ETV Bharat / bharat

ನಿಷೇಧಿಸಲ್ಪಟ್ಟ ಜಾಹೀರಾತನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸಚಿವಾಲಯ ಸೂಚನೆ

author img

By

Published : Dec 5, 2020, 9:52 AM IST

ಮಾಧ್ಯಮಗಳಲ್ಲಿ ಆನ್​ಲೈನ್ ಗೇಮಿಂಗ್, ಫ್ಯಾಂಟಸಿ ಗೇಮ್ ಅಥವಾ ಸ್ಪೋರ್ಟ್ಸ್​ ಇತರೆ ಜಾಹೀರಾತುಗಳು ಹೆಚ್ಚಾಗಿ ಕಂಡು ಬಂದಿರುವ ಹಿನ್ನೆಲೆ ಎಲ್ಲಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ..

I&B ministry advises broadcasters not to promote activity prohibited by law
ನಿಷೇಧಿಸಲ್ಪಟ್ಟ ಜಾಹೀರಾತನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸಚಿವಾಲಯ ಸೂಚನೆ

ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಖಾಸಗಿ ಟಿವಿ ಚಾನೆಲ್​ಗಳಿಗೆ ಕಾನೂನು ಉಲ್ಲಂಘಸಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿದೆ.

ಈ ಕುರಿತು ಎಎಸ್​​​ಸಿಐ (ಜಾಹೀರಾತು ಮಾನದಂಡಗಳ ಪರಿಷತ್ತು) ಜಾಹೀರಾತು ಪ್ರಸಾರ ಕುರಿತಂತೆ ಮಾರ್ಗಸೂಚಿಗಳನ್ನು ನೀಡಿದ್ದು, ಖಾಸಗಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಎಲ್ಲಾ ಜಾಹೀರಾತುಗಳ ಮೇಲೆ ತಿಳಿಸಿರುವ ನಿಯಮಗಳಿಗೆ ಬದ್ಧವಾಗಿರುವಂತೆ ಎಲ್ಲಾ ಪ್ರಸಾರಕರಿಗೆ ಸೂಚಿಸಲಾಗಿದೆ.

ಕಾನೂನು ಅಥವಾ ಸರ್ಕಾರದಿಂದ ನಿಷೇಧಿಸಲ್ಪಟ್ಟ ಜಾಹೀರಾತುಗಳನ್ನು ಮಾಧ್ಯಮಗಳು ಉತ್ತೇಜಿಸುವುದಿಲ್ಲ ಎಂದು ಖಚಿತಪಡಿಸಬೇಕು ಎಂದು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೂ ಸಚಿವಾಲಯ ಪತ್ರದ ಮೂಲಕ ತಿಳಿಸಿದೆ.

ಮಾಧ್ಯಮಗಳಲ್ಲಿ ಆನ್​ಲೈನ್ ಗೇಮಿಂಗ್, ಫ್ಯಾಂಟಸಿ ಗೇಮ್ ಅಥವಾ ಸ್ಪೋರ್ಟ್ಸ್​ ಇತರೆ ಜಾಹೀರಾತುಗಳು ಹೆಚ್ಚಾಗಿ ಕಂಡು ಬಂದಿರುವ ಹಿನ್ನೆಲೆ ಎಲ್ಲಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಅಂತಹ ಜಾಹೀರಾತುಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಗ್ರಾಹಕರಿಗೆ ಹಣಕಾಸಿನ ತೊಂದರೆ ಮತ್ತು ಅಪಾಯವನ್ನು ಸರಿಯಾಗಿ ವಿವರಿಸುತ್ತಿಲ್ಲ. ಇವು ಕೇಬಲ್ ಟಿವಿ ನಿಯಂತ್ರಣ ಕಾಯ್ದೆಯಡಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ.

ಈ ವಿಚಾರದ ಸಂಬಂಧ ಚರ್ಚೆ ಮತ್ತು ಸಮಾಲೋಚನೆಯ ನಂತರ, ಜಾಹೀರಾತುಗಳು ಪಾರದರ್ಶಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಗ್ರಾಹಕರ ನೆರವಿಗಾಗಿ ಎಎಸ್​ಸಿಐ ಜಾಹೀರಾತುದಾರರು ಮತ್ತು ಪ್ರಸಾರಕರ ಅನುಕೂಲಕ್ಕಾಗಿ ಸೂಕ್ತ ಮಾರ್ಗಸೂಚಿ ಹೊರಡಿಸಲಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಒಟಿಟಿಗೆ ಮೂಗುದಾರ ಬೆನ್ನಲ್ಲೇ ಅಶ್ಲೀಲ ಜಾಹೀರಾತು ನಿಷೇಧಕ್ಕೆ ಮಧುರೈ ಹೈಕೋರ್ಟ್​ ಪೀಠ ಆದೇಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.