ETV Bharat / bharat

ಇಡುಕ್ಕಿ ಭೂ ಕುಸಿತ: ಮತ್ತೆ ಮೂವರ ಮೃತದೇಹ ಪತ್ತೆ... ಸಾವಿನ ಸಂಖ್ಯೆ 52ಕ್ಕೆ ಏರಿಕೆ - ಕೇರಳದ ಇಡುಕ್ಕಿ

ಐದನೇ ದಿನವೂ ಇಡುಕ್ಕಿ ಭೂ ಕುಸಿತದಲ್ಲಿ ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಇಂದು ಮತ್ತೆ ಮೂವರ ಮೃತದೇಹ ಪತ್ತೆಯಾಗಿವೆ.

Pettimudi landslide disaster
ಇಡುಕ್ಕಿ ಭೂಕುಸಿತ
author img

By

Published : Aug 11, 2020, 1:11 PM IST

ಇಡುಕ್ಕಿ: ಕೇರಳದ ಇಡುಕ್ಕಿಯ ರಾಜಮಾಲಾದಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಐದನೇ ದಿನವೂ ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಆಗಸ್ಟ್​ 6ರಂದು ಇಡುಕ್ಕಿಯ ರಾಜಮಾಲಾದ ಪೆಟ್ಟಿಮುಡಿಯಲ್ಲಿ ಭೂ ಕುಸಿತ ಉಂಟಾಗಿತ್ತು. ನಿನ್ನೆಯವರೆಗೂ 49 ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ಇದೀಗ ಮತ್ತೆ 3 ಮೃತದೇಹಗಳು ಸಿಕ್ಕಿದ್ದು, ಸಾವಿನ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

ಭೂ ಕುಸಿತ ಸಂಭವಿಸಿದ ಪ್ರದೇಶದಲ್ಲಿ ಸುಮಾರು 80 ಜನರು ಇದ್ದರು. ಈ ಪೈಕಿ 12 ಮಂದಿಯನ್ನು ಮಾತ್ರ ರಕ್ಷಿಸಲಾಗಿದೆ. ಮಣ್ಣಿನಡಿ ಸಿಲುಕಿರುವ ಉಳಿದವರಿಗಾಗಿ ಎನ್​ಡಿಆರ್​ಎಫ್​, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.