ನವದೆಹಲಿ: ಭಾರತ-ಚೀನಾ ನಡುವಿನ ಬಿಕ್ಕಟ್ಟು ಗಡಿಯಲ್ಲಿ ಉಲ್ಭಣಗೊಂಡಿದ್ದು, ಇದರ ಮಧ್ಯೆ ರಷ್ಯಾದ 33 ಯುದ್ಧ ವಿಮಾನ ಖರೀದಿಗಾಗಿ ವಾಯುಸೇನೆ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಒಟ್ಟು 21 ಮಿಗ್-29 ಯುದ್ಧ ವಿಮಾನ ಹಾಗೂ ಸುಕೋಯಿ-ಎಸ್ಯು 30 ಎಂಕೆಐ 12 ಯುದ್ಧ ವಿಮಾನಗಳಿಗೆ ಬೇಡಿಕೆ ಇಟ್ಟಿರುವುದಾಗಿ ತಿಳಿದು ಬಂದಿದೆ.
ಈ ಯುದ್ಧ ವಿಮಾನ ಖರೀದಿ ಮಾಡಲು ಭಾರತ ಈ ಹಿಂದೆ ಕೇಂದ್ರದ ಬಳಿ ಬೇಡಿಕೆ ಇಟ್ಟಿತ್ತು. ಆದರೆ ಇದೀಗ ಗಡಿಯಲ್ಲಿನ ಪರಿಸ್ಥಿತಿ ಮತ್ತಷ್ಟು ಉಲ್ಭಣಗೊಂಡಿರುವ ಕಾರಣ ಆದಷ್ಟು ಬೇಗ ಖರೀದಿ ಮಾಡಲು ತಿಳಿಸಿದೆ ಎಂದು ವರದಿಯಾಗಿದೆ. ಮುಂದಿನ ವಾರ ಕೇಂದ್ರ ರಕ್ಷಣಾ ಇಲಾಖೆ ಸಭೆ ನಡೆಸಿ, ಇದಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಇದಕ್ಕಾಗಿ ಅಂದಾಜು 6 ಸಾವಿರ ಕೋಟಿ ರೂ ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.
ಭಾರತ ಮುಂದಿನ 10-15 ವರ್ಷಗಳಲ್ಲಿ 272 Su-30 ಫೈಟರ್ ಜೆಟ್ ಖರೀದಿಗೆ ನಿರ್ಧರಿಸಿದೆ. ಫ್ರಾನ್ಸ್ ನಿರ್ಮಿತ ಆಧುನಿಕ ಯುದ್ಧ ವಿಮಾನಗಳಾಗಿದ್ದು, ಭಾರತೀಯ ವಾಯುಸೇನೆ ಬತ್ತಳಿಕೆ ಸೇರಿಕೊಳ್ಳಲಿವೆ. ಹೊಸ ತಂತ್ರಜ್ಞಾನ ಮಿಗ್ 29 ಯುದ್ಧ ವಿಮಾನಗಳ ಖರೀದಿಯಿಂದ ಭಾರತೀಯ ವಾಯುಸೇನೆ ಬಲ ಮತ್ತಷ್ಟು ವೃದ್ಧಿಯಾಗಲಿದೆ.
ಭಾರತೀಯ ವಾಯುಸೇನೆ ರಷ್ಯಾ ನಿರ್ಮಿತ 21 ಮಿಗ್ 29 ಮತ್ತು 12 ಸುಖೋಯ್ ಫೈಟರ್ ಜೆಟ್ಗಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡುವುದರಿಂದ ಮತ್ತಷ್ಟು ಬಲ ಬರಲಿದೆ.ಕಳೆದ ಕೆಲ ವರ್ಷಗಳಿಂದ ಭಾರತದ ವಿವಿಧ ಪ್ರದೇಶಗಳಲ್ಲಿ 12 ಸುಖೋಯ್ 30 ಫೈಟರ್ ಜೆಟ್ ಪತನವಾಗಿವೆ.