ETV Bharat / bharat

ರೋಗನಿರೋಧಕ ಶಕ್ತಿ ಸದ್ಯದ ಹೊಸ ಕ್ಷಿಪಣಿ: ಅಮೆರಿಕ ವಿಜ್ಞಾನಿ ಡಾ.ಮದ್ದಿಪಾಟಿ ಕೃಷ್ಣರಾವ್ - immunity

ಕೋವಿಡ್ -19 ವಿರುದ್ಧದ ಹೋರಾಡಲು ರೋಗ ನಿರೋಧಕ ಶಕ್ತಿಯ ಪಾತ್ರ ಕುರಿತು ಅಮೆರಿಕದ ಯುವ ವಿಜ್ಞಾನಿ ಡಾ.ಮದ್ದಿಪಾಟಿ ಕೃಷ್ಣ ರಾವ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Immunity is the new missile PLS PUBLISH ASAP
ರೋಗನಿರೋಧಕ ಶಕ್ತಿ ಸದ್ಯದ ಹೊಸ ಕ್ಷಿಪಣಿ
author img

By

Published : May 9, 2020, 11:23 AM IST

'ಒಮೆಗಾ 3' ಹೊಂದಿರುವ ಆಹಾರವು ಈ ಹೋರಾಟಕ್ಕೆ ನಿರ್ಣಾಯಕವಾಗಿದೆ!

ವ್ಯಾಯಾಮದ ಮೂಲಕ ಬಿಳಿ ರಕ್ತ ಕಣಗಳ ಸಕ್ರಿಯಗೊಳಿಸುವಿಕೆ !

ಅರಿಶಿನ, ಎಳ್ಳೆಣ್ಣೆ ಮತ್ತು ಅಗಸೆ ಬೀಜಗಳು ಸಹ ಪ್ರಯೋಜನಕಾರಿ !

ಇವು ‘ಈಟಿವಿ ಭಾರತ್’ ಜೊತೆಗಿನ ಸಂದರ್ಶನದಲ್ಲಿ ಯುಎಸ್ ವಿಜ್ಞಾನಿ ಡಾ.ಮದ್ದಿಪಾಟಿ ಕೃಷ್ಣ ರಾವ್ ಅವರ ಮಾತುಗಳು

ಕೋವಿಡ್ -19 ಒಂದು ಅದೃಶ್ಯ ಶತ್ರುವಿನೊಂದಿಗೆ ನಡೆಯುತ್ತಿರುವ ಹೋರಾಟ ಶತ್ರು ಯಾವ ದಿಕ್ಕಿನಿಂದ ಹೊಡೆಯುತ್ತಾನೆ ಎಂಬುದರ ಕುರಿತು ನಮ್ಮಲ್ಲಿ ಯಾರಿಗೂ ಖಚಿತವಿಲ್ಲ.

ಇಂತಹ ಸಂದರ್ಭಗಳಲ್ಲಿ, ಈ ಕೆಟ್ಟ ವೈರಸ್ಸಿನ ಮಾರಣಾಂತಿಕ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಮ್ಮಲ್ಲಿ ಪ್ರತಿಯೊಬ್ಬರೂ ಸಜ್ಜುಗೊಳ್ಳಬೇಕು. ನಮ್ಮ ದೇಹವು ಈ ವೈರಸ್ಸನ್ನು ನಿಭಾಯಿಸಲು ಮತ್ತು ಪ್ರತಿದಾಳಿ ಮಾಡಲು ಸಮರ್ಥವಾಗಿಯೇ, ಅದು ನಮ್ಮ ದೇಹಕ್ಕೆ ಪ್ರವೇಶಿಸಿದರೆ ಎದುರಿಸಲು ತಯಾರಾಗಿದ್ದೇವೆಯೆ ಎಂದು ನಾವು ವಿಶೇಷವಾಗಿ ನಮ್ಮನ್ನು ಸ್ವಯಂ ಪರೀಕ್ಷೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದಲ್ಲದೆ, ವೈರಸ್ ಅನ್ನು ನಿರ್ವಹಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ತೆಗೆದುಕೊಳ್ಳುತ್ತಿರುವ ಕ್ರಮಗಳು ಯಾವುವು?

ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಏಕೈಕ ಮಾರ್ಗವಾಗಿದೆ ಎಂದು ಅಮೆರಿಕದ ಡೆಟ್ರಾಯಿಟ್‌ನ ಪ್ರಮುಖ ವಿಜ್ಞಾನಿ ಡಾ.ಮದ್ದಿಪಾಟಿ ಕೃಷ್ಣ ರಾವ್ ಹೇಳುತ್ತಾರೆ. ಡಾ.ಕೃಷ್ಣ ರಾವ್ ಅವರು ವೇಯ್ನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಲಿಪಿಡೋಮಿಕ್ ಕೋರ್ ಫೆಸಿಲಿಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಮೆಗಾ -3 ಫ್ಯಾಟಿ ಆ್ಯಸಿಡ್ಸ್ ಸಮೃದ್ಧವಾಗಿರುವ ಆಹಾರವನ್ನು ನಮ್ಮ ದೈನಂದಿನ ಡಯಟ್‍ನ ಭಾಗವಾಗಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಡಾ. ಕೃಷ್ಣ ರಾವ್ ಹೇಳುತ್ತಾರೆ, ಫ್ಯಾಟಿ ಆ್ಯಸಿಡ್ಸ್ ಬಗ್ಗೆ ಸಾಕಷ್ಟು ವ್ಯಾಪಕವಾದ ಸಂಶೋಧನೆಗಳನ್ನು ನಡೆಸುತ್ತಿರುವ ಡಾ. ಕೃಷ್ಣ ರಾವ್ ಅವರು ಇದನ್ನು ಇನ್ಫ್ಲೇಮೇಷನ್ ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಬಳಸಬಹುದು ಮತ್ತು ಮಾನವರಲ್ಲಿ ಹೆಚ್ಚಿದ ಉರಿಯೂತದಿಂದಾಗಿ (ಇನ್ಫ್ಲೇಮೇಷನ್) ಬಹುಪಾಲು ಮಾನವ ಕಾಯಿಲೆಗಳು ಉಂಟಾಗುತ್ತವೆ ಎಂದು ಅವರು ಹೇಳಿದರು. ಸುಮಾರು 5-10 ಪ್ರತಿಶತದಷ್ಟು ಕೊರೊನಾ ಸಾವುಗಳು ಈ ಸ್ಥಿತಿಯಿಂದಲೇ ಸಂಭವಿಸುತ್ತವೆಯೆಂದೂ. ಈಟಿವಿ ಭಾರತ್ ಅವರೊಂದಿಗೆ ನಡೆಸಿದ ದೂರವಾಣಿ ಸಂದರ್ಶನದಲ್ಲಿ, ಡಾ. ಕೃಷ್ಣ ರಾವ್ ಅವರು ಇನ್ಫ್ಲೇಷನ್ ಎಂದರೇನು, ಈ ಇನ್ಫ್ಲೇಷನ್ ಮತ್ತು ಕೊರೊನಾ ನಡುವಿನ ಸಂಬಂಧವೇನು, ರೋಗನಿರೋಧಕ ಶಕ್ತಿ ಎಂದರೆ ಏನು ಮತ್ತು ಮಾನವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಧಾನಗಳು ಯಾವುವು ಎಂಬ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಾನವರಲ್ಲಿ ಇನ್ಫ್ಲೇಮೇಷನ್ ನಿಯಂತ್ರಿಸುವಲ್ಲಿ ಫ್ಯಾಟಿ ಆ್ಯಸಿಡ್ಸ್ ವಹಿಸುವ ಪಾತ್ರ ಇತ್ಯಾದಿ ಕುರಿತು ಅವರು ಹೇಳಿದುದರ ಕೆಲವು ಮುಖ್ಯಾಂಶಗಳು ಇಲ್ಲಿವೆ ..

ಉಪಶಮನದ/ ಗುಣಪಡಿಸುವ ಪ್ರಕ್ರಿಯೆ

ದೇಹವು ದೈಹಿಕವಾಗಿ ಗಾಯಗೊಂಡಾಗ, ದೇಹದಲ್ಲಿರುವ ಬಿಳಿ ರಕ್ತ ಕಣಗಳು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತವೆ, ಮತ್ತು ರೋಗಕಾರಕಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ದೇಹಕ್ಕೆ ಪ್ರವೇಶಿಸಿದಾಗ ಈ ಬಿಳಿ ರಕ್ತ ಕಣಗಳು ರೋಗಕಾರಕಗಳನ್ನು ದೇಹದಿಂದ ಹೊರಗೆ ತಳ್ಳುತ್ತವೆ. ಎರಡೂ ಸಂದರ್ಭಗಳಲ್ಲಿ, ರೋಗಕಾರಕಗಳನ್ನು ಗುಣಪಡಿಸುವ ಮತ್ತು ಹೊರಹಾಕುವ ಈ ಪ್ರಕ್ರಿಯೆಯನ್ನು ಇನ್ಫ್ಲೇಮೇಷನ್ ಎಂದು ಕರೆಯಲಾಗುತ್ತದೆ. ಇದು ದೇಹದ ಹಾನಿಗೊಳಗಾದ ಭಾಗವನ್ನು ಗುಣಪಡಿಸುವ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ನಕಾರಾತ್ಮಕ ರೀತಿಯಲ್ಲಿ ನೋಡಬಾರದು. ಅದು ಸಂಭವಿಸದಿದ್ದರೆ ... ದೇಹವು ಯಾವುದೇ ಬಾಹ್ಯ ಅಥವಾ ಆಂತರಿಕ ಗಾಯಗಳಿಗೆ ಸ್ಪಂದಿಸುವುದಿಲ್ಲ. ಇನ್ಫ್ಲೇಮೇಷನ್ ನಾಲ್ಕು ರೋಗಲಕ್ಷಣಗಳಿಂದ ನಿರೂಪಿಸಲ್ಪಟ್ಟಿದೆ: ಊತ / ಉರಿಯೂತ/ಇನ್ಫ್ಲೇಮೇಷನ್ , ನೋವು, ಕೆಂಪುತನ ಮತ್ತು ಜ್ವರ.

