ETV Bharat / bharat

ಶಾಂತವಾಗಿದ್ದ ರೈತ ಚಳವಳಿ 'ಕೆಂಪು' ಆಗಿದ್ದು ಹೇಗೆ?.. ಅಲ್ಲೋಲ ಕಲ್ಲೋಲವಾದ ರಾಷ್ಟ್ರರಾಜಧಾನಿಯ ಫುಲ್ ಡೀಟೇಲ್ಸ್​

author img

By

Published : Jan 27, 2021, 10:20 AM IST

72ನೇ ಗಣರಾಜ್ಯೋತ್ಸವ ದಿನದಂದು ದೆಹಲಿ ರಣರಂಗವಾಗಿ ಬದಲಾಗಿತ್ತು. ಕೆಂಪುಕೋಟೆಯನ್ನು ಆಕ್ರಮಿಸಿದ ರೈತರ ಚಳವಳಿ ಹಿಂಸಾತ್ಮಕ ರೂಪ ಪಡೆದಿತ್ತು ಅದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

Red Fort
ಕೆಂಪುಕೋಟೆ ಮೇಲೆ ಮುತ್ತಿಗೆ ಹಾಕಿದ ರೈತರು

ನವದೆಹಲಿ: ದೇಶದ ಗಣತಂತ್ರ ದಿನದಂದು ದೆಹಲಿ ರಣರಂಗವಾಗಿ ಬದಲಾಗಿತ್ತು. ರೈತರ ಟ್ರ್ಯಾಕ್ಟರ್​ ಪರೇಡ್​ಗೆ ಗೊತ್ತುಪಡಿಸಿದ ಮಾರ್ಗದಿಂದ ಪ್ರತಿಭಟನಾಕಾರರು ಉದ್ವಿಗ್ನತೆ ಸೃಷ್ಟಿಸಿದ ನಂತರ ಕಳೆದ ಎರಡು ತಿಂಗಳಿನಿಂದ ಶಾಂತಿಯುತವಾಗಿದ್ದ ರೈತರ ಚಳವಳಿ ಹಿಂಸಾತ್ಮಕ ರೂಪ ಪಡೆಯಿತು.

ರೈತರು ಮತ್ತು ಪೊಲೀಸರ ನಡುವಿನ ಘರ್ಷಣೆಯ ನಂತರ ನೂರಾರು ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯನ್ನು ಬೆನ್ನಟ್ಟಿದ್ದಲ್ಲದೆ, ತಮ್ಮ ಟ್ರ್ಯಾಕ್ಟರುಗಳ ಮೂಲಕ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಲು ಮುಂದಾದರು. ಇವಷ್ಟೇ ಅಲ್ಲದೆ, ದೇಶದ ಹೆಮ್ಮೆಯ ಕೆಂಪು ಕೋಟೆಯ ಮೇಲೆ ಏರಿ ತಮ್ಮ ಧ್ವಜ ಹಾರಿಸಿಯೇ ಬಿಟ್ಟರು.

'ಜೈ ಜವಾನ್, ಜೈ ಕಿಸಾನ್' ಘೋಷಣೆಗಳನ್ನು ಕೂಗುತ್ತಾ ಧ್ವಜಗಳೊಂದಿಗೆ ತಮ್ಮ ಟ್ರ್ಯಾಕ್ಟರುಗಳಲ್ಲಿ ನೂರಾರು ರೈತರು ರಾಷ್ಟ್ರದ ವಿವಿಧ ಭಾಗಗಳಿಂದ ಮಧ್ಯ ದೆಹಲಿಯನ್ನು ತಲುಪಿದರು. ದಾರಿಯಲ್ಲಿ ಎಲ್ಲಾ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು, ಮಧ್ಯಾಹ್ನ 1.45ರ ಸುಮಾರಿಗೆ ರೈತರು ಕೆಂಪುಕೋಟೆಗೆ ಮುತ್ತಿಕ್ಕಿದರು. ವಿಶ್ವಪರಂಪರೆ ತಾಣವಾದ ಕೆಂಪುಕೋಟೆಯಲ್ಲಿ ಧ್ವಜಗಳನ್ನು ಹಾರಾಡಿಸಿದರು. ಬಳಿಕ ಪ್ರಧಾನಿ ಧ್ವಜಾರೋಹಣ ಮಾಡುವ ಸ್ತಂಭದಲ್ಲಿ ನಿಶಾನ್ ಸಾಹಿಬ್ ಧ್ವಜವನ್ನು ಹಾರಿಸಿದರು.

ಅಷ್ಟೇ ಅಲ್ಲದೆ, ಕೆಲವು ರೈತರು ಐತಿಹಾಸಿಕ ಸ್ಮಾರಕದ ಗುಮ್ಮಟದ ಮೇಲೆ ಏರಿ ತಮ್ಮ ಖಡ್ಗಗಳನ್ನು ಬೀಸುತ್ತಿರುವುದು ಕಂಡುಬಂತು. ನಂತರ ಪೊಲೀಸರು ಕೆಂಪು ಕೋಟೆಯಿಂದ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾಗ ಧ್ವಜವನ್ನು ತೆಗೆಹಾಕಿದರು.

ಮಧ್ಯಾಹ್ನ 3.30 ರ ಸುಮಾರಿಗೆ ನೂರಾರು ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾಗಿದರು. ಘಟನೆಯಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸುವುದರ ಜೊತೆಗೆ ಪೊಲೀಸ್ ಸಿಬ್ಬಂದಿಗೆ ಕಲ್ಲುಗಳಿಂದ ಹೊಡೆದಿದ್ದಾರೆ. ಶಾಂತರೂಪದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ್ದರಿಂದ ರಾಷ್ಟ್ರ ರಾಜಧಾನಿಯಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು.

ಈ ವೇಳೆ ಸಿಆರ್‌ಪಿಎಫ್‌ನ ಭಾರಿ ನಿಯೋಜನೆಯು ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತಂದಿತು. ಎರಡು ಗಂಟೆಗಳಿಗೂ ಹೆಚ್ಚು ಕಾಲ ಐತಿಹಾಸಿಕ ತಾಣಕ್ಕೆ ಮುತ್ತಿಗೆ ಹಾಕಿದ ನಂತರ ಪ್ರತಿಭಟನಾಕಾರರು ಸಂಜೆ 5.15 ರ ಸುಮಾರಿಗೆ ಅಲ್ಲಿಂದ ತೆರಳಲು ಮುಂದಾದರು.

ಇತಿಹಾಸದಲ್ಲೇ ಮೊದಲ ಬಾರಿ ನಡೆದ ಈ ಅನಿರೀಕ್ಷಿತ ಘಟನೆಯಿಂದ ದೇಶವೇ ಒಮ್ಮೆ ಶಾಕ್​ ಆಗಿದ್ದಂತೂ ನಿಜ. ಈ ಬಗ್ಗೆ ಹೇಳಿಕೆ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ, "ಇಂತಹ ಅನಪೇಕ್ಷಿತ ಮತ್ತು ಸ್ವೀಕಾರಾರ್ಹವಲ್ಲದ ಘಟನೆಗಳನ್ನು ನಾವು ಖಂಡಿಸುತ್ತೇವೆ ಮತ್ತು ವಿಷಾದಿಸುತ್ತೇವೆ. ಅಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಗೆ ನಾವು ಬೆಂಬಲಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.