ETV Bharat / bharat

ಖಾಸಗೀಕರಣ ಮತ್ತು ವಿದೇಶಿ ನೇರ ಹೂಡಿಕೆ ಮೂಲಕ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವುದು ಸಾಧ್ಯವೇ? - FDI

-ಸಂದೀಪ್‌ ಪಾಂಡೆ

Modi
ಮೋದಿ
author img

By

Published : Jul 1, 2020, 5:25 PM IST

ಸರಳ ಜೀವನ ಮತ್ತು ತಮಗೆ ಬೇಕಾದಷ್ಟನ್ನು ಉತ್ಪಾದಿಸಿಕೊಂಡು ಬದುಕುವುದೇ ಮಹಾತ್ಮ ಗಾಂಧೀಜಿಯವರ ಸ್ವಾವಲಂಬನೆಯ ಪರಿಕಲ್ಪನಯಾಗಿದೆ. ಸಾಧ್ಯವಾಗಷ್ಟು ಹೊರಗಿನ ಪ್ರಪಂಚದ ಕನಿಷ್ಠ ಅವಲಂಬನೆಯೊಂದಿಗೆ ಸ್ಥಳೀಯ ಸಂಪನ್ಮೂಲಗಳನ್ನು ಮತ್ತು ಸ್ಥಳೀಯ ಕಾರ್ಯಪಡೆಗಳನ್ನು ಸ್ಥಳೀಯ ಬಳಕೆಗಾಗಿ ಸರಕುಗಳ ಉತ್ಪಾದನೆಗೆ ಬಳಸುವುದು ಅವರ ಮೂಲ ಆಲೋಚನೆಯಾಗಿತ್ತು. ಆದರೆ ‘ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಎಂಬ ಭಾರತ ಸರ್ಕಾರದ ಸ್ಪಷ್ಟ ಕರೆ ಸರಳ ಜೀವನ (ವಿಶೇಷವಾಗಿ ಮಧ್ಯಮ ಮತ್ತು ಶ್ರೀಮಂತ ವರ್ಗದವರಿಗೆ) ಅಥವಾ ಸ್ಥಳೀಯ ಸ್ವಾವಲಂಬನೆಯತ್ತ ಹೆಜ್ಜೆ ಹಾಕುವುದೆ ಎಂಬ ಅಸ್ಪಷ್ಟತೆ ಮೂಲಕ ಗಾಂಧೀಜಿ ಕಲ್ಪನೆಗೆ ಹೊಂದಿಕೆಯಾಗುತ್ತಿಲ್ಲ. ಕೊರೊನಾ ವೈರಸ್ ಮಹಾಮಾರಿ ವೈರಸ್‌ (ಕೋವಿಡ್ -19)‌ ಸಾಂಕ್ರಾಮಿಕ ರೋಗದ ಹೊಡೆತದಿಂದಾಗಿ ವಿಶ್ವದ ಅತಿದೊಡ್ಡ ಮತ್ತು ಕಟ್ಟುನಿಟ್ಟಾದ ಲಾಕ್‌ಡೌನ್‌ ಮಾಡಿದ ನಂತರ, ಬಹುಶಃ ಭಾರತದ ಆರ್ಥಿಕತೆಗೆ ಮರು ಚೇತರಿಕೆ ನೀಡುವ ಗುರಿ ಇಟ್ಟುಕೊಂಡು ಇತ್ತೀಚೆಗೆ ಘೋಷಿಸಿದ ಲಾಕ್​ಡೌನ್‌ ವಿನಾಯ್ತಿ ಮತ್ತು ಪರಿಹಾರ ಕ್ರಮಗಳು ನಮ್ಮನ್ನು ಗಾಂಧಿವಾದಿ ಸ್ವಯಂ ಅವಲಂಬನೆಯ ಮೌಲ್ಯದಿಂದ ನಮ್ಮನ್ನು ಮತ್ತಷ್ಟು ದೂರಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ.

