ETV Bharat / bharat

ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ 15 ವರ್ಷ: ಒಂದು ಹಿನ್ನೋಟ

author img

By

Published : Oct 12, 2020, 7:18 PM IST

Updated : Oct 12, 2020, 7:28 PM IST

ದೇಶದ ಗ್ರಾಮೀಣ ಭಾಗದ ಶೇ 64 ರಷ್ಟು ಹಾಗೂ ನಗರ ಪ್ರದೇಶದ ಶೇ 62 ರಷ್ಟು ಜನರಿಗೆ ಆರ್​ಟಿಐ ಕಾಯ್ದೆಯ ಬಗ್ಗೆ ಸೂಕ್ತ ಮಾಹಿತಿಯೇ ಇಲ್ಲ. ದೇಶದ ರಾಜಧಾನಿ ದೆಹಲಿಯ ಶೇ 61 ರಷ್ಟು ಜನ ಆರ್​ಟಿಐ ಕಾಯ್ದೆ ಹೆಸರನ್ನು ಕೇಳಿದ್ದಾರೆಯೇ ಹೊರತು ಹಾಗೆಂದರೇನು ಎಂಬುದು ಅವರಿಗೆ ಗೊತ್ತೇ ಇಲ್ಲ ಎಂದು ಬಡಾವಣೆ ಹಾಗೂ ಗಲ್ಲಿಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

Impact of RTI - 15 Years of changing lives

ಸರ್ಕಾರದ ಯಾವುದೇ ಮಾಹಿತಿಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಪಡೆದುಕೊಳ್ಳುವ ಹಕ್ಕನ್ನು ಸಾರ್ವಜನಿಕರಿಗೆ ನೀಡಿದ ಮಾಹಿತಿ ಹಕ್ಕು ಕಾಯ್ದೆ-2005 ಜಾರಿಯಾಗಿ ಇಂದು ಅಕ್ಟೋಬರ್​ 12 ಕ್ಕೆ 15 ವರ್ಷಗಳು ಭರ್ತಿ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಖಾತೆಯ ಸಿಬ್ಬಂದಿ ಮತ್ತು ತರಬೇತಿ ವಿಭಾಗದ ವತಿಯಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಇಲಾಖೆಗಳ ಕುರಿತಾದ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭ ಹಾಗೂ ಶೀಘ್ರವಾಗಿ ತಲುಪಿಸಲು ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿತ್ತು.

ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶ

ಸರ್ಕಾರದ ಕಾರ್ಯಪಾಲನೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ನಿಜವಾದ ಅರ್ಥದಲ್ಲಿ ಜನರಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ರೂಪಿಸಲಾಗಿದೆ. ಮಾಹಿತಿಯುಳ್ಳ ನಾಗರಿಕರು ಸಹಜವಾಗಿಯೇ ಸರ್ಕಾರದ ಕಾರ್ಯವೈಖರಿಯನ್ನು ಗಮನಿಸುತ್ತ, ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗಲೆಲ್ಲ ಎಚ್ಚರಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಸರ್ಕಾರದ ಕಾರ್ಯವೈಖರಿಯ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಹುದೊಡ್ಡ ಹೆಜ್ಜೆಯಾಗಿದೆ.

ಮಾಹಿತಿ ಹಕ್ಕು ಕಾಯ್ದೆಯ ಹಿನ್ನೆಲೆ

ಮೊದಲ ಹಂತ- 1975 ರಿಂದ 1996: ಈ ಅವಧಿಯಲ್ಲಿ ಸರ್ಕಾರದ ಮಾಹಿತಿಯನ್ನು ನೀಡಬೇಕೆಂದು ಕೆಲ ಸಾಮಾಜಿಕ ಸಂಘಟನೆಗಳು ಒತ್ತಾಯಿಸುತ್ತಿದ್ದವಾದರೂ ಆ ಕೂಗು ಸಂಘಟಿತ ಬಲ ಪಡೆದುಕೊಂಡಿರಲಿಲ್ಲ. ಆದರೂ 1980 ರಷ್ಟೊತ್ತಿಗೆ ಮಾಹಿತಿ ಹಕ್ಕಿನ ಕುರಿತಾಗಿ ಜಾಗೃತಿ ಮೂಡತೊಡಗಿತ್ತು. ಈ ಮಧ್ಯೆ 1996 ರಲ್ಲಿ ನಾಗರಿಕ ಮಾಹಿತಿ ಹಕ್ಕು ರಾಷ್ಟ್ರೀಯ ಅಭಿಯಾನ ಸಂಘಟನೆಯನ್ನು (The National Campaign for People's Right to Information -NCPRI) ಆರಂಭಿಸಲಾಯಿತು.

