ಹೇಗ್: ಭಯೋತ್ಪಾದನಾ ಚಟುವಟಿಕೆ ಮತ್ತು ಗೂಢಚರ್ಯೆ ಆರೋಪದಲ್ಲಿ ಬಂಧನಕ್ಕೊಳಗಾಗಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ಸದ್ಯ ಪಾಕ್ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಯಲಿದೆ.
ಈ ತೀರ್ಪನ್ನು ಮೇ ತಿಂಗಳಲ್ಲಿ ಪ್ರಶ್ನಿಸಿ ಭಾರತ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಸದ್ಯ ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದು ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ವಿಷಮವಾಗಿರುವ ಸಂದರ್ಭದಲ್ಲೇ ವಿಚಾರಣೆ ಆರಂಭವಾಗಿದೆ.
ಭಾರತದ ಇಂದು ತನ್ನ ವಾದ ಮಂಡಿಸಲಿದ್ದು, ಇದಕ್ಕೆ ಪಾಕ್ ಫೆ. 19ರಂದು ತನ್ನ ಉತ್ತರ ನೀಡಲಿದೆ. ಭಾರತ ಫೆ. 20ರಂದು ಹಾಗೂ ಫೆ. 21ರಂದು ಪಾಕಿಸ್ತಾನ ಕ್ರಮವಾಗಿ ತಮ್ಮ ವಾದಗಳನ್ನು ಮುಂದಿಡಲಿವೆ. ಅಂತರಾಷ್ಟ್ರೀಯ ನ್ಯಾಯಾಲಯ ಏಪ್ರಿಲ್ ಇಲ್ಲವೇ ಮೇನಲ್ಲಿ ತೀರ್ಪು ನೀಡಲಿದೆ.