ಹಾನಿಕಾರಕ ರೋಗಕಾರಕಗಳನ್ನು ಪರೀಕ್ಷಿಸುವುದು

ವೈರಸ್‍ಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸಿದಾಗ ... ಬಿಳಿ ರಕ್ತ ಕಣಗಳು ತಕ್ಷಣವೇ ಆ ಕ್ಷೇತ್ರವನ್ನು ಪ್ರವೇಶಿಸಿ ಅವುಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಕೆಂಪು ರಕ್ತ ಕಣಗಳು ಕೇವಲ ಒಂದೇ ರೀತಿಯವು. ಆದರೆ, ಬಿಳಿ ರಕ್ತ ಕಣಗಳು ಹಲವು ಬಗೆಯಲ್ಲಿವೆ. ಪ್ರತಿಯೊಂದು ಪ್ರಕಾರವು ಒಂದು ವಿಶಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ. ಕೆಲವು ಬಿಳಿ ರಕ್ತ ಕಣಗಳು ಕೆಲವು ವೈರಸ್‌ಗಳನ್ನು ಕೊಲ್ಲುವ ಕಾರ್ಯ ನಿರ್ವಹಿಸುತ್ತವೆ, ಕೆಲವು ಜೀವಕೋಶಗಳು ವೈರಸ್‌ಗಳನ್ನು ಹೊರಹಾಕುವ ಕೆಲಸ ಮಾಡುತ್ತವೆ ಮತ್ತು ಕೆಲವು ಜೀವಕೋಶಗಳು ಹಾನಿಗೊಳಗಾದ ಅಂಗ ಭಾಗದಲ್ಲಿ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಉದ್ದೇಶಿತವಾಗಿವೆ. ಶ್ವಾಸಕೋಶ, ಜೀರ್ಣಾಂಗ ವ್ಯವಸ್ಥೆ ಮುಂತಾದ ವಿವಿಧ ಸ್ಥಳಗಳಲ್ಲಿ ವಿಭಿನ್ನ ಬಿಳಿ ರಕ್ತ ಕಣಗಳನ್ನು ನೋಡಬಹುದು ಮತ್ತು ಅವು ಆಯಾ ಕಾರ್ಯಗಳನ್ನು ನಿರ್ವಹಿಸುತ್ತವೆ.

ಬ್ಲೀಚಿಂಗ್ ಏಜೆಂಟ್‌ಗಳಿಗಿಂತ ಕೆಟ್ಟದಾದವು ...

