ETV Bharat / bharat

ಸಿಎಎಯಿಂದ ತೊಂದರೆಯಾಗಲ್ಲ ಎಂದರೆ ಮುಸ್ಲಿಮರನ್ನ ಹೊರಗಿಟ್ಟಿದ್ದು ಯಾಕೆ: ಚಿದಂಬರಂ ಪ್ರಶ್ನೆ - ಗೃಹ ಸಚಿವ ಅಮಿತ್​​ ಶಾ

ಕೋಲ್ಕತ್ತಾದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್​ ಶಾ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅಲ್ಪಸಂಖ್ಯಾತ ಸಮುದಾಯದ ಯಾರಿಗೂ ತೊಂದರೆಯಾಗುವುದಿಲ್ಲ ಎಂದಿದ್ದಾರೆ. ಶಾ ಅವರ ಹೇಳಿಕೆಗೆ ಕಾಂಗ್ರೆಸ್​ ನಾಯಕ ಪಿ. ಚಿದಂಬರಂ ಅವರು ತಿರುಗೇಟು ನೀಡಿದ್ದಾರೆ.

If no minority will be affected by CAA
ಕಾಂಗ್ರೆಸ್​ ನಾಯಕ ಪಿ. ಚಿದಂಬರಂ
author img

By

Published : Mar 2, 2020, 10:13 AM IST

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅಲ್ಪಸಂಖ್ಯಾತ ಸಮುದಾಯದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬ ಗೃಹ ಸಚಿವ ಅಮಿತ್​​ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್​ ನಾಯಕ ಪಿ. ಚಿದಂಬರಂ ಅವರು ಯಾರಿಗೂ ತೊಂದರೆಯಾಗುವುದಿಲ್ಲ ಎಂದರೇ ಒಂದು ಸಮುದಾಯದವರನ್ನು ಏಕೆ ಹೊರಗಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್​​ ಶಾ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಿಂದ ಒಬ್ಬ ವ್ಯಕ್ತಿಯು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಭರವಸೆ ನೀಡಿದರು.

  • If the CAA is intended to benefit all minorities (no one will be affected says the HM), then why were Muslims excluded from
    the list of minorities mentioned in the Act?

    — P. Chidambaram (@PChidambaram_IN) March 1, 2020 " class="align-text-top noRightClick twitterSection" data=" ">

ಈ ಸಂಬಂಧ ಪ್ರತಿಕ್ರಿಯಿಸಿದ ಪಿ.ಚಿದಂಬರಂ ಅವರು ಸಿಎಎಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಗೃಹ ಸಚಿವರು ಹೇಳುತ್ತಾರೆ. ಇದು ನಿಜವಾಗಿದ್ದರೆ, ಸಿಎಎಯಿಂದ ಯಾರಿಗೆ ತೊಂದರೆಯಾಗಲಿದೆ ಎಂದು ಅವರು ದೇಶಕ್ಕೆ ತಿಳಿಸಬೇಕು. ಸಿಎಎಯಿಂದ ಯಾರಿಗೂ ತೊಂದರೆಯಾಗದಿದ್ದರೆ, ಪ್ರಸ್ತುತ ಇರುವಂತೆ ಇರಲಿ. ಸರ್ಕಾರ ಏಕೆ ತಿದ್ದುಪಡಿ ಮಾಡಲು ಹೊರಟಿದೆ. ಅಲ್ಲದೇ ಮುಸ್ಲಿಮರನ್ನು ಕಾಯಿದೆಯಲ್ಲಿ ಉಲ್ಲೇಖಿಸಿರುವ ಅಲ್ಪಸಂಖ್ಯಾತರ ಪಟ್ಟಿಯಿಂದ ಏಕೆ ಹೊರಗಿಡಲಾಗಿದೆ" ಎಂದು ಮಾಜಿ ಹಣಕಾಸು ಸಚಿವರು ಟ್ವಿಟರ್​​​ನಲ್ಲಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳು ಅಲ್ಪಸಂಖ್ಯಾತರನ್ನು ಭಯಭೀತಿಗೊಳಿಸುತ್ತಿವೆ. ಸಿಎಎ ಪೌರತ್ವ ಮಾತ್ರ ನೀಡುತ್ತದೆ, ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಭರವಸೆ ನೀಡುತ್ತೇನೆ ಎಂದು ಶಾ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.