ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿಗಳ ಅಂತಿಮ ವಿಚಾರಣೆ ಇಂದು ನಡೆಯಿತು.ಅಗತ್ಯ ಬಿದ್ದರೆ ಜಮ್ಮು ಕಾಶ್ಮೀರದ ಪರಿಸ್ಥಿತಿ ಪರಿಶೀಲಿಸಲು ನಾನೇ ಜಮ್ಮು -ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ ಎಂದು ಸಿಜೆಐ ರಂಜನ್ ಗೊಗೊಯ್ ತಿಳಿಸಿದ್ರು.
ಇನ್ನು ಕೇಂದ್ರ ಹಾಗೂ ಜಮ್ಮು- ಕಾಶ್ಮೀರ ಸರ್ಕಾರಗಳಿಗೆ ಈ ಪ್ರಕರಣದ ಬಗ್ಗೆ ಅಫಿಡವಿಟ್ ಸಲ್ಲಿಸಲು ಸೂಚಿಸಿದ ಕೋರ್ಟ್ ಹೆಚ್ಚಿನ ವಿಚಾರಣೆಯನ್ನ ಸೆಪ್ಟೆಂಬರ್ 30ಕ್ಕೆ ನಿಗದಿಗೊಳಿಸಿತು. ಈ ನಡುವೆ, ಭಾರತ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ವಾದ ಮಂಡಿಸಿದರು.
ಈ ನಡುವೆ ಗುಲಾಂ ನಜಿ ಆಜಾದ್ ಕಾಶ್ಮೀರದ ನಾಲ್ಕು ಜಿಲ್ಲೆಗಳ ಭೇಟಿ ನೀಡಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಶ್ರೀನಗರ, ಅನಂತನಾಗ್, ಬಾರಾಮುಲ್ಲಾ ಮತ್ತು ಜಮ್ಮುಗೆ ಭೇಟಿ ನೀಡಲು ಅವಕಾಶ ನೀಡಿತು. ಆದರೆ ಸಾವರ್ಜನಿಕರನ್ನುದ್ದೇಶಿಸಿ ಯಾವುದೇ ಭಾಷಣವನ್ನು ಮಾಡುವಂತಿಲ್ಲ ಎಂಬ ಷರತ್ತು ಕೂಡ ಅವರಿಗೆ ಸುಪ್ರೀಂ ವಿಧಿಸಿದೆ.
ಕಾಶ್ಮೀರಕ್ಕೆ ಭೇಟಿ ನೀಡಲು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಎರಡು ಬಾರಿ ಪ್ರಯತ್ನಿಸಿದ್ದರು. ಅಲ್ಲಿನ ಆಡಳಿತ ಅವರಿಗೆ ಅವಕಾಶ ನಿರಾಕರಿಸಿತ್ತು. ಶ್ರೀನಗರ ಏರ್ಪೋರ್ಟ್ನಿಂದಲೇ ವಾಪಸ್ ಕಳುಹಿಸಿತ್ತು.
ಕೇಂದ್ರಕ್ಕೆ ಖಡಕ್ ವಾರ್ನಿಂಗ್
ಈ ನಡುವೆ ಅರ್ಜಿದಾರರ ವಾದ ಆಲಿಸಿದ ಸುಪ್ರೀಂಕೋರ್ಟ್ ಕಣಿವೆ ರಾಜ್ಯದಲ್ಲಿ ಸಹಜ ಜೀವನಕ್ಕೆ ಅವಕಾಶವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮತ್ತೊಮ್ಮೆ ಸೂಚನೆ ಕೊಟ್ಟಿದೆ.
ಈ ಸಂಬಂಧ ಸೆಪ್ಟೆಂಬರ್ 30ಕ್ಕೆ ಅಫಿಡವಿಡ್ ಸಲ್ಲಿಸುವಂತೆ ಸೂಚಿಸಿತಲ್ಲದೇ ಅಂದೇ ಅಂತಿಮ ವಿಚಾರಣೆಯನ್ನ ನಿಗದಿ ಮಾಡಿತು.
ಟೈಮ್ಸ್ ಎಡಿಟರ್ ಪ್ರಶ್ನಿಸಿ ಸುಪ್ರೀಂ
ಸಮಸ್ಯೆ ಸ್ಥಳೀಯವಾಗಿಯೇ ಇದ್ದರೆ ಅದನ್ನು ಅಲ್ಲಿನ ಕೋರ್ಟ್ನಲ್ಲೇ ಏಕೆ ಪ್ರಶ್ನಿಸಬಾರದು ಎಂದು ಟ್ರೈಮ್ಸ್ ಎಡಿಟರ್ ಪರ ವಕೀಲರಿಗೆ ಪ್ರಶ್ನಿಸಿತು. ಟೈಮ್ಸ್ ಎಡಿಟರ್ ಅನುರಾಧ ಪರ ವಕೀಲ ಗ್ರೋವರ್ ವಾದ ಮಂಡನೆ ಮಾಡಿದ್ದರು.
370 ನೇ ವಿಧಿ ರದ್ಧತಿ ನಂತರ ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಗೃಹ ಬಂಧನದಲ್ಲಿರಿಸಲಾಗಿದೆ ಹಾಗೂ ಯಾರ ಭೇಟಿಗೂ ಅವಕಾಶ ನೀಡಿಲ್ಲ. ಹೀಗಾಗಿ ಇದನ್ನು ಪ್ರಶ್ನಿಸಿ ಹಾಗೂ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡುವಂತೆ ಎಂಡಿಎಂಕೆ ಮುಖ್ಯಸ್ಥ ವೈಕೋ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಸರ್ಕಾರಕ್ಕೆ ನೋಟಿಸ್ ನೀಡಿತು.