ಹೈದರಾಬಾದ್: ದಾವೂದ್ ಇಬ್ರಾಹಿಂನ ಆಪ್ತ, ಲಷ್ಕರ್ ಉಗ್ರಗಾಮಿ ಅಬ್ದುಲ್ ಕರೀಮ್ ತುಂಡಾನನ್ನು ಭಾರತ-ನೇಪಾಳ ಗಡಿಯಲ್ಲಿ ಸೆರೆಹಿಡಿಯುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ಇದೀಗ ಆತನನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದು, ಶನಿವಾರ ಕೋರ್ಟ್ಗೆ ಹಾಜರುಪಡಿಸಿದ್ದರು.
ತೆಲಂಗಾಣದ ಸಿಕಂದರಾಬಾದ್‌ನ ಗಣೇಶ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣದ ವಿಚಾರಣೆಗಾಗಿ ಆತನನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಲಯವು ಅ. 15 ರವರೆಗೆ ಈತನನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದೆ. ಎಸ್‌ಐಟಿ ಅಧಿಕಾರಿಗಳು ಅಬ್ದುಲ್ ಕರೀಮ್‌ನನ್ನು ಚಂಚಲ್‌ಗುಡ ಜೈಲಿಗೆ ರವಾನಿಸಿದ್ದಾರೆ.
ಉಗ್ರ ಕರೀಮ್ ಭಾರತದಲ್ಲಿ ನಡೆದ 40ಕ್ಕೂ ಹೆಚ್ಚು ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಅತಿ ಹೆಚ್ಚಿನ ದಾಳಿಗಳನ್ನು ಉತ್ತರಪ್ರದೇಶ, ದೆಹಲಿ ಹಾಗೂ ಪಂಜಾಬ್‌ನಲ್ಲಿ ನಡೆಸಿದ್ದಾನೆ. ಅಲ್ಲದೇ ಈತ ದಾವೂದ್ ಇಬ್ರಾಹಿಂನ ಸಹಚರ ಮತ್ತು ಲಷ್ಕರ್ ಸಂಘಟನೆಯವ ಎಂದು ತಿಳಿದುಬಂದಿದೆ.