ಮಾನವ ದೇಹದೊಳಗೆ ಪ್ರವೇಶಿಸುವ ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ನಾಶಮಾಡಲು ಮಾನವ ದೇಹದಲ್ಲಿ ಒಂದು ದೊಡ್ಡ ಕ್ರಿಯಾತ್ಮಕ ಪ್ರಕ್ರಿಯೆ ನಡೆಯುತ್ತದೆ. ಮೊದಲನೆಯದಾಗಿ, ಒಮೆಗಾ- 6 ಫ್ಯಾಟಿ ಆ್ಯಸಿಡ್ಸ್ ಪ್ರೊಸ್ಟಗ್ಲಾಂಡಿನ್‌ ಮತ್ತು ಲ್ಯುಕೋಟ್ರಿಯನ್ಸ್ ಎಂಬ ಸಂಯುಕ್ತಗಳನ್ನು ಬಿಡುಗಡೆ ಮಾಡುವ ಮೂಲಕ ಕೆಲಸ ಮಾಡಲು ಪ್ರಾರಂಭಿಸುತ್ತವೆ. ಈ ಸಂಯುಕ್ತಗಳು ಬಿಳಿ ರಕ್ತ ಕಣಗಳನ್ನು ಆಕರ್ಷಿಸುತ್ತವೆ. ತಕ್ಷಣ ಒಂದು ರೀತಿಯ ಬಿಳಿ ರಕ್ತ ಕಣಗಳು ಕ್ಷೇತ್ರಕ್ಕೆ ಪ್ರವೇಶಿಸುತ್ತವೆ. ಇತರ ಬಿಳಿ ರಕ್ತ ಕಣಗಳನ್ನು ಆಕರ್ಷಿಸಲು ಅವು ಸೈಟೊಕಿನ್ಸ್ ಎಂಬ ಪ್ರೋಟೀನ್ ಅಣುಗಳನ್ನು ಬಿಡುಗಡೆ ಮಾಡುತ್ತವೆ. ಸೈಟೊಕಿನ್ಸ್ ಹಲವಾರು ರೂಪಾಂತರಗಳನ್ನು ಹೊಂದಿವೆ. ಸಮಸ್ಯೆ ಇರುವ ಅಂಗದಲ್ಲಿ ಕೆಲಸ ಮಾಡುವ ಬಿಳಿ ರಕ್ತ ಕಣಗಳನ್ನು ಆಕರ್ಷಿಸಲು ಸೈಟೋಕಿನ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಬಿಳಿ ರಕ್ತ ಕಣಗಳು ಬಂದು ಸೂಕ್ಷ್ಮಜೀವಿಗಳನ್ನು ತುಂಡುಗಳಾಗಿ ಒಡೆಯುತ್ತವೆ. ಹಾನಿಕಾರಕ ಜೀವಿಗಳನ್ನು ಬರಿದಾಗಿಸುವ ಮತ್ತು ಹೊರಹಾಕುವ ಪ್ರಕ್ರಿಯೆಯ ಭಾಗವಾಗಿ ಅವು ಅತ್ಯಂತ ಶಕ್ತಿಯುತ ಮತ್ತು ಮಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಬಿಳಿ ಕೋಶಗಳಿಂದ ಬಿಡುಗಡೆಯಾಗುವ ಈ ರಾಸಾಯನಿಕಗಳು ನಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ನಾವು ಬಳಸುವ ಸಾಮಾನ್ಯ ಬ್ಲೀಚಿಂಗ್ ಪೌಡರಿಗಿಂತ ಹೆಚ್ಚು ವಿಷಕಾರಿಯಾಗಿವೆ. ಆದ್ದರಿಂದ, ಕೆಲವೊಮ್ಮೆ, ಆ ರಾಸಾಯನಿಕಗಳು ಮಾನವನ ದೇಹದ ಸಾಮಾನ್ಯ ಕೋಶಗಳನ್ನು ಸಹ ಹಾನಿಗೊಳಿಸುತ್ತವೆ. ಈ ಇಡೀ ಪ್ರಕ್ರಿಯೆಯನ್ನು ಇನ್ಫ್ಲೇಮೇಷನ್ ಎಂದು ಕರೆಯಲಾಗುತ್ತದೆ.

ಇನ್ಫ್ಲೇಮೇಷನ್ ಕಡಿಮೆ ಮಾಡುವ ಅಂಶಗಳು

ಹಾನಿಕಾರಕ ಸೂಕ್ಷ್ಮಜೀವಿಗಳನ್ನು ನಾಶಮಾಡುವ ಪ್ರಕ್ರಿಯೆಯಲ್ಲಿ ಇನ್ಫ್ಲೇಮೇಷನ್ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಗಾಯವು ಗುಣಮುಖವಾಗಿದೆ ಎಂದು ತೋರಿದಾಗ, ಇನ್ಫ್ಲೇಮೇಷನ್ ಗೆ ಕಾರಣವಾಗುವ ಬಿಳಿ ರಕ್ತ ಕಣಗಳು ನಿಧಾನವಾಗಿ ಅವುಗಳ ರೂಪವನ್ನು ಬದಲಾಯಿಸುತ್ತವೆ. ಬಿಳಿ ಕೋಶಗಳು ಮತ್ತೆ ಆಕಾರಕ್ಕೆ ಬರುವ ಈ ಪ್ರಕ್ರಿಯೆಗೆ ಒಮೆಗಾ -3 ಕೊಬ್ಬಿನಾಮ್ಲಗಳು ಸಹಾಯ ಮಾಡುತ್ತವೆ. ಫ್ಯಾಟಿ ಆ್ಯಸಿಡ್‍ನಿಂದ ಬಿಡುಗಡೆಯಾಗುವ ಕೆಲವು ರೀತಿಯ ಘಟಕಗಳು ಇನ್ಫ್ಲೇಮೇಷನ್ ಕಡಿಮೆ ಮಾಡುತ್ತದೆ. ಈ ಪ್ರಕ್ರಿಯೆಯನ್ನು 'ಇನ್ಫ್ಲೇಮೇಷನ್ ರೆಸಲ್ಯೂಶನ್' ಅಥವಾ 'ಒಮೆಗಾ- 3 ಫ್ಯಾಟಿ ಆಸಿಡ್ ರೆಸಲ್ಯೂಶನ್' ಎಂದು ಕರೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಮಾನವ ದೇಹದಲ್ಲಿ ಒಮೆಗಾ -3 ಕೊಬ್ಬುಗಳು ಸಾಕಾಗದಿದ್ದರೆ ಅಥವಾ ದೇಹದಲ್ಲಿನ ಇನ್ಫ್ಲೇಮೇಷನ್ ನಿಯಂತ್ರಿಸಬಲ್ಲ ಸಂಯುಕ್ತಗಳ ಬಿಡುಗಡೆಯಲ್ಲಿ ಸಮಸ್ಯೆಗಳಿದ್ದರೆ, ಇನ್ಫ್ಲೇಮೇಷನ್ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತದೆ. ಮತ್ತು ಈ ಪರಿಸ್ಥಿತಿಯು ನಿರ್ದಿಷ್ಟ ವ್ಯಕ್ತಿಯ ಆರೋಗ್ಯದಲ್ಲಿ ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು.

