ETV Bharat / bharat

65 ವರ್ಷದ ಮಹಿಳೆಗೆ 14 ತಿಂಗಳಲ್ಲಿ 8 ಹೆಣ್ಣು ಮಕ್ಕಳು...ಬಿಹಾರದಲ್ಲಿ ವಿಚಿತ್ರ ಪ್ರಕರಣ!

65 ವರ್ಷದ ಮಹಿಳೆಯೊಬ್ಬರು ಕೇವಲ 14 ತಿಂಗಳಲ್ಲಿ ಬರೋಬ್ಬರಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ವಿಷಯ ಇದೀಗ ಬಿಹಾರದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

65-yr-old women
65-yr-old women
author img

By

Published : Aug 22, 2020, 6:01 PM IST

ಮುಜಾಫರ್​​ಪುರ್​​​(ಬಿಹಾರ): 65 ವರ್ಷದ ಮಹಿಳೆಯೊಬ್ಬರು ಕೇವಲ 14 ತಿಂಗಳಲ್ಲಿ ಬರೋಬ್ಬರಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಬಿಹಾರ ಸರ್ಕಾರದ ದಾಖಲೆಯಲ್ಲಿದ್ದು, ಈ ವಿಷಯ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಬಿಹಾರದಲ್ಲಿ ಝಾನ್ಸಿ ಸುರಕ್ಷಾ ಯೋಜನೆಯಡಿ ಹೆಣ್ಣು ಮಗುವಿಗೆ ಜನ್ಮ ನೀಡುವ ಪ್ರತಿ ಮಹಿಳೆಗೆ 1,400 ರೂ. ಹಣ ನೀಡಲಾಗುತ್ತದೆ. ಅದೇ ರೀತಿ 65 ವರ್ಷದ ಮಹಿಳೆ ಹೆಸರಿನಲ್ಲಿ ಕೇವಲ 14 ತಿಂಗಳಲ್ಲಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಸುಳ್ಳು ದಾಖಲೆ ಹುಟ್ಟು ಹಾಕಿ ಹಣ ಪಡೆದುಕೊಳ್ಳಲಾಗಿದೆ.

65 ವರ್ಷದ ಲೀಲಾ ದೇವಿ ಮುಜಫರ್​​​ಪುರದ ಮಸೂರಿ ಬ್ಲಾಕ್​​ನಲ್ಲಿ ವಾಸವಾಗಿದ್ದಾರೆ.​​ ಈಕೆ ಕೊನೆಯದಾಗಿ ಜನ್ಮ ನೀಡಿರುವ ಮಗನಿಗೆ ಈಗಾಗಲೇ 21 ವರ್ಷ. 14 ತಿಂಗಳಲ್ಲಿ ತನ್ನ ಖಾತೆಗೆ ಹಣ ವರ್ಗಾವಣೆಗೊಂಡಿರುವ ಮಾಹಿತಿ ಕೂಡ ಲೀಲಾದೇವಿಗೆ ಗೊತ್ತಿಲ್ಲ ಎಂದು ಹೇಳಲಾಗುತ್ತಿದೆ. ಜತೆಗೆ ಮರು ದಿನವೇ ಆ ಹಣ ಖಾತೆಯಿಂದ ಡ್ರಾ ಆಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೇ ರೀತಿ ಅನೇಕ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.

ಪ್ರಕರಣದ ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ಚಂದ್ರಶೇಖರ್​​ ಸಿಂಗ್​ ಮುಂದಾಗಿದ್ದು, ಇದರಲ್ಲಿ ಕೈವಾಡವಿರುವ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಝಾನ್ಸಿ ಸುರಕ್ಷಾ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಯಾಗಿದ್ದು, ಬಾಣಂತಿಯರಿಗಾಗಿ 1400 ರೂ ಹಾಗೂ ಆಶಾ ಕಾರ್ಯಕರ್ತೆಯರಿಗೆ 400 ರೂ ನೀಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.