ಎರಡನೆಯ ಹಂತ- 1996 ರಿಂದ 2005: ಈ ಅವಧಿಯಲ್ಲಿ ಎನ್​ಸಿಪಿಆರ್​ಐ ಮುಂಚೂಣಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕರಡನ್ನು ತಯಾರಿಸಲಾಗಿದ್ದು ಮಹತ್ವದ ಬೆಳವಣಿಗೆಯಾಗಿತ್ತು. ಇದೇ ಅವಧಿಯಲ್ಲಿ ದೇಶಾದ್ಯಂತ ಹಲವಾರು ಕಡೆಗಳಲ್ಲಿ ಮಾಹಿತಿ ಹಕ್ಕು ಕುರಿತಾದ ಆಂದೋಲನಗಳು ಆರಂಭವಾದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ 2005 ರಲ್ಲಿ ರಾಷ್ಟ್ರೀಯ ಮಾಹಿತಿ ಹಕ್ಕು ಕಾಯ್ದೆ-2005 ನ್ನು ಸಂಸತ್ತಿನಲ್ಲಿ ಪಾಸು ಮಾಡಲಾಯಿತು.

ಮೂರನೆಯ ಹಂತ- 2005 ರಿಂದ ಇಲ್ಲಿಯವರೆಗೆ: 2005 ಕೊನೆಯಿಂದ ಇಲ್ಲಿಯವರೆಗೆ ಅವಲೋಕಿಸಿದಲ್ಲಿ ಮಾಹಿತಿ ಹಕ್ಕು ಕಾಯ್ದೆಯು ಕಾಲಕಾಲಕ್ಕೆ ಬಲಿಷ್ಠವಾಗುತ್ತ ಬಂದಿದೆ ಹಾಗೂ ಅದರ ಸಮರ್ಪಕ ಜಾರಿಗಾಗಿ ಪ್ರಯತ್ನಗಳು ಸಾಗುತ್ತಲೇ ಇವೆ.

ಆರ್​ಟಿಐ ಕಾಯ್ದೆಯ ಬಗ್ಗೆಯೇ ಮಾಹಿತಿ ಇಲ್ಲ!

ದೇಶದ ಗ್ರಾಮೀಣ ಭಾಗದ ಶೇ 64 ರಷ್ಟು ಹಾಗೂ ನಗರ ಪ್ರದೇಶದ ಶೇ 62 ರಷ್ಟು ಜನರಿಗೆ ಆರ್​ಟಿಐ ಕಾಯ್ದೆಯ ಬಗ್ಗೆ ಸೂಕ್ತ ಮಾಹಿತಿಯೇ ಇಲ್ಲ. ದೇಶದ ರಾಜಧಾನಿ ದೆಹಲಿಯ ಶೇ 61 ರಷ್ಟು ಜನ ಆರ್​ಟಿಐ ಕಾಯ್ದೆಯ ಹೆಸರನ್ನು ಕೇಳಿದ್ದಾರೆಯೇ ಹೊರತು ಹಾಗೆಂದರೇನು ಎಂಬುದು ಅವರಿಗೆ ಗೊತ್ತೇ ಇಲ್ಲ ಎಂದು ಬಡಾವಣೆ ಹಾಗೂ ಗಲ್ಲಿಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಆರ್​ಟಿಐ ಕಾಯ್ದೆಯಡಿ ಪಡೆಯಬಹುದಾದ ಮಾಹಿತಿಗಳು ಹೀಗಿವೆ...

* ಸಾರ್ವಜನಿಕ ರಸ್ತೆ, ಕಟ್ಟಡ, ಚರಂಡಿ ಮುಂತಾದುವುಗಳ ನಿರ್ಮಾಣದಲ್ಲಿ ಬಳಸಲಾದ ವಸ್ತುಗಳ ಮಾಹಿತಿ ಇತ್ಯಾದಿ.

* ಯಾವುದೇ ಸಾಮಾಜಿಕ ಅಭಿವೃದ್ಧಿ ಕಾರ್ಯ ಅಥವಾ ಸದ್ಯ ಕಾಮಗಾರಿ ಹಂತದಲ್ಲಿರುವ ಕಾರ್ಯದ ಮಾಹಿತಿ.

* ಸರ್ಕಾರಿ ದಾಖಲೆಗಳು, ಸರ್ಕಾರಿ ನಕಾಶೆಗಳು, ನೋಂದಣಿ ಮಾಹಿತಿ ಹಾಗೂ ದಾಖಲೆಗಳು.

* ಈ ಹಿಂದೆ ಸಲ್ಲಿಸಲಾದ ಅರ್ಜಿಯ ಸ್ಥಿತಿಗತಿಯ ಮಾಹಿತಿ.

ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದ ಪ್ರಮುಖ ಹಗರಣಗಳು...

* ಆದರ್ಶ ಹೌಸಿಂಗ್​ ಸೊಸೈಟಿ ಹಗರಣ: ಆರ್​ಟಿಐ ಕಾರ್ಯಕರ್ತರಾದ ಯೋಗಾಚಾರ್ಯ ಆನಂದಜಿ ಹಾಗೂ ಸಿಮ್​ಪ್ರೀತ್​ ಸಿಂಗ್​ ಎಂಬುವರು ಆರ್​ಟಿಐ ಮೂಲಕ ಪಡೆದ ಮಾಹಿತಿಯಿಂದ ಆದರ್ಶ ಹೌಸಿಂಗ್​ ಸೊಸೈಟಿ ಹಗರಣ ಬಯಲಾಗಿತ್ತು. ಈ ಹಗರಣ ಬಹಿರಂಗದಿಂದ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ ಚವ್ಹಾಣ್​​ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

* 2ಜಿ ಹಗರಣ: 2ಜಿ ತರಂಗಾಂತರ ಹಂಚಿಕೆಯಲ್ಲಿ ಆಗಿನ ಟೆಲಿಕಾಂ ಸಚಿವ ಎ.ರಾಜಾ ಅವರ ಅವಧಿಯಲ್ಲಿ ಅವ್ಯವಹಾರ ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ ಹಗರಣ ಆರ್​ಟಿಐ ಮಾಹಿತಿಯಿಂದಲೇ ಬಹಿರಂಗವಾಗಿತ್ತು.

* ಕಾಮನ್​ವೆಲ್ತ್​ ಗೇಮ್ಸ್​ ಹಗರಣ: ಕಾಮನ್​ವೆಲ್ತ್​ ಗೇಮ್ಸ್​ ಆಯೋಜನೆಯಲ್ಲಿ ನಡೆದ ಹಗರಣವು ಆರ್​ಟಿಐ ಮಾಹಿತಿಯಿಂದ ಬೆಳಕಿಗೆ ಬಂದಿತ್ತು. ಗೇಮ್ಸ್​ ಆಯೋಜನೆಯಲ್ಲಿ ರಾಜಕಾರಣಿ ಸುರೇಶ ಕಲ್ಮಾಡಿಯವರು ನಡೆಸಿದ ಭ್ರಷ್ಟಾಚಾರದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿತ್ತು.

* ರೆಡ್​ ಕ್ರಾಸ್​ ಸೊಸೈಟಿ ಹಗರಣ: ಕಾರ್ಗಿಲ್​ ಯುದ್ಧ ಸಂತ್ರಸ್ತರಿಗೆ ಹಾಗೂ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮೀಸಲಾದ ನಿಧಿಯನ್ನು ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಅಧಿಕಾರಿಗಳು ದುರುಪಯೋಗಪಡಿಸಿಕೊಂಡ ಪ್ರಕರಣವು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಬಹಿರಂಗವಾಗಿತ್ತು.

ಆರ್​ಟಿಐ ಕಾರ್ಯಕರ್ತರ ಮೇಲೆ ಹೆಚ್ಚಾದ ದಾಳಿ ಪ್ರಕರಣಗಳು

ಆರ್​ಟಿಐ ಕಾಯ್ದೆಯಿಂದ ಸರ್ಕಾರದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮೂಡಿದ್ದು ನಿಜವಾದರೂ, ಇದಕ್ಕಾಗಿ ಸತತವಾಗಿ ಶ್ರಮಿಸಿದ ಆರ್​ಟಿಐ ಕಾರ್ಯಕರ್ತರ ಜೀವನ ಮಾತ್ರ ಕಷ್ಟಕರವಾಯಿತು. ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳನ್ನು ಬಯಲಿಗೆಳೆದಿದ್ದಕ್ಕಾಗಿ ಆರ್​ಟಿಐ ಕಾರ್ಯಕರ್ತರು ಬಹುದೊಡ್ಡ ಬೆಲೆಯನ್ನೇ ತೆರಬೇಕಾಯಿತು. 2007 ರಷ್ಟೊತ್ತಿಗೆ 20 ಆರ್​ಟಿಐ ಕಾರ್ಯಕರ್ತರು ಕೊಲೆಗೀಡಾಗಿದ್ದರು ಹಾಗೂ 73 ಜನರ ಮೇಲೆ ಪಟ್ಟಭದ್ರ ಶಕ್ತಿಗಳಿಂದ ದೌರ್ಜನ್ಯ ಎಸಗಲಾಗಿತ್ತು.

Last Updated : Oct 12, 2020, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.