ಸೈಟೊಕಿನ್ಸ್ ದಿಢೀರ್ ಪ್ರವಾಹ

ದೇಹದಲ್ಲಿ ಅನಿಯಂತ್ರಿತ ಇನ್ಫ್ಲೇಮೇಷನ್ ಉಂಟಾಗುವ ಅನೇಕ ಅಪಾಯಗಳಿವೆ. ಹೃದ್ರೋಗ, ಕ್ಯಾನ್ಸರ್ ಮತ್ತು ಸಂಧಿವಾತದಂತಹ ಅನೇಕ ಕಾಯಿಲೆಗಳು ಇನ್ಫ್ಲೇಮೇಷನ್ ನಿಯಂತ್ರಣದ ಕೊರತೆಯಿಂದ ಉಂಟಾಗುತ್ತವೆ. ಅವುಗಳನ್ನು ದೀರ್ಘಕಾಲದ ಇನ್ಫ್ಲೇಮೇಷನ್ ಕಾಯಿಲೆಗಳು ಎಂದು ಕರೆಯಲಾಗುತ್ತದೆ. ಪ್ರತಿ 100 ಕ್ಯಾನ್ಸರ್ ರೋಗಿಗಳಲ್ಲಿ ಸುಮಾರು ಐದು ಜನ ಜಿನೆಟಿಕ್ ಕಾರಣಕ್ಕೆ ಬಾಧಿತರಾಗಿದ್ದರೆ, ಉಳಿದ 95 ಜನರಿಗೆ ಕೆಲವು ರೀತಿಯ ಇನ್ಫ್ಲೇಮೇಷನ್ ಕಾರಣದಿಂದ ಈ ಕಾಯಿಲೆ ಬಂದಿದೆ !! ಕೋವಿಡ್ -19 ರೋಗಿಗಳ ವಿಷಯಕ್ಕೆ ಬಂದರೆ, ಸುಮಾರು 90-95 ಪ್ರತಿಶತದಷ್ಟು ಸೋಂಕಿತ ರೋಗಿಗಳಲ್ಲಿ, ರೋಗಿಯ ದೇಹದಲ್ಲಿ ಇರುವ ಬಿಳಿ ರಕ್ತ ಕಣಗಳು ವೈರಸ್ ಅನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತವೆ ಮತ್ತು ಪ್ರಕ್ರಿಯೆಯಲ್ಲಿ ರೋಗಿಯ ರೋಗನಿರೋಧಕ ಮಟ್ಟವೂ ಹೆಚ್ಚುತ್ತಿದೆ. ಆದಾಗ್ಯೂ, ಉಳಿದ 5-10 ಪ್ರತಿಶತದಷ್ಟು ರೋಗಿಗಳು ಅನಿಯಂತ್ರಿತ ಇನ್ಫ್ಲೇಮೇಷನ್ ಗೆ ಗುರಿಯಾಗುತ್ತಿದ್ದಾರೆ, ಇದು ಅವರ ಸಾವಿಗೆ ಕಾರಣವಾಗುವ ಅವಕಾಶವಿರುವುದರಿಂದ ಆತಂಕಕ್ಕೆ ಕಾರಣವಾಗಿದೆ. ಅಂತಹ ರೋಗಿಗಳಲ್ಲಿ, ದೇಹದಲ್ಲಿನ ಇನ್ಫ್ಲೇಮೇಷನ್ ಪ್ರಕ್ರಿಯೆಗೆ ಕೊಡುಗೆ ನೀಡುವ ಸೈಟೊಕಿನ್ಸ್ ಉಲ್ಬಣವಾಗಿ ಬಿಡುಗಡೆಯಾಗುತ್ತವೆ. ಇದನ್ನು ‘ಸೈಟೊಕಿನ್ ಚಂಡಮಾರುತ’ ಎಂದು ಕರೆಯಲಾಗುತ್ತದೆ.

ಜಲಸಸ್ಯಗಳು ಮತ್ತು ಒಮೆಗಾ -3 ...

ಒಮೆಗಾ -3 ಫ್ಯಾಟಿ ಆ್ಯಸಿಡ್ಸ್ ಮಾನವ ದೇಹದ ಎಲ್ಲಾ ಅಂಗಗಳಲ್ಲಿ ಹೇರಳವಾಗಿದ್ದರೂ, ಅವು ಮಾನವನ ಮೆದುಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಆದ್ದರಿಂದ, ಅವುಗಳನ್ನು ರಚಿಸುವ ಸಾಮರ್ಥ್ಯವು ಮಾನವ ದೇಹಕ್ಕೆ ತುಂಬಾ ಸಣ್ಣ ಪ್ರಮಾಣದಲ್ಲಿದೆ. ಇವು ತಾಯಿಯ ಹಾಲಿನಲ್ಲಿ ಸಮೃದ್ಧವಾಗಿವೆ ಮತ್ತು ಮೀನುಗಳನ್ನು ತಿನ್ನುವುದು ಮತ್ತು ಮೀನಿನ ಎಣ್ಣೆಯಿಂದ ತುಂಬಿದ ಕ್ಯಾಪ್ಸೂಲ್‍ಗಳನ್ನನು ತೆಗೆದುಕೊಳ್ಳುವುದರ ಮೂಲಕವೂ ಸಹ.

