ಹೈದರಾಬಾದ್: ಅಪರಾಧಗಳ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮರಾಗಳ ಬಳಕೆಯಲ್ಲಿ ಹೈದರಾಬಾದ್ಗೆ ಮಾನ್ಯತೆ ಸಿಕ್ಕಿದೆ. ಗರಿಷ್ಠ ಸಂಖ್ಯೆಯ ಸಿಸಿಟಿವಿ ಕ್ಯಾಮರಾಗಳನ್ನು ಹೊಂದಿರುವ ವಿಶ್ವದ 150 ನಗರಗಳ ಪಟ್ಟಿಯಲ್ಲಿ ಹೈದರಾಬಾದ್ 16ನೇ ಸ್ಥಾನದಲ್ಲಿದೆ.
ಲಂಡನ್ ಮೂಲದ ಕ್ಯಾಂಪರಿಟೆಕ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದು ಬಂದಿದೆ. ಸಾವಿರ ಜನರಿರುವ ವ್ಯಾಪ್ತಿಗೆ 30 ಕ್ಯಾಮರಾದಂತೆ ಒಂದು ಕೋಟಿ ಜನರ ಮೇಲೆ ನಿಗಾ ಇಡಲು 3 ಲಕ್ಷ ಕ್ಯಾಮರಾಗಳನ್ನು ಹೈದರಾಬಾದ್ನಲ್ಲಿ ಅಳವಡಿಸಲಾಗಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ. 38.91 ಲಕ್ಷ ಜನಸಂಖ್ಯೆಗೆ 4.65 ಲಕ್ಷ ಕ್ಯಾಮರಾಗಳನ್ನು ಹೊಂದಿರುವ ಚೀನಾದ ತೈವಾನ್ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.
-
UK #Comparitech Rept : #HyderabadCity with 3Lakh surveillance cameras ranked 16 among the Top20 #MostSurveilledCities across the world. (*Usage, No.of cameras & Safety).
— DGP TELANGANA POLICE (@TelanganaDGP) July 23, 2020 " class="align-text-top noRightClick twitterSection" data="
Congratulations to all the stakeholders firstly #TheCommunities for making the city a safer place to live in. pic.twitter.com/a0JpFh6pWp
">UK #Comparitech Rept : #HyderabadCity with 3Lakh surveillance cameras ranked 16 among the Top20 #MostSurveilledCities across the world. (*Usage, No.of cameras & Safety).
— DGP TELANGANA POLICE (@TelanganaDGP) July 23, 2020
Congratulations to all the stakeholders firstly #TheCommunities for making the city a safer place to live in. pic.twitter.com/a0JpFh6pWpUK #Comparitech Rept : #HyderabadCity with 3Lakh surveillance cameras ranked 16 among the Top20 #MostSurveilledCities across the world. (*Usage, No.of cameras & Safety).
— DGP TELANGANA POLICE (@TelanganaDGP) July 23, 2020
Congratulations to all the stakeholders firstly #TheCommunities for making the city a safer place to live in. pic.twitter.com/a0JpFh6pWp
ಟಾಪ್ 50 ಸ್ಥಾನಗಳಲ್ಲಿ ದೆಹಲಿ ಮತ್ತು ಚೆನ್ನೈ ನಗರಗಳಿವೆ. 1.09 ಕೋಟಿ ಜನಸಂಖ್ಯೆಗೆ 2.8 ಲಕ್ಷ ಕ್ಯಾಮರಾಗಳನ್ನು ಹೊಂದಿದ್ದಕ್ಕಾಗಿ ಚೆನ್ನೈ 21ನೇ ಸ್ಥಾನದಲ್ಲಿದ್ದರೆ, 3.02 ಕೋಟಿ ಜನಸಂಖ್ಯೆಗೆ 4.29 ಲಕ್ಷ ಕ್ಯಾಮರಾಗಳನ್ನು ಅಳವಡಿಸಿದ್ದಕ್ಕಾಗಿ ದೆಹಲಿ 33ನೇ ಸ್ಥಾನದಲ್ಲಿದೆ.
ಈ ವರದಿಯಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಟಾಪ್ 20 ನಗರಗಳಲ್ಲಿ 18 ನಗರಗಳು ಚೀನಾ ದೇಶದ್ದೇ ಆಗಿದ್ದು, ಹೈದರಾಬಾದ್ ಮತ್ತು ಲಂಡನ್ ಮಾತ್ರ ಇತರ ದೇಶದ ನಗರಗಳಾಗಿವೆ.