ETV Bharat / bharat

'ಪ್ಲಾಟ್‌ಫಾರ್ಮ್‌ನಲ್ಲಿ ಟೀ ಮಾರಿ ಬಡತನ ಏನು ಅಂತ ತಿಳ್ಕೊಂಡೆ, ಪ್ರಧಾನಿಯೂ ಆದೆ': ಮೋದಿ

ರಿಯಾದ್‌ನಲ್ಲಿ ನಡೆದ ಫ್ಯೂಚರ್ ಇನ್ವೆಸ್ಟ್‌ಮೆಂಟ್ ಇನಿಶಿಯೇಟಿವ್ (ಎಫ್‌ಐಐ) ವ್ಯವಹಾರ ವೇದಿಕೆಯಲ್ಲಿ ಪ್ರಧಾನಿ ಮೋದಿ ಮಾತನಾಡಿ, ಸೌದಿ ಕಂಪನಿಗಳಿಗೆ ಭಾರತದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಕೋರಿಕೊಂಡರು. ಬಳಿಕ ಪ್ರಶ್ನೋತ್ತರ ವೇಳೆಯಲ್ಲಿ 'ನಾನು ಯಾವುದೇ ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವನಲ್ಲ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಟೀ ಮಾರಾಟ ಮಾಡಿ ಬಡತನ ಅಂದ್ರೆ ಏನು ಅಂತ ತಿಳಿದುಕೊಂಡೆ, ಅದರಿಂದಲೇ ಇವತ್ತು ನಾನು ಇಲ್ಲಿಗೆ ಬಂದಿದ್ದೇನೆ' ಎಂದು ಹೇಳಿದರು.

ಸಾಂದರ್ಭಿಕ ಚಿತ್ರ
author img

By

Published : Oct 30, 2019, 11:20 AM IST

ನವದೆಹಲಿ: ನಾನು ಯಾವುದೇ ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವನಲ್ಲ. ನಾನು ಪುಸ್ತಕಗಳಿಂದ ಬಡತನದ ಬಗ್ಗೆ ಕಲಿತಿಲ್ಲ. ಆದರೆ, ನಾನು ಅದರಲ್ಲಿ ಬದುಕಿದ್ದೇನೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಟೀ ಮಾರಾಟ ಮಾಡುವ ಮೂಲಕ ನಾನು ಇಲ್ಲಿಗೆ ಬಂದು ತಲುಪಿದ್ದೇನೆ ಎಂದು ಪ್ರಧಾನಿ ತಮ್ಮನ್ನು ತಾವು ವಿಶ್ಲೇಷಿಸಿಕೊಂಡರು.

ರಿಯಾದ್‌ನಲ್ಲಿ ನಡೆದ ಫ್ಯೂಚರ್ ಇನ್ವೆಸ್ಟ್‌ಮೆಂಟ್ ಇನಿಷಿಯೇಟಿವ್ (ಎಫ್‌ಐಐ) ವ್ಯವಹಾರ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಹೂಡಿಕೆ ತಾಣವಾಗಿ ಆಯ್ಕೆ ಮಾಡಿಕೊಳ್ಳಿ. ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಸೌದಿ ಕಂಪನಿಗಳಿಗೆ ಆಹ್ವಾನ ನೀಡಿದರು. ಆ ಬಳಿಕ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಮೋದಿ ಬಡತನದ ಕುರಿತು ತಮ್ಮ ಮೇಲಿನಂತೆ ಹೇಳಿದರು.

ಬಡವರ ಸಬಲೀಕರಣದಿಂದ ಬಡತನದ ವಿರುದ್ಧದ ಹೋರಾಟದಲ್ಲಿ ಗೆಲ್ಲಬಹುದು. ಒಬ್ಬ ಬಡವ ತನ್ನ ಬಡತನವನ್ನು ತಾನೇ ಕೊನೆಗೊಳಿಸುತ್ತೇನೆ ಎಂದು ಹೇಳಿದಾಗ, ಅದಕ್ಕಿಂತ ಹೆಚ್ಚಿನ ತೃಪ್ತಿ ನನಗೆ ಇಲ್ಲ. ನಮಗೆ ಬೇಕಾಗಿರುವುದು ಬಡವನಿಗೆ ಘನತೆಯನ್ನು ಒದಗಿಸುವುದು ಮತ್ತು ಬಡವನಿಗೂ ಅಧಿಕಾರ ನೀಡುವುದು ಎಂದು ಪ್ರಧಾನಿ ಹೇಳಿಕೊಂಡರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.