ಈ ಕೆಳಗಿನವುಗಳನ್ನು ಪ್ರಯತ್ನಿಸಬಹುದು ..

· ಪ್ರತಿದಿನ, ಮೀನಿನ ಎಣ್ಣೆಯಿಂದ ಮಾಡಿದ ಒಂದು ಕ್ಯಾಪ್ಸೂಲ್ ಮತ್ತು ಇನ್ನೊಂದು ಮಲ್ಟಿ-ವಿಟಮಿನ್ ಕ್ಯಾಪ್ಸೂಲ್ ತೆಗೆದುಕೊಳ್ಳಿ.

· ಅರಿಶಿನವು ಆ್ಯಂಟಿ ಇನ್ಫ್ಲೇಮೆಟರಿ ಗುಣಗಳನ್ನು ಹೊಂದಿದೆ. ಆದಾಗ್ಯೂ, ಇದನ್ನು ಮಧ್ಯಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಮತ್ತು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು. ಅಗಸೆ ಬೀಜಗಳಲ್ಲಿ ಕೂಡಾ ಒಮೆಗಾ- 3 ಫ್ಯಾಟ್ಸ್ ಇರುತ್ತವೆ.

· ನಿಮ್ಮ ದೇಹದ ಬೆವರುವಿಕೆಗೆ ಸಹಾಯ ಮಾಡಲು ಪ್ರತಿದಿನ 20-30 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

· ಆವಿ ತೆಗೆದುಕೊಳ್ಳುವಿಕೆ (ವ್ಯಾಪೊರೈಸೇಷನ್) ಶ್ವಾಸಕೋಶವನ್ನು ತೆರೆಯುತ್ತದೆ, ಅಂದರೆ ಶ್ವಾಸಕೋಶವು ಆಮ್ಲಜನಕವನ್ನು ಚೆನ್ನಾಗಿ ಪಡೆಯುತ್ತದೆ. ಬಿಳಿ ರಕ್ತ ಕಣಗಳು ಸಕ್ರಿಯವಾಗಿರಲು ಆಮ್ಲಜನಕ ಅತ್ಯಗತ್ಯ.

· ಜ್ವರದ ಸಂದರ್ಭದಲ್ಲಿ ಪ್ಯಾರೆಸಿಟಮಾಲ್ ತೆಗೆದುಕೊಳ್ಳಬೇಕು. 'ನಾನ್-ಸ್ಟೀರಾಯ್ಡ್ ಇನ್ಫ್ಲೇಮೇಷನ್ ಔಷಧಿಗಳ' ಬಳಕೆ ಒಳ್ಳೆಯದಲ್ಲ. ವೈದ್ಯರು ಸೂಚಿಸಿದರೆ ಮಾತ್ರ ಆಸ್ಪಿರಿನ್ ತೆಗೆದುಕೊಳ್ಳಬೇಕು.

ಈ ಅದ್ಭುತ ಶಕ್ತಿ ಎಂದರೇನು?

