ETV Bharat / bharat

ಕೊರೊನಾ ಲಸಿಕೆ ಕಂಡು ಹಿಡಿಯಲು ಆ. 15 ಡೆಡ್​ಲೈನ್: ದಿನಾಂಕ​​ ಸಮರ್ಥಿಸಿಕೊಂಡ ಐಸಿಎಂಆರ್​​​! - ಭಾರತ್​ ಬಯೋಟೆಕ್​

ಕೊರೊನಾ ವಿರುದ್ಧ ಎಲ್ಲಾ ದೇಶಗಳು ಹೋರಾಡ ನಡೆಸಿದ್ದು, ಇದೀಗ ಭಾರತ್​ ಬಯೋಟೆಕ್​​​ ಆಗಸ್ಟ್​ 15ರೊಳಗೆ ತಾನು ಕಂಡು ಹಿಡಿದಿರುವ ಕೊವ್ಯಾಕ್ಸಿನ್​ ಲಸಿಕೆ ಫಲಿತಾಂಶ ರಿಲೀಸ್​ ಮಾಡಲಿದೆ.

Covid vaccine deadline
Covid vaccine deadline
author img

By

Published : Jul 4, 2020, 9:47 PM IST

ಹೈದರಾಬಾದ್​: ಮಹಾಮಾರಿ ಕೊರೊನಾ ವೈರಸ್​ಗೆ ಭಾರತದಲ್ಲಿ ಕಂಡು ಹಿಡಿಯಲಾಗಿರುವ ಕೊವ್ಯಾಕ್ಸಿನ್​ ಫಲಿತಾಂಶ ಆಗಸ್ಟ್​ 15ರೊಳಗೆ ರಿಲೀಸ್​ ಮಾಡುವಂತೆ ತಿಳಿಸಲಾಗಿದ್ದು, ಇದಕ್ಕೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್​) ಡೆಡ್​​ಲೈನ್​​ ಸಮರ್ಥಿಸಿಕೊಂಡಿದೆ.

ಲಸಿಕೆ ಈಗಾಗಲೇ ಮಾನವ ಪ್ರಯೋಗಕ್ಕೆ ನೀಡಲಾಗಿದ್ದು, ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ಕಾರ್ಯಕ್ಕೆ ಭಾರತ್​ ಬಯೋಟೆಕ್​ಗೆ ಡ್ರಗ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ಅನುಮೋದನೆ ನೀಡಿದೆ. ತ್ವರಿತಗತಿಯಲ್ಲಿ ಮನಷ್ಯರ ಮೇಲೆ ಪ್ರಯೋಗ ಮಾಡುವಂತೆ ಐಸಿಎಂಆರ್​ಗೆ ಗಡುವು ನೀಡಿದೆ. ಇದರ ಬೆನ್ನಲ್ಲೇ ಕೆಲವೆಡೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು.

ಇದೀಗ ತಾನು ನೀಡಿರುವ ಗಡುವಿನ ಬಗ್ಗೆ ಸಮರ್ಥನೆ ಮಾಡಿರುವ ಐಸಿಎಂಆರ್​, ಕೊರೊನಾ ವಿರುದ್ಧದ ಲಸಿಕೆ ಕಂಡು ಹಿಡಿಯಲು ಎಲ್ಲೆಡೆ ವಿವಿಧ ಪ್ರಯತ್ನ ನಡೆಯುತ್ತಿದ್ದು, ಸಂಶೋಧನೆಯಲ್ಲಿ ಯಾವುದೇ ನಿಯಮ ಉಲ್ಲಂಘಿಸುವುದಿಲ್ಲ ಎಂದು ತಿಳಿಸಿದೆ.

ಜಾಗತಿಕ ಮಾನದಂಡಗಳಿಗೆ ತನ್ನ ನಿರ್ಧಾರ ಅನುಗುಣವಾಗಿದ್ದು, ಇದು ಅತ್ಯಂತ ಮುಖ್ಯವಾದ ಯೋಜನೆಯಾಗಿದೆ ಎಂದು ಐಸಿಎಂಆರ್​ ತಿಳಿಸಿದೆ. ಮಹಾಮಾರಿ ಕೊರೊನಾ ವೈರಸ್​​ಗಾಗಿ ಈಗಾಗಲೇ ಅನೇಕ ದೇಶಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿ ಮಗ್ನವಾಗಿದ್ದು, ಭಾರತ ಕೂಡ ಇದೇ ಕೆಲಸ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.