ಕಳೆದ ಕೆಲ ತಿಂಗಳುಗಳಲ್ಲಿ, ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕತೆಯು ಹೇಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದೆ ಎಂಬುದನ್ನು ಕೋವಿಡ್​-19 ನಮಗೆ ತೋರಿಸಿದೆ. ಭಾರತದಲ್ಲಿ ಖಾಸಗಿ ಆರೋಗ್ಯ ಕ್ಷೇತ್ರವು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕಿಂತ ಹೆಚ್ಚಿನ ವೆಂಟಿಲೇಟರ್‌ಗಳು, ವೈದ್ಯರು ಮತ್ತು ಆಸ್ಪತ್ರೆಯ ಹಾಸಿಗೆಗಳನ್ನು ಹೊಂದಿದ್ದರೂ ಸಹ, ಸರ್ಕಾರಿ ಆಸ್ಪತ್ರೆಗಳು ಮೂಲಭೂತವಾಗಿ ಸಾರ್ವಜನಿಕ ಆರೋಗ್ಯ ಸೇವೆಯಾಗಿದೆ. ದೀರ್ಘಕಾಲದಿಂದ ಸರ್ಕಾರಿ ಆಸ್ಪತ್ರೆಗಳಿಗೆ ಕನಿಷ್ಠ ಹಣದ ನೆರವು ಮತ್ತು ನಿರ್ಲಕ್ಷಿಸಲ್ಪಟ್ಟಿದ್ದರೂ ಸಹ, ಕೊರೋನಾ ಮಹಾಮಾರಿ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಇವುಗಳ ಮೇಲಿನ ಅವಲಂಬನೆಯೇ ಹೆಚ್ಚಿದೆ. ಖಾಸಗಿ ವಲಯದ ಆಸ್ಪತ್ರೆಗಳು ರೋಗಿಗಳಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಅಥವಾ ಮಾನವೀಯ ಬಿಕ್ಕಟ್ಟಿನ ಈ ಸಮಯದಲ್ಲೂ ಲಾಭ ಗಳಿಸುವಲ್ಲಿ ನಿರತರಾಗಿರುವುದರಿಂದ ತನ್ನ ಸುರಕ್ಷಿತತೆಗೆ ಹೆಚ್ಚು ಅಂಟಿಕೊಂಡು ಕೂತಿರುವ ಹಾಗೆ ಕಾಣುತ್ತದೆ.

ಕಳೆದ ಸರಿ ಸುಮಾರು ಎರಡು ತಿಂಗಳಿನಿಂದ ಲಾಕ್‌ಡೌನ್ ವಿವಿಧ ಹಂತಗಳಿಗೆ ಜಾರಿಯಲ್ಲಿದೆ. ಕೊರೊನಾ ವೈರಸ್ ರೋಗದ ವಿರುದ್ಧ ಹೋರಾಡಲು ಹೆಚ್ಚಿನ ಆರೋಗ್ಯ ಸಾಮರ್ಥ್ಯವನ್ನು ನಿರ್ಮಿಸಲು ಸರ್ಕಾರದ ಸಂಘಟಿತ ಕ್ರಮಗಳ ಅನುಪಸ್ಥಿತಿಯಲ್ಲಿ ಅದರ ಪರಿಣಾಮಕಾರಿತ್ವದ ಬಗ್ಗೆ ಅಸಮಾಧಾನವಿದೆ. ಕೊರೊನಾ ಮಹಾಮಾರಿ ವೈರಸ್‌ ಅಡ್ಡಿಯ ಕಾರಣ, ಆರ್ಥಿಕತೆಯು ಅಸ್ತವ್ಯಸ್ತವಾಗಿದೆ. ವ್ಯಾಪಾರಗಳು ಮತ್ತು ಕೈಗಾರಿಕೆಗಳು ವಿಫಲವಾಗುತ್ತಿವೆ. ನಿರುದ್ಯೋಗ, ಹಸಿವು ಮತ್ತು ನಿರ್ಗತಿಕತೆ ಹೆಚ್ಚುತ್ತಿದೆ. ಕಣ್ಣ ಮುಂದೆ ಕಾಣುವ ಸಮಸ್ಯೆಗೆ ಸ್ಪಷ್ಟ ಪರಿಹಾರವಿಲ್ಲದ ಕಾರಣ, ಕೆಲವರು ಆರ್ಥಿಕ ದುರಂತವನ್ನು ಊಹಿಸುತ್ತಿದ್ದಾರೆ, ಹಿಸುತ್ತಿದ್ದಾರೆ. ಈ ಘಟನೆಗಳು ಯಾವುದೇ ಆರ್ಥಿಕತೆಯ ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವು ಅದರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಶಕ್ತಿ ಮತ್ತು ಸಮಾನತೆಯ ಮೇಲೆ ಹೇಗೆ ಅಡಕವಾಗಿದೆ ಎಂಬುದರ ಪ್ರದರ್ಶನವಾಗಿದೆ.

