ETV Bharat / bharat

ವಿಶ್ವದ ಮಾಲಿನ್ಯದಲ್ಲಿ ಭಾರಿ ಕುಸಿತ: ಅನುಭವದಿಂದ ಪಾಠ ಕಲಿಯಿರಿ ಎಂದ ವಿಶ್ವ ಆರ್ಥಿಕ ಫೋರಂ - climate change

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹೆಚ್ಚಳವನ್ನು ತಡೆಯುವ ನಿಟ್ಟಿನಲ್ಲಿ ಇಡೀ ವಿಶ್ವದ ಬಹುತೇಕ ದೇಶಗಳು ಲಾಕ್ಡೌನ್ ಆಗಿದ್ದು, ಮಾಲಿನ್ಯ ಪ್ರಮಾಣ ಭಾರಿ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ಸಮಯದಲ್ಲಿ ಕಲಿತ ಪಾಠಗಳನ್ನು ಬಳಸಿಕೊಳ್ಳುವಂತೆ ವಿಶ್ವ ಆರ್ಥಿಕ ಫೋರಂ ಐದು ಸಲಹೆಗಳನ್ನು ನೀಡಿದೆ.

COVID-19
ಕೊರೊನಾ ವೈರಸ್
author img

By

Published : Apr 7, 2020, 2:39 PM IST

ಹೈದರಾಬಾದ್: ಕೊರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ 21 ದಿನಗಳವರೆಗೆ ದೇಶಾದ್ಯಂತ ಲಾಕ್​​ಡೌನ್​​​ ಘೋಷಣೆ ಮಾಡಲಾಗಿದ್ದು, ದೇಶದಲ್ಲಿ ಕಂಡುಬರುತ್ತಿದ್ದ ವಾಯುಮಾಲಿನ್ಯದ ಪ್ರಮಾಣ ಗಮನಾರ್ಹವಾಗಿ ಇಳಿಕೆಯಾಗಿದೆ. ನಿರ್ಮಾಣ ಚಟುವಟಿಕೆ ಮತ್ತು ವಾಹನ ದಟ್ಟಣೆಯಿಂದ ಸಾಮಾನ್ಯವಾಗಿ ವಾಯುಮಾಲಿನ್ಯ ಉಂಟಾಗುತ್ತಿತ್ತು. ಆದರೆ, ಇಡೀ ದೇಶವೇ ಸ್ತಬ್ದವಾಗಿದ್ದರಿಂದಾಗಿ, 103 ನಗರಗಳ ಪೈಕಿ 23 ನಗರಗಳು ಉತ್ತಮ ವಾಯು ಗುಣಮಟ್ಟವನ್ನು ದಾಖಲಿಸಿವೆ. ಇನ್ನು 65 ನಗರಗಳು ‘ಸಂತೃಪ್ತಿಕರ’ ವಾಯು ಗುಣಮಟ್ಟವನ್ನು ದಾಖಲಿಸಿವೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿ ಮಾಡಿದೆ. 0-50ರ ಮಧ್ಯದ ಎಕ್ಯೂಯ ಅನ್ನು ಉತ್ತಮ, 51-100 ಸಂತೃಪ್ತಿಕರ ವಾಯು ಗುಣಮಟ್ಟ ಎಂದು ದಾಖಲಿಸಲಾಗುತ್ತದೆ. ವಿಭಿನ್ನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಾಯು ಗುಣಮಟ್ಟವನ್ನು ಅಳೆಯಲಾಗುತ್ತದೆ.

