ETV Bharat / bharat

ದೇಶದಲ್ಲೇ ಬೆಂಗಳೂರಿನ ಐಐಎಸ್​​ಸಿ ನಂ.1 ವಿವಿ: 93 ದೇಶಗಳ 1,512 ವಿವಿಗಳ ಬಗ್ಗೆ ದಿ ಸಮೀಕ್ಷೆ ಹೀಗಿದೆ! - Times Higher Education rankings on Universitues

ಟೈಮ್ಸ್ ಹೈಯರ್ ಎಜುಕೇಷನ್‌ನ ಇತ್ತೀಚಿನ ವಾರ್ಷಿಕ ವಿಷಯ ಶ್ರೇಯಾಂಕದ 93 ದೇಶಗಳ 1,512 ವಿಶ್ವವಿದ್ಯಾಲಯಗಳು 11 ವಿಷಯವಾರು ಕ್ಷೇತ್ರಗಳಲ್ಲಿ ಅಗ್ರ ಸ್ಥಾನ ಪಡೆದಿವೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ವಿಶ್ವದ ಅತ್ಯುತ್ತಮ ದೇಶಗಳು ಮತ್ತು ವಿಶ್ವವಿದ್ಯಾಲಯಗಳನ್ನು ಇದು ಎತ್ತಿ ತೋರಿಸುತ್ತದೆ.

IISc
ಐಐಎಸ್​​ಸಿ
author img

By

Published : Oct 28, 2020, 9:40 PM IST

ನವದೆಹಲಿ: ಕಂಪ್ಯೂಟರ್ ವಿಜ್ಞಾನದಿಂದ ಇಂಜಿನಿಯರಿಂಗ್ ಮತ್ತು ಜೀವ ವಿಜ್ಞಾನದಿಂದ ಭೌತಿಕ ವಿಜ್ಞಾನದವರೆಗಿನ ಟೈಮ್ಸ್ ಹೈಯರ್ ಎಜುಕೇಷನ್​ನ (ದಿ) ವಾರ್ಷಿಕ ವಿಷಯ ಶ್ರೇಯಾಂಕದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​​ಸಿ) ಭಾರತದ ಉನ್ನತ ಸಂಸ್ಥೆಯಾಗಿದೆ.

ಟೈಮ್ಸ್ ಹೈಯರ್ ಎಜುಕೇಷನ್‌ನ ಇತ್ತೀಚಿನ ವಾರ್ಷಿಕ ವಿಷಯ ಶ್ರೇಯಾಂಕದ 93 ದೇಶಗಳ 1,512 ವಿಶ್ವವಿದ್ಯಾಲಯಗಳು 11 ವಿಷಯವಾರು ಕ್ಷೇತ್ರಗಳಲ್ಲಿ ಅಗ್ರ ಸ್ಥಾನ ಪಡೆದಿವೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ವಿಶ್ವದ ಅತ್ಯುತ್ತಮ ದೇಶಗಳು ಮತ್ತು ವಿಶ್ವವಿದ್ಯಾಲಯಗಳನ್ನು ಇದು ಎತ್ತಿ ತೋರಿಸುತ್ತದೆ.

ಐಐಎಸ್​ಸಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಟಾಪ್ 100 ಪಟ್ಟಿಯಲ್ಲಿ ಕ್ರಮವಾಗಿ 96 ಮತ್ತು 94ನೇ ಸ್ಥಾನ ಗಳಿಸಿದೆ. ಪ್ರೀಮಿಯರ್ ಇನ್​ಸ್ಟಿಟ್ಯೂಟ್​ನಲ್ಲಿ​ ಕ್ರಮವಾಗಿ 251-300 ಬ್ಯಾಂಡ್ ಮತ್ತು ಜೀವ ವಿಜ್ಞಾನ ಮತ್ತು ಭೌತಿಕ ವಿಜ್ಞಾನ ವಿಷಯದಲ್ಲಿ ಕ್ರಮವಾಗಿ 301-400 ಬ್ಯಾಂಡ್​ ಶ್ರೇಯಾಂಕದ ​ಅತ್ಯುತ್ತಮ ಭಾರತೀಯ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್ ಮತ್ತು ಭೌತಿಕ ವಿಜ್ಞಾನಗಳ ವಿಷಯ ಶ್ರೇಯಾಂಕದಲ್ಲಿ ಐಐಎಸ್ಸಿ ನಂತರ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಇಂದೋರ್ ಪಡೆದಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು), ದೆಹಲಿ ವಿಶ್ವವಿದ್ಯಾಲಯ (ಡಿಯು) ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ಕಲೆ ಮತ್ತು ಮಾನವಿಕತೆ ಮತ್ತು ಸಾಮಾಜಿಕ ವಿಜ್ಞಾನಗಳ ವಿಷಯದಲ್ಲಿ ಭಾರತೀಯ ಶ್ರೇಯಾಂಕಗಳಲ್ಲಿ ಉತ್ತಮ ಸ್ಥಾನ ಪಡೆದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.