ಡೆಹರಾಡೂನ್: ಉತ್ತರಾಖಂಡ್ನ ಡೆಹರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ಯ ಪಾಸಿಂಗ್ ಔಟ್ ಪೆರೇಡ್ ಮುಕ್ತಾಯಗೊಂಡಿದ್ದು, ಈ ಬಾರಿ 325 ಅಧಿಕಾರಿಗಳು ಸೇನೆ ಸೇರಿದ್ದಾರೆ.
ಈ ಪರೇಡ್‌ನಲ್ಲಿ 70 ವಿದೇಶಿ ಅಧಿಕಾರಿಗಳೂ ಭಾಗಿಯಾಗಿದ್ದರು. ಇದು ವರ್ಷದ ಮೊದಲ ಪಾಸಿಂಗ್ ಔಟ್ ಪೆರೇಡ್ ಆಗಿದ್ದು, 325 ಭಾರತೀಯ ಮತ್ತು ಒಂಬತ್ತು ವಿದೇಶಗಳ ಒಟ್ಟು 90 ಕೆಡೆಟ್‌ಗಳು ಸೇನಾಧಿಕಾರಿಗಳಾಗಿ ಹೊರಹೊಮ್ಮಿದ್ದಾರೆ.
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕೆಡೆಟ್‌ನ ಇಬ್ಬರು ಕುಟುಂಬ ಸದಸ್ಯರಿಗೆ ಮಾತ್ರ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಪೆರೇಡ್‌ನಲ್ಲಿ ಭಾಗಿಯಾದ ಯುವ ಅಧಿಕಾರಿಗಳನ್ನು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಅಭಿನಂದಿಸಿದ್ದಾರೆ. ಕೋವಿಡ್-19ಗಾಗಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಡು ಪೆರೇಡ್ ನಡೆಸಲಾಯಿತು ಎಂದು ಭಾರತೀಯ ಮಿಲಿಟರಿ ಅಕಾಡೆಮಿ ಹೇಳಿದೆ.
ಉತ್ತರ ಪ್ರದೇಶದ 50, ಉತ್ತರಾಖಂಡದ 24 ಕೆಡೆಟ್‌ಗಳು ಸೇನೆ ಸೇರಿದ್ದಾರೆ. ಅದೇ ರೀತಿ ಪಶ್ಚಿಮ ಬಂಗಾಳದಿಂದ ಆರು, ತೆಲಂಗಾಣದಿಂದ ಮೂವರು, ತಮಿಳುನಾಡಿನಿಂದ 6, ರಾಜಸ್ಥಾನದಿಂದ 18, ಪಂಜಾಬ್‌ನಿಂದ 15, ಒಡಿಶಾದಿಂದ 4, ಮಿಜೋರಾಂನಿಂದ ಇಬ್ಬರು, ಮಣಿಪುರದಿಂದ ಮೂವರು, ಮಹಾರಾಷ್ಟ್ರದಿಂದ 18, ಮಧ್ಯಪ್ರದೇಶದಿಂದ 12, ಭಾರತೀಯ ಮೂಲ ಪ್ರಮಾಣಪತ್ರ ಹೊಂದಿ ನೇಪಾಳದಲ್ಲಿ ವಾಸಿಸುವ ನಾಲ್ವರು ಕೆಡೆಟ್ಗಳನ್ನು ಇಂದಿನ ಪೆರೇಡ್ ಒಳಗೊಂಡಿದೆ.
ವಿದೇಶಿ ಕೆಡೆಟ್‌ಗಳಲ್ಲಿ ಅಫ್ಘಾನಿಸ್ತಾನದಿಂದ 41, ಭೂತಾನ್‌ನಿಂದ 17, ಮಾಲ್ಡೀವ್ಸ್, ಮಾರಿಷಸ್, ಮ್ಯಾನ್ಮಾರ್ ಮತ್ತು ಶ್ರೀಲಂಕಾದ ತಲಾ ಒಬ್ಬೊಬ್ಬರು ಕೆಡೆಟ್‌ಗಳು ಸೇರಿದ್ದಾರೆ. ಇದೇ ರೀತಿ, ವಿಯೆಟ್ನಾಂನಿಂದ ಮೂವರು, ತಜಕಿಸ್ತಾನ್‌ನಿಂದ ಮೂರು ಜನ ಮತ್ತು ನೇಪಾಳದ ಇಬ್ಬರು ಕೆಡೆಟ್‌ಗಳು ಪಾಸಿಂಗ್ ಔಟ್ ಪೆರೇಡ್ನ ಭಾಗವಾಗಿದ್ದಾರೆ. ಇದೇ ವೇಳೆ, ಕೇರಳದಿಂದ 15, ಕರ್ನಾಟಕದಿಂದ 5, ಜಾರ್ಖಂಡ್ನಿಂದ 6, ಜಮ್ಮು ಮತ್ತು ಕಾಶ್ಮೀರದಿಂದ 11, ಹಿಮಾಚಲ ಪ್ರದೇಶದ 10, ಹರಿಯಾಣದಿಂದ 45, ಗುಜರಾತ್ನ 4, ದೆಹಲಿಯಿಂದ 13, ಬಿಹಾರದಿಂದ 32, ಅರುಣಾಚಲ ಪ್ರದೇಶದ ಒಬ್ಬರು ಮತ್ತು ಆಂಧ್ರಪ್ರದೇಶದ 6 ಕೆಡೆಟ್‌ಗಳು ಈ ಬಾರಿ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಭಾಗವಹಿಸಿದ್ದಾರೆ.
ಈ ಬಾರಿಯ ಪರೇಡ್‌ನಲ್ಲಿ ಗೋವಾ, ಸಿಕ್ಕಿಂ, ಪಾಂಡಿಚೇರಿ, ನಾಗಾಲ್ಯಾಂಡ್, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್, ತ್ರಿಪುರ, ಲಡಾಖ್‌ನಿಂದ ಯಾವುದೇ ಕೆಡೆಟ್‌ಗಳಿಲ್ಲ.
ಐಎಂಎ ತನ್ನ ಕೆಡೆಟ್‌ಗಳಿಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಪಾಸಿಂಗ್ ಔಟ್ ಪೆರೇಡ್ ಆಯೋಜಿಸುತ್ತದೆ. ಇದರ ನಂತರ ಕೆಡೆಟ್‌ಗಳು ಭಾರತೀಯ ಸೇನೆಯ ವಿವಿಧ ಸೇವೆಗಳಿಗೆ ಸೇರುತ್ತಾರೆ. ವಿದೇಶಿ ಕೆಡೆಟ್‌ಗಳು ಆಯಾ ದೇಶಗಳಲ್ಲಿ ಸೇನೆಗಳಿಗೆ ಸೇರುತ್ತಾರೆ.
ಭಾರತೀಯ ಮಿಲಿಟರಿ ಅಕಾಡೆಮಿ ಇದುವರೆಗೆ 62,956 ಮಿಲಿಟರಿ ಅಧಿಕಾರಿಗಳನ್ನು ದೇಶಕ್ಕೆ ನೀಡಿದೆ. ಈವರೆಗೆ 2572 ವಿದೇಶಿ ಕೆಡೆಟ್‌ಗಳು ಅಕಾಡೆಮಿಯಿಂದ ತರಬೇತಿ ಪಡೆದಿದ್ದಾರೆ.
ಓದಿ: ಎಣ್ಣೆ ಗಿರಣಿ ಪರವಾನಗಿಗೆ ಲಂಚ: ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿ ಎಸಿಬಿ ಬಲೆಗೆ