ಇದನ್ನು ವಾಯುಗುಣಮಟ್ಟ ಸೂಚ್ಯಂಕದ ಮೂಲಕ ಗುರುತಿಸಲಾಗುತ್ತದೆ. ಎಕ್ಯೂಐ ಕಡಿಮೆ ಇದ್ದಷ್ಟೂ, ವಾಯು ಗುಣಮಟ್ಟ ಉತ್ತಮವಾಗಿದೆ ಎಂದರ್ಥ. ಕೇಂದ್ರ ಸರ್ಕಾರ ಸ್ವಾಮಿತ್ವದ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (ಎಸ್ಎಎಫ್ಎಆರ್) ಪ್ರಕಾರ, ಕೊರೊಮನಾವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಕೈಗೊಂಡ ಕ್ರಮಗಳಿಂದಾಗಿ ದೆಹಲಿಯಲ್ಲಿ ಪಿಎಂ 2.5 (ಫೈನ್ ಪರ್ಟಿಕ್ಯುಲೇಟ್ ಮಾಲಿನ್ಯಕಾರಕ) ಶೇ. 30 ರಷ್ಟು ಇಳಿದಿದೆ ಮತ್ತು ಅಹಮದಾಬಾದ್ ಹಾಗೂ ಪುಣೆಯಲ್ಲಿ ಶೇ. 15 ರಷ್ಟು ಇಳಿಕೆ ಕಂಡಿದೆ. ಉಸಿರಾಟ ಸಮಸ್ಯೆಯ ಅಪಾಯವನ್ನು ಹೆಚ್ಚಿಸಬಹುದಾದ ನೈಟ್ರೊಜನ್ ಆಕ್ಸೈಡ್ (ಎನ್ಒಎಕ್ಸ್) ಪಾಲಿನ್ಯವು ಕೂಡ ಕಡಿಮೆಯಾಗಿದೆ.

ನೈಟ್ರೋಜನ್ ಆಕ್ಸೈಡ್ ಮಾಲಿನ್ಯಕ್ಕೆ ಮುಖ್ಯ ಕಾರಣವೇ ವಾಹನ ದಟ್ಟಣೆ ಹೆಚ್ಚಳವಾಗಿದೆ. ಪುಣೆಯಲ್ಲಿ, ನೈಟ್ರೋಜನ್ ಆಕ್ಸೈಡ್ ಮಾಲಿನ್ಯದ ಪ್ರಮಾಣ ಶೇ. 43 ರಷ್ಟು ಕುಸಿದಿದೆ ಮತ್ತು ಮುಂಬೈನಲ್ಲಿ ಶೇ. 38 ರಷ್ಟು, ಅಹಮದಾಬಾದ್​​​​​ನಲ್ಲಿ ಶೇ. 50 ರಷ್ಟು ಇಳಿಕೆ ಕಂಡಿದೆ. ಎಸ್ಎಎಫ್ಎಎಆರ್ನಲ್ಲಿನ ವಿಜ್ಞಾನಿ ಗುಫ್ರನ್ ಬೇಗ್ ಹೇಳುವಂತೆ, ಮಾರ್ಚ್​​ನಲ್ಲಿ ಸಾಮಾನ್ಯವಾಗಿ ಮಾಲಿನ್ಯ ಮಧ್ಯಮ ಪ್ರಮಾಣದಲ್ಲಿರುತ್ತದೆ. ಆಗ ವಾಯು ಗುಣಮಟ್ಟ ಸೂಚ್ಯಂಕವು 100-200 ಇರುತ್ತದೆ. ಆದರೆ ಸದ್ಯ, ಸಂತೃಪ್ತಿಕರ (ಎಕ್ಯೂಐ 50-100) ಅಥವಾ “ಉತ್ತಮ” (ಎಕ್ಯೂಐ 0-50) ಮಟ್ಟದಲ್ಲಿದೆ. ಐಕ್ಯೂಏರ್ ಏರ್ ವಿಶುವಲ್ನ 2019ರ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ ವಿಶ್ವದ ಅತಿ ಹೆಚ್ಚು ಮಲಿನ ನಗರಗಳ ಪೈಕಿ ಭಾರತದಲ್ಲಿ 21 ನಗರಗಳು ಇದ್ದು, ಈ ಅಂಕಿ ಅಂಶ ಅತ್ಯಂತ ಮಹತ್ವದ್ದಾಗಿದೆ.

