ಹೈದರಾಬಾದ್(ತೆಲಂಗಾಣ) : ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ನಡೆಸಿದ 'ಇಂಡಿಯಾ ರ್ಯಾಂಕಿಂಗ್ 2020'ಯಲ್ಲಿ ಭಾರತೀಯ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಹೈದರಾಬಾದ್ ಐಐಟಿ 8ನೇ ಸ್ಥಾನದಲ್ಲಿದೆ.
ಎನ್ಐಆರ್‌ಎಫ್ 2019ರಲ್ಲಿಯೂ ಹೈದರಾಬಾದ್ ಐಐಟಿ 8ನೇ ಸ್ಥಾನದಲ್ಲಿತ್ತು. ಈ ವರ್ಷವೂ ತನ್ನ ಸ್ಥಾನ ಉಳಿಸಿಕೊಂಡಿದೆ. ಎಲ್ಲಾ ವಿಭಾಗದಲ್ಲಿ ಈ ಇನ್‌ಸ್ಟಿಟ್ಯೂಟ್ 17ನೇ ಸ್ಥಾನದಲ್ಲಿದೆ. ಇದು ಕಳೆದ ವರ್ಷ 22ನೇ ಸ್ಥಾನದಲ್ಲಿತ್ತು. ಹೀಗಾಗಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸುಧಾರಣೆಯಾಗಿದೆ. ಎನ್‌ಐಆರ್‌ಎಫ್ ಫಲಿತಾಂಶಗಳನ್ನು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ಪ್ರಕಟಿಸಿದ್ದಾರೆ.
ಎನ್‌ಐಆರ್‌ಎಫ್ 2020ರಲ್ಲಿ ಸಂಸ್ಥೆಯ ಕಾರ್ಯಕ್ಷಮತೆ ಕುರಿತು ಮಾತನಾಡಿದ ಐಐಟಿ ಹೈದರಾಬಾದ್‌ನ ನಿರ್ದೇಶಕ ಪ್ರೊಫೆಸರ್ ಬಿ ಎಸ್.ಮೂರ್ತಿ, “ಐಐಟಿ ಹೈದರಾಬಾದ್‌ನಲ್ಲಿ ನಾವು ಯಾವಾಗಲೂ ಶೈಕ್ಷಣಿಕ, ಸಂಶೋಧನೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನೀಡಲು ಪ್ರಯತ್ನಿಸುತ್ತೇವೆ. ಪ್ರತಿಯೊಬ್ಬರ ಕಠಿಣ ಪರಿಶ್ರಮದಿಂದ ಐಐಟಿ ಹೈದರಾಬಾದ್ ಈ ಶ್ರೇಣಿ ತಲುಪಲು ಸಾಧ್ಯವಾಗಿದೆ" ಎಂದು ಹೇಳಿದ್ದಾರೆ.