ETV Bharat / bharat

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಅಫ್ರಿದಿ; LoCಗೆ ಭೇಟಿ ನೀಡ್ತಾರಂತೆ ಕ್ರಿಕೆಟಿಗ - ಆರ್ಟಿಕಲ್​ 370 ರದ್ದು

ಜಮ್ಮು-ಕಾಶ್ಮೀರ ವಿಚಾರವಾಗಿ ಪದೇ ಪದೇ ತಗಾದೆ ತೆಗೆಯುವ ಪಾಕ್​​​ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೊಳಗಾಗಿದೆ. ಈ ಮಧ್ಯೆ ಇದೇ ವಿಷಯವನ್ನಿಟ್ಟುಕೊಂಡು ಮಾಜಿ ಕ್ರಿಕೆಟಿಗ ಶಾಹಿದ್​​ ಆಫ್ರಿದಿ ಕಡ್ಡಿ ಆಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಶಾಹಿದ್​ ಆಫ್ರಿದಿ
author img

By

Published : Aug 28, 2019, 4:51 PM IST

Updated : Aug 28, 2019, 9:19 PM IST

ಇಸ್ಲಾಮಾಬಾದ್​​: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್​ ಶಾಹಿದ್​ ಅಫ್ರಿದಿ ಆದಷ್ಟು ಬೇಗ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಲಿದ್ದಾರಂತೆ!

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಕ್ರಿಕೆಟಿಗ, ಪಾಕ್​ ಪ್ರಧಾನಿ ನೀಡಿರುವ ಕರೆಗೆ ಓಗೊಟ್ಟು ನಾನು ಆದಷ್ಟು ಬೇಗ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ ನಮ್ಮ ಕಾಶ್ಮೀರದ ಸಹೋದರಿ ಸಹೋದರರಿಗೆ ಧೈರ್ಯ ತುಂಬಲಿದ್ದೇನೆ. ನೀವೆಲ್ಲರೂ ನನಗೆ ಸಾಥ್​ ನೀಡಿ ಎಂದು ಬರೆದುಕೊಂಡಿದ್ದಾರೆ.

  • Let’s respond to PM call for Kashmir Hour as a nation. I will be at Mazar e Quaid at 12 pm on Friday. Join me to express solidarity with our Kashmiri brethren.
    On 6 Sep I will visit home of a Shaheed. I will soon be visiting LOC.

    — Shahid Afridi (@SAfridiOfficial) August 28, 2019 " class="align-text-top noRightClick twitterSection" data=" ">

ಈಗಾಗಲೇ ಅನೇಕ ಸಲ ಜಮ್ಮು-ಕಾಶ್ಮೀರ ವಿಚಾರವನ್ನಿಟ್ಟುಕೊಂಡು ಭಾರತದ ವಿರುದ್ಧ ಹರಿಹಾಯ್ದಿರುವ ಅಫ್ರಿದಿ, ಇದೀಗ ಮತ್ತೊಮ್ಮೆ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಅನವಶ್ಯಕ ವಿವಾದ ಸೃಷ್ಟಿಸುತ್ತಿದ್ದಾರೆ.

ಭಾರತ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿತ್ತು. ಲಡಾಖನ್ನು ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ.

Intro:Body:

ಇಸ್ಲಾಮಾಬಾದ್​​: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ಧುಗೊಂಡ ಬಳಿಕ ನೆರೆಯ ಪಾಕ್​​ ಭಾರತದ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಈಗಾಗಲೇ ಇದೇ ವಿಷಯವನ್ನ ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಿ ಮುಖಭಂಗ ಅನುಭವಿಸಿದೆ. 

ಇಷ್ಟಾದರೂ ಸುಮ್ಮನಾಗದ ಪಾಕ್ ಇದೀಗ ಇದೇ ವಿಷಯವನ್ನ ಅಂತಾರಾಷ್ಟ್ರೀಯ ಕೋರ್ಟ್​ಗೆ ತೆಗೆದುಕೊಂಡು ಹೋಗಲು ನಿರ್ಧಸಿದೆ. ಇದರ ಮಧ್ಯೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್​ ಶಾಹಿದ್​ ಆಫ್ರಿದಿ ಆದಷ್ಟು ಬೇಗ ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರಂತೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಆಫ್ರಿದಿ, ಪಾಕ್​ ಪ್ರಧಾನಿ ನೀಡಿರುವ ಕರೆಗೆ ಓಗೊಟ್ಟು ನಾನು ಆದಷ್ಟು ಬೇಗ ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ನಿವೆಲ್ಲರೂ ನನಗೆ ಸಾಥ್​ ನೀಡಿ ಎಂದು ಬರೆದುಕೊಂಡಿದ್ದಾರೆ. 

ಈಗಾಗಲೇ ಅನೇಕ ಸಲ ಜಮ್ಮು-ಕಾಶ್ಮೀರ ವಿಚಾರವನ್ನಿಟ್ಟುಕೊಂಡು ಭಾರತದ ವಿರುದ್ಧ ಹರಿಹಾಯ್ದಿರುವ ಆಫ್ರಿದಿ, ಇದೀಗ ಮತ್ತೊಮ್ಮೆ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಕಡ್ಡಿ ಆಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್ಟಿಕಲ್​ 370 ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದ್ದು, ಲಡಾಖ್​ಗೆ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ. 

ಇನ್ನು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ  ನಡೆಯಲಿದ್ದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಪ್ಯಾಕೇಜ್​ ಘೋಷಣೆಯಾಗುವ ಸಾಧ್ಯತೆ ಇದೆ.

Conclusion:
Last Updated : Aug 28, 2019, 9:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.