ಚಿತ್ತೂರು(ಆಂಧ್ರಪ್ರದೇಶ): ಹೆಂಡತಿ ಸಾವಿನಿಂದ ಆಘಾತಗೊಂಡ ಗಂಡನೋರ್ವ ಆಕೆಯ ಸಮಾಧಿ ಬಳಿ ನೇಣಿಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಬಳಿ ನಡೆದಿದೆ.
ಚಿತ್ತೂರು ಜಿಲ್ಲೆಯ ಕಾಂಗೊಂಡಿ ಕಾಲೋನಿಯಲ್ಲಿ ಗಂಡ-ಹೆಂಡತಿ ವಾಸವಾಗಿದ್ದರು. ಆದರೆ ಕಳೆದ ಎರಡು ತಿಂಗಳ ಹಿಂದೆ ನಯನಪ್ಪ ಹೆಂಡತಿ ನಿಧನರಾಗಿದ್ದರು. ಪತ್ನಿ ತೀರಿಕೊಂಡಾಗಿನಿಂದಲೂ ಈತ ಸರಿಯಾಗಿ ಊಟ ಮಾಡ್ತಿರಲಿಲ್ಲ ಎನ್ನಲಾಗಿದ್ದು, ಇಂದು ಪತ್ನಿ ಉಟ್ಟುಕೊಳ್ಳುತ್ತಿದ್ದ ಸೀರೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಕುಪ್ಪಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ತಿಂಗಳಿಂದಲೂ ಹೆಂಡತಿ ನೆನಪಿನಲ್ಲೇ ಕಾಲ ಕಳೆದಿದ್ದ ಈತ ಕೊನೆಗೂ ಸಮಾಧಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಂಡತಿ ಸಮಾಧಿ ಪಕ್ಕದಲ್ಲೇ ಈತನ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.