ETV Bharat / bharat

ಸಮಯ ನಿಗದಿಯಾದ್ರೂ ಆರಂಭವಾಗದ ಐಸಿಸಿ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ

ಐಸಿಸಿ ನಿರ್ದೇಶಕರ ಮಂಡಳಿಯು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳ ನಾಮ ನಿರ್ದೇಶನಕ್ಕೆ ಅಕ್ಟೋಬರ್ 18 ಕೊನೆ ದಿನ ಎಂದು ಹೇಳಿದೆ. ಆದ್ರೆ ನಿರ್ದೇಶಕರ ಆಯ್ಕೆ ಬಗ್ಗೆಯಾಗಲೀ, ಚುನಾವಣೆ ಬಗ್ಗೆ ಯಾಗಲೀ ಪ್ರಕ್ರಿಯೆಗಳು ನಡೆಯುತ್ತಿಲ್ಲ.

author img

By

Published : Oct 14, 2020, 7:35 AM IST

ICC chairperson's election: No news on associate directors
ಸಮಯ ನಿಗಧಿಯಾದ್ರೂ ಐಸಿಸಿ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಗಳು ಪ್ರರಂಭವಾಗಿಲ್ಲ

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಮುಂದಿನ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿದೆ. ಜೊತೆಗೆ ಮೂವರು ನಿರ್ದೇಶಕರ ಹಾಗೂ ಇತರ ರಾಷ್ಟ್ರಗಳನ್ನು ಪ್ರತಿನಿಧಿಸುವ ಮೂವರು ನಿರ್ದೇಶಕರ ಚುನಾವಣೆ ಮಾಡಬೇಕಿದೆ. ಈ ಹಿಂದೆ, ಇದೇ ಸ್ಥಾನಗಳಲ್ಲಿದ್ದವರ ಅಧಿಕಾರವಧಿ ಕಳೆದ ಜೂನ್​ ಅಂತ್ಯಕ್ಕೆ ಮುಕ್ತಾಯವಾಗಿತ್ತು.

ಐಸಿಸಿ ನಿರ್ದೇಶಕರ ಮಂಡಳಿಯು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳ ನಾಮನಿರ್ದೇಶನಕ್ಕೆ ಅಕ್ಟೋಬರ್ 18 ಕೊನೆದ ದಿನ ಎಂದು ಹೇಳಿದೆ. ಆದ್ರೆ ನಿರ್ದೇಶಕರ ಆಯ್ಕೆ ಬಗ್ಗೆಯಾಗಲೀ, ಚುನಾವಣೆ ಬಗ್ಗೆಯಾಗಲಿ ಪ್ರಕ್ರಿಯೆಗಳು ನಡೆಯುತ್ತಿಲ್ಲ.

ಈ ಹಿಂದೆ ಸಿಂಗಾಪುರದ ಇಮ್ರಾನ್ ಖ್ವಾಜಾ, ಮಲೇಷ್ಯಾದ ಮಹಿಂದಾ ವಲ್ಲಿಪುರಂ ಮತ್ತು ಸ್ಕಾಟ್ಲೆಂಡ್‌ನ ಟೋನಿ ಬ್ರಿಯಾನ್ ಐಸಿಸಿ ಮಂಡಳಿಯಲ್ಲಿ ಮೂವರು ಸಹಾಯಕ ಸದಸ್ಯ ರಾಷ್ಟ್ರ ನಿರ್ದೇಶಕರಾಗಿದ್ದು, ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಇವರ ಅವಧಿ ಮುಕ್ತಾಯವಾಗಿದ್ದು, ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಅಥವಾ ಅವರ ಮರು ಆಯ್ಕೆ ಬಗ್ಗೆ ಯಾವುದೇ ಸುದ್ದಿಯಾಗಿಲ್ಲ.

ICC chairperson's election: No news on associate directors
ಸಮಯ ನಿಗದಿಯಾದ್ರೂ ಐಸಿಸಿ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಿಲ್ಲ

ನಿಯಮಗಳ ಪ್ರಕಾರ ಐಸಿಸಿ ನಿರ್ದೇಶಕರಿಗೆ ಒಬ್ಬ ಚುನಾವಣಾ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ. ಮತ್ತು ಇಬ್ಬರು ಅಥವಾ ಹೆಚ್ಚಿನ ನಿರ್ದೇಶಕರ ಬೆಂಬಲವನ್ನು ಹೊಂದಿರುವ ನಾಮಿನಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಐಸಿಸಿ ಮಂಡಳಿಯು 17 ನಿರ್ದೇಶಕರನ್ನು ಒಳಗೊಂಡಿದ್ದು, ಅವರು ಮತ ಚಲಾಯಿಸಬಹುದು.

ಐಸಿಸಿ ಮಂಡಳಿಯಲ್ಲಿ 12 ಸದಸ್ಯರು, ಮೂವರು ಸಹಾಯಕ ರಾಷ್ಟ್ರಗಳನ್ನು ಪ್ರತಿನಿಧಿಸುವ ನಿರ್ದೇಶಕರು, ಇಂದ್ರಾ ನೂಯಿ ಹಾಗೂ ಸಹಾಯಕ ನಿರ್ದೇಶಕ ಮತ್ತು ಹಂಗಾಮಿ ಅಧ್ಯಕ್ಷರಾಗಿ ಖ್ವಾಜಾ ಇದ್ದಾರೆ.

ಕಳೆದ ಜೂನ್‌ನಲ್ಲಿ ಮನೋಹರ್ ಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಾಗ ಇನ್ನು ಒಂದು ವಾರದೊಳಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದರು. ಮೂರು ತಿಂಗಳಾದರೂ ಪ್ರಕ್ರಿಯೆ ಆರಂಭವಾಗಿಲ್ಲ. ಈ ಎಲ್ಲಾ ವಿಳಂಬಕ್ಕೆ ಕೊರೊನಾವೇ ಕಾರಣ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.