗುಣಮುಖರ ಪ್ರಮಾಣವಿದ್ದು, ರಾಜ್ಯದ ಒಟ್ಟು 502 ಕೊರೊನಾ ಪ್ರಕರಣಗಳಲ್ಲಿ ಸದ್ಯ ಕೇವಲ 37 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ದೇಶದಲ್ಲಿ ಒಟ್ಟು 49,391 ಕೊರೊನಾ ಪ್ರಕರಣ ದಾಖಲಾಗಿವೆ. ಇದರಲ್ಲಿ ಈವರೆಗೆ ಒಟ್ಟು 14,182 ಮಂದಿ ಗುಣಮುಖರಾಗಿದ್ದು, ಒಟ್ಟು 1694 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ 26,167 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.