ಈ ಸನ್ನಿವೇಶ ಭಾರತಲ್ಲಿ ಮಾತ್ರ ಕಂಡುಬಂದಿಲ್ಲ. ಇದೇ ರೀತಿಯ ಮಾಲಿನ್ಯ ಪ್ರಮಾಣದಲ್ಲಿ ಕುಸಿತವು ಜಗತ್ತಿನ ಎಲ್ಲ ಕಡೆ ಕಂಡುಬಂದಿದೆ. ಇತ್ತೀಚೆಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಬಿಡುಗಡೆ ಮಾಡಿದ ಸ್ಯಾಟಲೈಟ್ ಡೇಟಾದ ಪ್ರಕಾರ, ನೈಟ್ರೋಜನ್ ಡೈ ಆಕ್ಸೈಡ್​​​ನಿಂದ ಉಂಟಾಗುತ್ತಿದ್ದ ವಾಯು ಮಾಲಿನ್ಯವು ಮೂರು ಯುರೋಪಿಯನ್ ನಗರಗಳಲ್ಲಿ ಅಂದಾಜು ಶೇ. 40 ರಷ್ಟು ಕುಸಿತ ಕಂಡಿದೆ.

ಇದೇ ನಿಟ್ಟಿನಲ್ಲಿ, ಜಾಗತಿಕ ಹವಾಮಾನ ಬದಲಾವಣೆ ವಿಪತ್ತನ್ನು ನಿರ್ವಹಿಸಲು ವಿಶ್ವ ಆರ್ಥಿಕ ಫೋರಖ (ಡಬ್ಲ್ಯೂಇಎಫ್) ಐದು ಸಲಹೆಗಳನ್ನು ಮುಂದಿಟ್ಟಿದೆ. ಇತ್ತೀಚೆಗೆ “ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಕೋವಿಡ್ 19 ಹೇಗೆ ನಮಗೆ ಸಹಾಯ ಮಾಡಬಹುದು” ಎಂಬ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಡಬ್ಲ್ಯೂಇಎಫ್ ಈ ಮುಂದಿನ ಪ್ರಸ್ತಾವನೆಗಳನ್ನು ಮಾಡಿದೆ:

ರಿಸ್ಕ್ ಬಗ್ಗೆ ಪುನಃ ಯೋಚಿಸಿ:

ಸರ್ಕಾರಗಳು, ಉದ್ಯಮಗಳು ಮತ್ತು ವ್ಯಕ್ತಿಗಳು ಅತ್ಯಂತ ತ್ವರಿತಗತಿಯಲ್ಲಿ ಒಟ್ಟಾಗಿ ಕೆಲಸ ಮಾಡುವುದು ಸಾಧ್ಯ ಎಂಬುದನ್ನು ಒಂದು ವಿಪತ್ತು (ಕೊರೊನಾವೈರಸ್ ಹರಡುವಿಕೆ) ತೋರಿಸಿಕೊಟ್ಟಿದೆ. ಹವಾಮಾನ ಬದಲಾವಣೆಯೂ ಕೂಡ ಇದೇ ರೀತಿಯ ಮತ್ತು ಗಂಭೀರವಾದ ಪ್ರಮಾಣದಲ್ಲಿ ಮಾನವನ ಜೀವಕ್ಕೆ ಮಾರಕವಾಗಿದೆ. ಇದಕ್ಕೆ ತುರ್ತಾಗಿ ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದು ಡಬ್ಲ್ಯೂಇಎಫ್ ಹೇಳಿದೆ. ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ 2050ರ ವೇಳೆಗೆ ಹವಾಮಾನ ಬದಲಾವಣೆಯಿಂದಾಗಿ 500,000 ವಯಸ್ಕರು ಸಾವನ್ನಪ್ಪುತ್ತಾರೆ ಎಂದು ಲ್ಯಾನ್ಸೆಟ್ ಊಹಿಸಿದ್ದಾರೆ. ಸಾಂಕ್ರಾಮಿಕ ರೋಗಗಳು ಮತ್ತು ಹವಾಮಾನ ಸಂಬಂಧಿ ವಿಪತ್ತುಗಳಂತಹ ವಿಪರೀತ ಪ್ರಮಾಣದ ಆಘಾತವನ್ನು ತಡೆಯಲು ನಾವು ಶ್ರಮಿಸಬಹುದು ಎಂಬುದನ್ನು ಈ ಸಾಂಕ್ರಾಮಿಕ ರೋಗವು ನಮಗೆ ಕಲಿಸಿಕೊಟ್ಟಿದೆ. ಹೀಗಾಗಿ, ನಾವು ಇಂಥ ಸನ್ನಿವೇಶವನ್ನು ಎದುರಿಸಲು ಖಂಡಿತವಾಗಿಯೂ ಸಜ್ಜಾಗಿದ್ದೇವೆ ಎಂಬ ಅರ್ಥವನ್ನು ಇದು ನೀಡುತ್ತದೆ.

ಜಾಗತಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಿ: ಕೋವಿಡ್ 19 ವಿಪತ್ತು ಜಾಗತಿಕ ಮಟ್ಟದ್ದಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ ಎಂಬುದನ್ನು ಸಾಬೀತುಪಡಿಸುವ ಅಗತ್ಯವನ್ನು ಮೂಡಿಸಿದೆ. ಇಟಲಿಗೆ ಚೀನಾ ಸಹಾಯ ಮಾಡುವುದು ಕೇವಲ ಭೌಗೋಳಿಕ ದೃಷ್ಟಿಕೋನದ ಬದಲಾವಣೆ ಮಾತ್ರವಲ್ಲ. ಇದು “ಬೇರೆಯವರು” ಎಂಬ ಭಾವವನ್ನೇ ನಿರ್ಮೂಲಗೊಳಿಸುತ್ತಿದೆ. ಒಂದು ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವ ಘಟನೆಗಳು ನಮ್ಮೆಲ್ಲರಿಗೂ ಬಾಧಿಸಬಹುದು ಎಂಬುದನ್ನು ಇದು ತೋರಿಸುತ್ತಿದೆ.

ದೇಶಗಳು ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುತ್ತವೆಯೇ ಅಥವಾ ಜಾಗತಿಕವಾಗಿ ಸಹೋದರತ್ವ ಭಾವವನ್ನು ವ್ಯಕ್ತಪಡಿಸುತ್ತವೆಯೇ ಎಂಬುದನ್ನು ಕೋವಿಡ್ 19 ಎಂಬ ಜಡ್ಜ್ ವೀಕ್ಷಿಸುತ್ತಿದ್ದಾರೆ. ವಿವಿಧ ಭೌಗೋಳಿಕ ವಲಯ ಮತ್ತು ಸನ್ನಿವೇಶದಲ್ಲಿ ಬಂಧಿಯಾಗಿರುವ ನಾವು ಒಟ್ಟಾರೆಯಾಗಿ ಒಬ್ಬರಿಗೊಬ್ಬರು ಸಂಪರ್ಕ ಹೊಂದಿರುತ್ತೇವೆ ಎಂಬ ಭಾವ ಈಗ ಹೆಚ್ಚುತ್ತಿದೆ. ಈ ಭಾವವೇ ಹವಾಮಾನ ಬದಲಾವಣೆಯ ವಿರುದ್ಧ ಕ್ರಮ ತೆಗೆದುಕೊಳ್ಳಲೂ ಸಹಾಯ ಮಾಡುತ್ತದೆ.

