ನವದೆಹಲಿ: ಬೇಹುಗಾರಿಕೆಯಲ್ಲಿ ತೊಡಗಿದ್ದ ಪಾಕಿಸ್ತಾನದ ಇಬ್ಬರು ಹೈಕಮೀಷನ್ ಅಧಿಕಾರಿಗಳ ಬಂಧನ ಮಾಡಿರುವ ವಿದೇಶಾಂಗ ಇಲಾಖೆ, ಮುಂದಿನ 24 ಗಂಟೆಯಲ್ಲಿ ಭಾರತ ತೊರೆಯುವಂತೆ ಅವರಿಗೆ ಸೂಚನೆ ನೀಡಿದೆ.
ಭಾರತದಲ್ಲಿರುವ ಪಾಕ್ ಹೈಕಮೀಷನ್ ಕಚೇರಿಯಲ್ಲಿ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಾಗಿ 24 ಗಂಟೆಗಳಲ್ಲಿ ದೇಶ ತೊರೆಯುವಂತೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಪಾಕ್ ಹೈ ಕಮೀಷನ್ ಅಧಿಕಾರಿಗಳಾಗಿರುವ ಅಬಿದ್ ಹುಸೇನ್ ಮತ್ತು ತಾಹೀರ್ ಹುಸೇನ್ ಬೇಹುಗಾರಿಕೆ ನಡೆಸಿರುವ ಆರೋಪ ಹೊತ್ತಿದ್ದು, ಇವರನ್ನ ಭಾರತೀಯ ಭದ್ರತಾ ಪಡೆ ಸಾಕ್ಷಿ ಸಮೇತವಾಗಿ ಹಿಡಿದಿದೆ.
ಭಾರತದ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಚಟುವಟಿಕೆ ನಡೆಸಿರುವ ಆರೋಪದ ಮೇಲೆ ಇವರ ಬಂಧನ ಮಾಡಲಾಗಿದೆ ಎಂದು ತಿಳಿಸಲಾಗಿದ್ದು, ವಿವಿಧ ಸ್ಥಳಗಳಲ್ಲಿ ಭಾರತೀಯ ನಕಲಿ ಗುರುತಿನ ಚೀಟಿಗಳ ಬಳಕೆ ಮಾಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.