ಲಿಂಫೋಸೈಟ್ಸ್ ಎಂದು ಕರೆಯಲ್ಪಡುವ ಬಿಳಿ ರಕ್ತ ಕಣಗಳು ಮಾನವ ದೇಹಕ್ಕೆ ಪ್ರವೇಶಿಸುವ ವೈರಸ್‌ಗಳನ್ನು ಜೀರ್ಣಿಸಿಕೊಳ್ಳುತ್ತವೆ. ಅದೇ ವೈರಸ್ ನಮ್ಮ ದೇಹಕ್ಕೆ ಮತ್ತೆ ಪ್ರವೇಶಿಸಿದಾಗ, ಈ ಜೀವಕೋಶಗಳು ತಕ್ಷಣ ಅದನ್ನು ಪತ್ತೆ ಮಾಡುತ್ತದೆ ಮತ್ತು ವೈರಸ್‌ನಿಂದ ದೇಹಕ್ಕೆ ಹಾನಿಯಾಗದಂತೆ ರಕ್ಷಿಸಲು ಆ್ಯಂಟಿ ಬಾಡೀಸ್ ಎಂಬ ಪ್ರೋಟೀನ್‌ಗಳನ್ನು ಬಿಡುಗಡೆ ಮಾಡುತ್ತದೆ. ದೇಹವು ಮತ್ತೆ ಅದೇ ವೈರಸ್‌ನಿಂದ ಸೋಂಕಿಗೆ ಒಳಗಾದಾಗ, ಈ ಆ್ಯಂಟಿ ಬಾಡೀಸ್ ಅವುಗಳನ್ನು ಪತ್ತೆ ಮಾಡುತ್ತವೆ ಮತ್ತು ವೈರಸ್ ದೇಹಕ್ಕೆ ಪ್ರವೇಶಿಸಿದ ತಕ್ಷಣ ಅದನ್ನು ಆಕ್ರಮಿಸುತ್ತವೆ. ನಂತರ ವೈರಸ್‌ಗಳನ್ನು ಆ ರೀತಿಯ ಬಿಳಿ ರಕ್ತ ಕಣಗಳಿಗೆ ತಲುಪಿಸಲಾಗುತ್ತದೆ ಮತ್ತು ಅವುಗಳನ್ನು ಜೀರ್ಣಾಂಗವ್ಯೂಹಕ್ಕೆ ಕೊಂಡೊಯ್ಯುತ್ತದೆ ಮತ್ತು ಆ ಮೂಲಕ ಅವುಗಳನ್ನು ಹೊರಹಾಕುತ್ತದೆ. ಒಮ್ಮೆ ವೈರಸ್ ಸೋಂಕಿಗೆ ಒಳಗಾದ ದೇಹವು ಪದೇ ಪದೇ ಸೋಂಕಿಗೆ ಒಳಗಾಗಲು ಅದು ಕಾರಣವಾಗಿದೆ, ಮನುಷ್ಯನಿಗೆ ಯಾವುದೇ ಅಪಾಯವಿಲ್ಲ. ಇದನ್ನು ರೋಗನಿರೋಧಕ ಶಕ್ತಿ ಎಂದು ಕರೆಯಲಾಗುತ್ತದೆ.

ಲಸಿಕೆ ಹಾಕಲು ಕಾರಣ ...

ವ್ಯಾಕ್ಸಿನೇಷನ್ (ಲಸಿಕೆ) ಅನ್ನು ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರ ಮಾಡಲಾಗುತ್ತದೆ. ವ್ಯಾಕ್ಸಿನೇಷನ್ ವಿಧಾನದ ಮೂಲಕ ತಟಸ್ಥಗೊಳಿಸಿದ ವೈರಸ್ ಅನ್ನು ರಕ್ತಕ್ಕೆ ಚುಚ್ಚಲಾಗುತ್ತದೆ. ನಿಷ್ಕ್ರಿಯಗೊಂಡ ಈ ವೈರಸ್ ನಮಗೆ ಯಾವುದೇ ಹಾನಿ ಮಾಡಲು ಸಾಧ್ಯವಾಗುವುದಿಲ್ಲ. ಆದರೂ, ನಮ್ಮ ದೇಹದಲ್ಲಿನ ಬಿಳಿ ರಕ್ತ ಕಣಗಳು ಅದನ್ನು ಪತ್ತೆಹಚ್ಚುತ್ತವೆ ಮತ್ತು ತಕ್ಷಣವೇ ಪ್ರತಿಕಾಯಗಳನ್ನು ತಯಾರಿಸಲು ಪ್ರಾರಂಭಿಸುತ್ತವೆ. ಹೀಗೆ ದೇಹವು ಹೇಳಿದ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ಒಬ್ಬ ವ್ಯಕ್ತಿಯಲ್ಲಿ ಹೀಗೆ ರಚಿಸಲಾದ ಪ್ರತಿಕಾಯಗಳನ್ನು ಅದೇ ವೈರಸ್‌ನಿಂದ ಸೋಂಕಿಗೆ ಒಳಗಾದ ಇನ್ನೊಬ್ಬ ವ್ಯಕ್ತಿಗೆ ಚುಚ್ಚಬಹುದು. ಆದಾಗ್ಯೂ, ಈ ಪ್ರತಿಕಾಯಗಳು ಇತರ ವ್ಯಕ್ತಿಗೆ ಪೀಡಿತ ವ್ಯಕ್ತಿಯಲ್ಲಿ ತಾತ್ಕಾಲಿಕ ವಿನಾಯಿತಿ ಮಾತ್ರ ನೀಡಬಲ್ಲವು ಮತ್ತು ಅದು ಶಾಶ್ವತವಲ್ಲ. ಒಂದೇ ವೈರಸ್ ಅನ್ನು ಕಂಡುಹಿಡಿಯಲು ಒಂದೇ ಆ್ಯಂಟಿ ಬಾಡಿ ಸಾಕಾಗುತ್ತದೆ. ಆದರೂ ನಮ್ಮ ದೇಹವು ಒಂದೇ ವೈರಸ್‌ಗೆ ವಿಭಿನ್ನ ಆ್ಯಂಟಿ ಬಾಡಿ ಕೋಶಗಳನ್ನು ಉತ್ಪಾದಿಸುತ್ತದೆ. ಹೀಗೆ ರಚಿಸಲಾದ ಆ್ಯಂಟಿ ಬಾಡಿಗಳು ಸಾಮಾನ್ಯವಾಗಿ ದೇಹದಾದ್ಯಂತ ಜೀವಿತಾವಧಿಯಲ್ಲಿ ಉಳಿಯುತ್ತವೆ.