ಜನರೇ ಆದ್ಯತೆಯಾಗಲಿ: ಕೋವಿಡ್ 19 ರೋಗ ಹರಡುತ್ತಿರುವ ಈ ಸನ್ನಿವೇಶದಲ್ಲಿ ರೋಗಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಬಾಧಿತ ಸಮೂಹಗಳ ನೆರವಿಗೆ ವ್ಯಕ್ತಿಗಳು, ಉದ್ಯಮಗಳು ಮತ್ತು ಸರ್ಕಾರಗಳು ಒಂದಾಗಿವೆ. ಕೋಟ್ಯಂತರ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕಾಗಿ ತಮ್ಮ ಜೀವನ ವಿಧಾನವನ್ನು ಬದಲಿಸಿಕೊಳ್ಳುತ್ತಿದ್ದಾರೆ, ವೃದ್ಧರಿಗೆ ಸಹಾಯ ಮಾಡುತ್ತಿದ್ದಾರೆ, ಆರೋಗ್ಯ ಸೇವೆ ಘಟಕಗಳು ಮತ್ತು ಆಹಾರ ವಿತರಣೆ ಕೇಂದ್ರಗಳಲ್ಲಿ ಸ್ವಯಂ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ನಾವೆಲ್ಲರೂ ಒಂದು ಉದ್ದೇಶವನ್ನಿಟ್ಟುಕೊಂಡು ಒಂದಾಗಬಹುದು ಮತ್ತು ಅದರ ಶಕ್ತಿ ಅಪಾರವಾಗಿರುತ್ತದೆ ಎಂಬುದನ್ನು ತೋರಿಸುತ್ತಿದ್ದಾರೆ. ಉದ್ಯಮಗಳು ತಮ್ಮ ಉತ್ಪಾದನೆ ವಲಯವನ್ನು ಬದಲಿಸಿಕೊಂಡು, ವೈದ್ಯಕೀಯ ಮತ್ತು ನೈರ್ಮಲ್ಯ ಸಾಮಗ್ರಿಗಳನ್ನು ಉತ್ಪಾದಿಸುತ್ತಿವೆ. ತಮ್ಮ ಆನ್ಲೈನ್ ಪ್ಲಾಟ್ಫಾರಂಗಳನ್ನು ಉಚಿತವಾಗಿ ಒದಗಿಸುತ್ತಿವೆ ಮತ್ತು ವೇತನ ಹೆಚ್ಚಳದಂತಹ ಕ್ರಮಗಳನ್ನು ಕೈಗೊಂಡು ತಮ್ಮ ಉದ್ಯೋಗಿಗಳಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿವೆ. ಕೊರೊನಾವೈರಸ್ನಿಂದ ಬಾಧಿತರಿಗೆ ಸಹಾಯ ಮಾಡುವುದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಸರ್ಕಾರಗಳು ಅತ್ಯಂತ ತೀವ್ರವಾಗಿ ಸ್ಪಂದಿಸಿ ತಮ್ಮ ನಾಗರಿಕರಿಗೆ ಸಹಾಯ ಮಾಡುತ್ತಿವೆ. ಒಂದು ಜಾಗತಿಕ ವಿಪತ್ತಿಗೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ನೀಡುವುದು ಸಾಧ್ಯವಿದೆ ಎಂಬುದನ್ನು ಈ ಎಲ್ಲ ಉಪಕ್ರಮಗಳು ನಮಗೆ ತೋರಿಸುತ್ತಿವೆ. ಈ ಬದ್ಧತೆ ಮತ್ತು ಕ್ರಿಯಾತ್ಮಕತೆಯನ್ನು ನಾವು ರಕ್ಷಿಸಬೇಕಿದೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಬಾಧಿತ ಜನರ ರಕ್ಷಣೆಗೆ ನಿಲ್ಲಬೇಕಿದೆ.

ಪರಿಣಿತರ ಮೇಲೆ ವಿಶ್ವಾಸವಿರಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ನಮಗೆ ತೂಗುಗತ್ತಿಯಾಗಿರುವ ಈ ಸಮಯದಲ್ಲಿ ಜ್ಞಾನಕ್ಕೆ ಹೆಚ್ಚು ಮಹತ್ವ ಉಂಟಾಗಿದೆ. ಸಾಂಕ್ರಾಮಿಕ ರೋಗ ತಜ್ಞರ ಸಲಹೆಗಳು ವೈರಲ್ ಆಗಿವೆ. ಫ್ಲಾಟನಿಂಗ್ ದಿ ಕರ್ವ್ ಎಂಬ ಕುರಿತು ಲಘುಹಾಸ್ಯಗಳನ್ನು ನಾವೆಲ್ಲರೂ ನೋಡಿದ್ದೇವೆ. ವೈದ್ಯರು ನಮಗೆ ಹೀರೋಗಳಾಗಿದ್ದಾರೆ. ಇದು ನಮ್ಮಲ್ಲಿ ಪರಿಣಿತರ ಬಗ್ಗೆ ಇದ್ದ ಅಭಿಪ್ರಾಯಗಳನ್ನು ಬದಲಿಸುವ ಸನ್ನಿವೇಶವಾಗಿದೆ. ಹವಾಮಾನ ಬದಲಾವಣೆಯ ಹೋರಾಟದಲ್ಲಿಯೂ ನಾವು ಪರಿಸರ ವಿಜ್ಞಾನಿಗಳು ಮತ್ತು ನೀತಿ ನಿರೂಪಕರ ಮಾತುಗಳನ್ನು ಕೇಳಬೇಕಿದೆ. ಪರಿಣಿತರ ಮೇಲೆ ನಾವು ಹೆಚ್ಚು ವಿಶ್ವಾಸವನ್ನು ಹೊಂದಿದಷ್ಟೂ, ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುತ್ತೇವೆ.

