ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇರಾನ್ನಿಂದ 58 ಮಂದಿಯನ್ನ ದೇಶಕ್ಕೆ ವಾಪಸ್ ಕರೆತರಲಾಗಿದೆ.
ಇರಾನ್ನಲ್ಲಿ ಸುಮಾರು 2 ಸಾವಿರ ಭಾರತೀಯರು ಇದ್ದಾರೆ. ಇದರಲ್ಲಿ 59 ಮಂದಿಯನ್ನ ಭಾರತೀಯ ಏರ್ಫೊರ್ಸ್ ವಿಮಾನದಲ್ಲಿ ದೇಶಕ್ಕೆ ಕರೆ ತರಲಾಗಿದೆ.
ಕೊರೊನಾ ಭೀತಿಗೊಳಗಾಗಿದ್ದ 58 ಮಂದಿಯನ್ನ ಭಾರತೀಯ ವಾಯುಪಡೆ ರಕ್ಷಿಸಿದ್ದು, ಅವರೆಲ್ಲ ಘಾಜಿಯಾಬಾದ್ನ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅವರು, ಮೊದಲ ಬ್ಯಾಚ್ನಲ್ಲಿ 58 ಮಂದಿಯನ್ನ ರಕ್ಷಿಸಲಾಗಿದ್ದು, ಹಿಂಡನ್ ವಿಮಾನ ನಿಲ್ದಾಣಕ್ಕೆ ಕೆಲವೇ ಹೊತ್ತಿನಲ್ಲಿ ತಲುಪಲಿದ್ದಾರೆ ಎಂದು ವಿದೇಶಾಂಗ ಸಚಿವರು ಟ್ವೀಟ್ ಮಾಡಿದ್ದರು.
ಅಷ್ಟೇ ಅಲ್ಲ ಭಾರತೀಯ ರಾಯಭಾರ ಇಲಾಖೆಗೆ ಧನ್ಯವಾದವನ್ನ ಸಮರ್ಪಿಸಿದ್ದರು. ಭಾರತೀಯ ವಾಯುಪಡೆ ವಿಮಾನದಲ್ಲಿ ಎಲ್ಲರಿಗೂ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನ ಮಾಡಲಾಗಿತ್ತು. ವರದಿಗಳ ಪ್ರಕಾರ ಇರಾನ್ನಲ್ಲಿ ನೋವೆಲ್ ಕೊರೊನಾ ವೈರಸ್ನಿಂದ 237 ಜನ ಸಾವನ್ನಪ್ಪಿದ್ದು, 7 ಸಾವಿರ ಮಂದಿಗೆ ವೈರಸ್ ಅಂಟಿದೆ. ಈ ಮೊದಲು ಭಾರತೀಯ ವಾಯ ಪಡೆ ಚೀನಾದಿಂದ 76 ಭಾರತೀಯರು ಹಾಗೂ 36 ವಿದೇಶಿಯರನ್ನ ರಕ್ಷಿಸಿ ದೇಶಕ್ಕೆ ಸುರಕ್ಷಿತವಾಗಿ ಕರೆ ತಂದಿತ್ತು.