ETV Bharat / bharat

ವಿಶಾಖಪಟ್ಟಣಂ ಕ್ರೇನ್ ದುರಂತ: ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಉದ್ಯೋಗ - HSL Director Sarath Babu

ಆಂಧ್ರದ ವಿಶಾಖಪಟ್ಟಣಂನಲ್ಲಿ ಸಂಭವಿಸಿದ ಕ್ರೇನ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವ ಭರವಸೆಯನ್ನು ಎಚ್‌ಎಸ್‌ಎಲ್ ಕಂಪನಿ ನೀಡಿದೆ.

dsd
ವಿಶಾಖಪಟ್ಟಣಂ ಕ್ರೇನ್ ದುರಂತ
author img

By

Published : Aug 3, 2020, 9:50 AM IST

ವಿಶಾಖಪಟ್ಟಣಂ: ಕ್ರೇನ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರತ್ ಬಾಬು ಹೇಳಿದ್ದಾರೆ.

ಆಗಸ್ಟ್ 1 ರಂದು ವಿಶಾಖಪಟ್ಟಣಂನ ಎಚ್‌ಎಸ್‌ಎಲ್‌ನಲ್ಲಿ ಕ್ರೇನ್​ನಡಿ ಸಿಲುಕಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಕ್ರೇನ್​ನ ಲೋಡ್ ಸಾಮರ್ಥ್ಯವನ್ನು ಪರೀಕ್ಷಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿತ್ತು. ಮೃತಪಟ್ಟ 11 ಜನರಲ್ಲಿ ನಾಲ್ವರು ಎಚ್‌ಎಸ್‌ಎಲ್ ನೌಕರರು ಮತ್ತು ಏಳು ಮಂದಿ ಗುತ್ತಿಗೆ ಏಜನ್ಸಿಗಳ ಕಾರ್ಮಿಕರಾಗಿದ್ದಾರೆ.

ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಘಟನೆಯ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ವಿನಯ್ ಚಂದ್ ಸಮಿತಿಯನ್ನು ಸಹ ರಚನೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.