ETV Bharat / bharat

ಯಾವುದೀ ಪ್ರವಾಹವೂ! 24 ಗಂಟೆಯಲ್ಲಿ ಪ್ರವಾಹಕ್ಕೆ 17, ಸಿಡಿಲಿಗೆ 55 ಸೇರಿ 72 ಜನ ಬಲಿ! - ಸಿಡಿಲಿಗೆ 55

ವರುಣನ ಆರ್ಭಟಕ್ಕೆ ಬಿಹಾರ, ಜಾರ್ಖಂಡ್​ ತತ್ತರಿಸಿದೆ. ಕೇವಲ ಒಂದೇ ದಿನಕ್ಕೆ ಪ್ರವಾಹ ಮತ್ತು ಸಿಡಿಲಿಗೆ 72 ಜನರು ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jul 25, 2019, 4:47 PM IST

ವಿಪರೀತ ಗುಡುಗು ಸಹಿತ ಮಳೆಗೆ ಬಿಹಾರ ರಾಜ್ಯ ಅಕ್ಷರಶಃ ನಲುಗಿದೆ. ಧಾರಾಕಾರ ಮಳೆಯಿಂದ ಭಾರಿ ಪ್ರವಾಹ ಉಂಟಾಗಿದ್ದು ಒಂದೆಡೆ ಆದ್ರೆ, ಮತ್ತೊಂದೆಡೆ ಗುಡುಗು-ಸಿಡಿಲಿನ ಆರ್ಭಟವೂ ಹೆಚ್ಚಾಗಿದೆ. ಇದ್ರಿಂದಾಗಿ 60ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಯಾವುದೀ ಪ್ರವಾಹವೂ?

ಮಂಗಳವಾರ ಸುರಿದ ಕುಂಭದ್ರೋಣ ಮಳೆಗೆ ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ 17 ಜನ ಮೃತಪಟ್ಟಿದ್ದಾರೆ. ಸಿಡಿಲಿಗೆ 43 ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಇಲ್ಲಿನ ಜಮುಇ ಜಿಲ್ಲೆಯಲ್ಲೇ 8 ಜನರು ಸಿಡಿಲಿಗೆ ಆಹುತಿಯಾಗಿದ್ದಾರೆ. ಮೃತಪಟ್ಟ ಕುಟುಂಬಳಿಗೆ ಜಿಲ್ಲಾಧಿಕಾರಿ 4 ಲಕ್ಷ ರೂ ಪರಿಹಾರಧನ ಘೋಷಿಸಿದ್ದಾರೆ.

ಜಾರ್ಖಂಡ್‌ನಲ್ಲೂ ಕಷ್ಟನಷ್ಟ:

ಜಾರ್ಖಂಡ್​ನ ಜಮತಾಡ್​ ಜಿಲ್ಲೆಯೊಂದರಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ರಾಮಗಡ್​ನಲ್ಲಿ ಮಕ್ಕಳು ಕ್ರಿಕೆಟ್​ ಆಟವಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಬಿರುಸಿನಿಂದ ಸಾಗಿದೆ.

Intro:Body:

24 ಗಂಟೆಯಲ್ಲಿ ಪ್ರವಾಹಕ್ಕೆ 17, ಸಿಡಿಲಿಗೆ 55 ಸೇರಿ 72 ಜನ ಬಲಿ!

kannada newspaper, etv bharat, 24 hour, lighting killed, 72, Bihar, Jharkhand, 24 ಗಂಟೆ, ಪ್ರವಾಹಕ್ಕೆ 17, ಸಿಡಿಲಿಗೆ 55, 72 ಜನ ಬಲಿ 

In 24 hours lighting killed more than 72 in Bihar and Jharkhand!

ವರುಣನ ಆರ್ಭಟಕ್ಕೆ ಬಿಹಾರ, ಜಾರ್ಖಂಡ್​ ಅಕ್ಷರಶಃ ತತ್ತರಿಸಿ ಹೋಗಿದೆ. ಕೇವಲ ಒಂದೇ ದಿನಕ್ಕೆ ಪ್ರವಾಹ ಮತ್ತು ಸಿಡಿಲಿಗೆ 72 ಜನರು ಸಾವನ್ನಪ್ಪಿದ್ದಾರೆ. 

ವಿಪರೀತ ಗುಡುಗು ಸಹಿತ ಮಳೆಗೆ ಬಿಹಾರ ರಾಜ್ಯ ಅಕ್ಷರಶಃ ತತ್ತರಿಸಿ ಹೋಗಿದೆ. ಮಳೆಗೆ ಪ್ರವಾಹ ಒಂದೆಡೆ ಆದ್ರೆ, ಮತ್ತೊಂದೆಡೆ ಗುಡುಗು-ಸಿಡಿಲಿನ ಅಬ್ಬರ ಹೆಚ್ಚಾಗಿದೆ. ಇದರಿಂದಾಗಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 

ಹೌದು, ಮಂಗಳವಾರದಂದು ಸುರಿದ ಮಳೆಗೆ ಬಿಹಾರ ರಾಜ್ಯದಲ್ಲಿ ಪ್ರವಾಹಕ್ಕೆ 17 ಜನ ಸಾವನ್ನಪ್ಪಿದ್ದಾರೆ. ಇನ್ನು ಸಿಡಿಲಿಗೆ 43 ಜನರ ಪ್ರಾಣ ಬಲಿಯಾಗಿವೆ. ಜಮುಇ ಜಿಲ್ಲೆಯಲ್ಲೇ 8 ಜನರು ಸಿಡಿಲಿಗೆ ಮೃತಪಟ್ಟಿದ್ದಾರೆ. ಮೃತಪಟ್ಟ ಕುಟುಂಬಳಿಗೆ ಜಮುಇ ಜಿಲ್ಲಾಧಿಕಾರಿ 4 ಲಕ್ಷ ಪರಿಹಾರ ಘೋಷಿಸಿದ್ದಾರೆ. 

ಇನ್ನು ಜಾರ್ಖಂಡ್​ನ ಜಮತಾಡ್​ ಜಿಲ್ಲೆ ಒಂದರಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ರಾಮಗಡ್​ನಲ್ಲಿ ಮಕ್ಕಳು ಕ್ರಿಕೆಟ್​ ಆಟವಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಚುರುಕಿನಿಂದ ಸಾಗಿದೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.