ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (2019-20) ಭಾರತದ ಬೆಳವಣಿಗೆಯ ಅಂದಾಜನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶೇ. 4.8% ಕ್ಕೆ ಕಡಿತಗೊಳಿಸಿದ್ದು, ಇದನ್ನು 'ನೆಗೆಟಿವ್ ಸರ್ಪ್ರೈಜ್' ಎಂದು ಉಲ್ಲೇಖಿಸಿದೆ.
ಕಳೆದ ವರ್ಷದ ಜಾಗತಿಕ ಆರ್ಥಿಕ ಬೆಳವಣಿಗೆಗೆ ಹೋಲಿಸಿದರೆ ಭಾರತದ ಆರ್ಥಿಕ ಕುಸಿತವು ಶೇ 0.1 ರಷ್ಟು ಕಡಿತವಾಗಿದೆ. ಇನ್ನು 2021 ರ ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 0.2 ರಷ್ಟು ಕಡಿತಗೊಂಡಿದ್ದು, ಶೇ.3.4 ಕ್ಕೆ ಇಳಿದಿದೆ ಎಂದು ಐಎಂಎಫ್ನ ವರ್ಲ್ಡ್ ಎಕನಾಮಿಕ್ ಔಟ್ ಲುಕ್ (WEO) ತಿಳಿಸಿದೆ.
ಬ್ಯಾಂಕೇತರ ಹಣಕಾಸು ವಲಯದ ಒತ್ತಡ ಹಾಗೂ ಸಾಲದ ಬೆಳವಣಿಗೆಯ ಕುಸಿತದ ಮಧ್ಯೆ ದೇಶೀಯ ಬೇಡಿಕೆ ನಿರೀಕ್ಷೆಗಿಂತ ಕಡಿಮೆಯಾಗಿರುವುದೇ ಭಾರತದ ಬೆಳವಣಿಗೆಯ ದರ ಕುಸಿತಕ್ಕೆ ಕಾರಣ ಎಂದು ಐಎಂಎಫ್ ತಿಳಿಸಿದೆ. ಹೀಗಿದ್ದರೂ ಕೂಡ ಭಾರತವು ಈ ವರ್ಷ ವೇಗವಾಗಿ ಬೆಳೆಯುತ್ತಿರುವ ಎರಡನೇ ಪ್ರಮುಖ ಆರ್ಥಿಕತೆಯಾಗಿದೆ ಎಂದು ಉಲ್ಲೇಖಿಸಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ದರವು ಶೇ.1 ರಿಂದ ಶೇ. 5.8 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.