ಮುಂಬೈ(ಮಹಾರಾಷ್ಟ್ರ): ಪಾಕಿಸ್ತಾನದವರು ಮತ್ತು ರೋಹಿಂಗ್ಯಾಗಳು ಭಾರತಕ್ಕೆ ಬರುವುದಾದರೆ ನಾವು ಬೆಳಗಾವಿಗೆ ಹೋಗುವುದರಲ್ಲಿ ತಪ್ಪೇನಿದೆ ಎಂದು ಶಿವಸೇನೆ ಪಕ್ಷದ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಸಂಜಯ್ ರಾವತ್ ಬೆಳಗಾವಿಗೆ ಭೇಟಿ ನೀಡುವುದನ್ನು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ನಿಷೇಧಿಸಿದೆ ಎಂದು ಆರೋಪಿಸಿರುವ ಅವರು, ಪಾಕಿಸ್ತಾನದವರು ಮತ್ತು ರೋಹಿಂಗ್ಯಾಗಳು ಭಾರತಕ್ಕೆ ಬರುವುದಾದರೆ ನಾವು ಬೆಳಗಾವಿಗೆ ಭೇಟಿ ನೀಡುವುದರಲ್ಲಿ ತಪ್ಪೇನಿದೆ? ಎರಡೂ ರಾಜ್ಯಗಳ ನಡುವೆ ವಿವಾದ ಇರುವುದು ಸತ್ಯ. ಆದರೆ, ಒಬ್ಬರಿಗೊಬ್ಬರು ಭೇಟಿ ನೀಡುವುದನ್ನು ನಿಷೇಧಿಸಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರೊಂದಿಗೆ ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಇಲ್ಲಿನ ಸರ್ಕಾರ ನನ್ನ ಭೇಟಿಯನ್ನು ನಿಷೇಧಿಸಿದೆ. ನಿಷೇಧ ಇದ್ದರೆ ಇರಲಿ, ನಾನು ಬೆಳಗಾವಿಗೆ ಹೋಗಿ ಜನರನ್ನ ಭೇಟಿ ಮಾಡುತ್ತೇನೆ ಎಂದಿದ್ದಾರೆ.