ಸಾಂಸ್ಕೃತಿಕ ಬದಲಾವಣೆ ಮಾಡಿಕೊಳ್ಳಿ: ಕೋವಿಡ್ 19 ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಕೈಗೊಳ್ಳುತ್ತಿರುವ ಹಲವು ಕ್ರಮಗಳು ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕೂ ಸೂಕ್ತವಾಗಿವೆ. ಆಸಕ್ತಿಕರ ಸಂಗತಿಯೆಂದರೆ, ಹಲವು ಅಗತ್ಯ ಬದಲಾವಣೆಗಳು ನಮ್ಮ ಸಂಸ್ಕೃತಿಯಲ್ಲೂ ಆಗಬೇಕಿದೆ.

ಉದಾಹರಣೆಗೆ, ಬೊಗೊಟಾದಲ್ಲಿ ಸೈಕ್ಲಿಂಗ್ಗೆ ಪ್ರೋತ್ಸಾಹ ಮತ್ತು ಬೈಕ್ ಲೇನ್ಗಳನ್ನು ವಿಸ್ತರಿಸಿ ಜನರು ಸಾರ್ವಜನಿಕ ಸಾರಿಗೆಯನ್ನು ತೊರೆಯುವುದು, ಕೊರೊನಾವೈರಸ್ ಕಾಲದಲ್ಲಿ ವರ್ಕ್ ಫ್ರಂ ಹೋಮ್ ಪ್ರಯೋಗಗಳಿಗೆ ಯಾವುದೇ ಹೊಸ ತಂತ್ರಜ್ಞಾನ ಅಗತ್ಯವಿರುವುದಿಲ್ಲ. ಆದರೆ ಕೇವಲ ಹೊಸ ರೀತಿಯ ಚಿಂತನೆ ಅಗತ್ಯವಿದೆ. ಹವಾಮಾನ ಬದಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಸುಧಾರಣೆಯನ್ನು ಸಾಧಿಸಲು ನಮ್ಮ ಬಳಿ ಹಲವು ಪರಿಕರಗಳಿವೆ. ಆದರೆ, ಇವುಗಳನ್ನು ಅಳವಡಿಸಲು ನಮಗೆ ರಾಜಕೀಯ ಇಚ್ಛಾಶಕ್ತಿ ಬೇಕಿದೆ. ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಭಾವ ಮುಗಿದ ನಂತರ ವಿಶ್ವ ಹೇಗಿರುತ್ತದೆ ಎಂಬ ಬಗ್ಗೆ ನಮ್ಮೆಲ್ಲರಿಗೂ ಸ್ಪಷ್ಟತೆ ಇಲ್ಲ. ಆದರೆ, ಸಮಾಜದ ಮೂಲ ಕಲ್ಪನೆಯಲ್ಲೇ ಬದಲಾವಣೆಯಾಗುತ್ತಿದೆ. ಹವಾಮಾನದ ವೈಪರೀತ್ಯವನ್ನು ತಡೆಯುವ ನಿಟ್ಟಿನಲ್ಲಿ ನಮಗೆ ಅಂತಿಮ ಅವಕಾಶವೊಂದು ಇದೆ. ಜಾಗತಿಕ ಆರ್ಥಿಕ ಮಂಡಳಿಯು ನೀಡಿದ ಸಲಹೆಯನ್ನು ನಾವು ಪರಿಗಣಿಸಿದರೆ, ಹವಾಮಾನ ವೈಪರೀತ್ಯದ ಸಮಸ್ಯೆಯನ್ನು ದೊಡ್ಡ ಮಟ್ಟದಲ್ಲಿ ನಾವು ಎದುರಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.