ಪ್ರತಿಜೀವಕಗಳು (ಆ್ಯಂಟಿ ಬಯಾಟಿಕ್ಸ್) ಕಾರ್ಯನಿರ್ವಹಿಸುವುದಿಲ್ಲ

· ಕೊರೊನಾ ವೈರಸ್ಸಿಗೆ ಚಿಕಿತ್ಸೆ ನೀಡಲು ಪ್ರಸ್ತುತ ಯಾವುದೇ ಔಷಧಿ ಲಭ್ಯವಿಲ್ಲ. ಪ್ರತಿಜೀವಕಗಳು ಯಾವುದೇ ವೈರಸ್‌ಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಕರೋನಾ-ಸೋಂಕಿತ ದೇಹವು ದುರ್ಬಲವಾಗುವುದನ್ನು ಮತ್ತು ಇತರ ಬ್ಯಾಕ್ಟೀರಿಯಾದ ಸೋಂಕುಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯಲು ಮಾತ್ರ ಪ್ರತಿಜೀವಕಗಳನ್ನು ಸೂಚಿಸಲಾಗುತ್ತಿದೆ. ನಿಮ್ಮ ಕೈಗಳನ್ನು ಸ್ವಚ್ಛವಾಗಿಡುವುದು, ದೈಹಿಕ ದೂರವನ್ನು ಅಭ್ಯಾಸ ಮಾಡುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸುವುದರಿಂದ ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ‍್ಳಬಹುದು.

· ಕೊರೋನಾ ವೈರಸ್ಸಿನಲ್ಲಿನ ಜಿನೆಟಿಕ್ ರೂಪಾಂತರವು ತ್ವರಿತ ವೇಗದಲ್ಲಿ ನಡೆಯುತ್ತಿದೆ. ಅದು ಜೀವಕೋಶವಲ್ಲ. ಕೊರೋನಾ ವೈರಸ್ ಜೀವಂತವಾಗಿರುವುದು ಅದು ಬೇರೆ ಯಾವುದೇ ಜೀವಕೋಶದೊಳಗೆ ಪ್ರವೇಶಿಸಿದಾಗ ಮಾತ್ರ. ಮಾನವನ ಚರ್ಮವು ಅಂತಹ ವೈರಸ್‌ಗಳನ್ನು ವಿರೋಧಿಸುವ ಶಕ್ತಿಯನ್ನು ಹೊಂದಿದೆ. ಆದರೆ ವೈರಸ್ ಬಾಯಿ, ಮೂಗು, ಕಿವಿ ಮತ್ತು ಕಣ್ಣುಗಳ ಮೂಲಕ ಪ್ರವೇಶಿಸಿದಾಗ ರಕ್ತದೊಂದಿಗೆ ನೇರವಾಗಿ ಬೆರೆಯುತ್ತದೆ.

· ಕೊರೋನಾ ವೈರಸ್ ನೇರವಾಗಿ ಮಾನವ ಜೀರ್ಣಾಂಗ ವ್ಯವಸ್ಥೆಗೆ ಹೋದರೆ ಯಾವುದೇ ಹಾನಿ ಇಲ್ಲ. ಆದರೆ, ಬಾಯಿಗೆ ಪ್ರವೇಶಿಸಿದ ನಂತರ, ರಕ್ತದ ಹರಿವಿಗೆ ಇಳಿಯದೆ ನೇರವಾಗಿ ಜೀರ್ಣಾಂಗವ್ಯೂಹಕ್ಕೆ ಹೋಗಲು ಯಾವುದೇ ಅವಕಾಶವಿಲ್ಲ. ವೈರಸ್ ರಕ್ತಪ್ರವಾಹಕ್ಕೆ ಪ್ರವೇಶಿಸಿದಾಗ ಮಾತ್ರ ಇನ್ಫ್ಲೇಮೇಷನ್ ಹೆಚ್ಚಾಗುತ್ತದೆ.

· ಮಾನವನ ದೇಹವು ಮೊದಲ ಬಾರಿಗೆ ವೈರಸ್ ಸೋಂಕಿಗೆ ಒಳಗಾದಾಗ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ. ವೈರಸ್ ಮೂಲಕ ಅದೇ ವ್ಯಕ್ತಿಯನ್ನು ಮತ್ತೆ ಸೋಂಕು ತಗುಲಿದಾಗಲೆಲ್ಲಾ, ಈ ಪ್ರತಿಕಾಯಗಳು ಆಕ್ರಮಣ ಮಾಡಲು ಮತ್ತು ವೈರಸ್ ತೊಡೆದುಹಾಕಲು ಸಿದ್ಧವಾಗಿರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.