ಈ ಬಿಕ್ಕಟ್ಟಿನ ಪರಿಹಾರಕ್ಕೆ ಇರುವ ಏಕೈಕ ತರ್ಕಬದ್ಧ ದೀರ್ಘಕಾಲೀನ ಪರಿಹಾರವೆಂದರೆ ನಮ್ಮ ಆರ್ಥಿಕತೆ ಮತ್ತು ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡುವುದು. ಕಷ್ಟದ ಸಮಯದಲ್ಲೂ ಸುರಕ್ಷಿತ ಮತ್ತು ಘನತೆಯ ಜೀವನಕ್ಕೆ ಅನುಕೂಲ ಆಗುವಂತೆ ಎಲ್ಲ ಜನರ ಹಕ್ಕನ್ನು ಖಚಿತಪಡಿಸಿಕೊಳ್ಳಲು ಸಂಪತ್ತು ಮತ್ತು ಸಂಪನ್ಮೂಲಗಳನ್ನು ಹೆಚ್ಚು ಸಮನಾಗಿ ವಿತರಿಸುವತ್ತ ಸಜ್ಜಾಗಿರುವ ಆರ್ಥಿಕ ವ್ಯವಸ್ಥೆಯನ್ನು ನಾವು ನಿರ್ಮಿಸಬೇಕು. ಯಾವುದೇ ಸಾಮಾಜಿಕ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಸೂಕ್ತವಾಗಿ ಒದಗಿಸುವ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಾವು ಪ್ರಯತ್ನಿಸಬೇಕು. ನವ-ಉದಾರವಾದಿ ನೀತಿ ಮತ್ತು ಅವುಗಳ ಆಧಾರವಾಗಿರುವ ಬಂಡವಾಳಶಾಹಿ ತರ್ಕವನ್ನು ತ್ಯಜಿಸುವ ಅಗತ್ಯವಿರುತ್ತದೆ. ಇದು ಮಾನವೀಯತೆಯ ಉಳಿವಿಗಾಗಿ ಅಪಾಯದ ಸಂದರ್ಭದಲ್ಲಿ ಅನಿವಾರ್ಯವಾಗಿದ್ದು, ಜನರಿಗೆ ಲಾಭವನ್ನು ನೀಡುತ್ತದೆ.

ಆರ್ಥಿಕತೆಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಆಸ್ಪತ್ರೆಗಳು ಮತ್ತು ಶಾಲೆಗಳಂತಹ ಸಾಮಾಜಿಕ ವಲಯದ ಮೂಲಸೌಕರ್ಯ ರಚನೆಯಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಹೆಚ್ಚಿಸಲು 8,100 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿರುವ ಸರ್ಕಾರದ ಯೋಜನೆಯು ನಿಜಕ್ಕೂ ವಿಪರ್ಯಾಸ.

ರಕ್ಷಣಾ, ವಿದ್ಯುತ್, ಬಾಹ್ಯಾಕಾಶ ಮತ್ತು ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಖಾಸಗಿ ವಲಯದ ಹೂಡಿಕೆಗಾಗಿ ಬಾಗಿಲುಗಳನ್ನು ಇನ್ನಷ್ಟು ವಿಸ್ತಾರವಾಗಿ ತೆರೆಯಲಾಗಿದೆ. ವಿಶ್ವದ ಅತಿದೊಡ್ಡ ಸರ್ಕಾರಿ-ಚಾಲಿತ ರಕ್ಷಣಾ ಉತ್ಪಾದನಾ ಸಂಸ್ಥೆಯಾದ ಆರ್ಡ್‌ನೆನ್ಸ್ ಫ್ಯಾಕ್ಟರಿ ಮಂಡಳಿಯ ಕಳೆದ ವರ್ಷ ಕಾರ್ಮಿಕರು ಮುಷ್ಕರ ನಡೆಸಿದ್ದರಿಂದಾಗಿ, ಅದರ ಖಾಸಗೀಕರಣದ ಪ್ರಯತ್ನಗಳನ್ನು ಸ್ಥಗಿತಗೊಳಿಸಿದ್ದರೂ, ಸರ್ಕಾರವು ಇತ್ತೀಚೆಗೆ ಕಂಪನಿಯನ್ನು ಸಾಂಸ್ಥಿಕಗೊಳಿಸುವ ನಿರ್ಧಾರವನ್ನು ಘೋಷಿಸಿತು. ಜೊತೆಗೆ ಆರ್ಥಿಕ ಪ್ರಚೋದಕ ಕ್ರಮಗಳನ್ನು ಘೋಷಿಸಿತು. ಹಲವಾರು ರಾಜ್ಯ ಸರ್ಕಾರಗಳು ಹೂಡಿಕೆಯನ್ನು ಆಕರ್ಷಿಸುವ ಮತ್ತು ಲಾಕ್‌ಡೌನ್ ನಷ್ಟವನ್ನು ಮರುಪಡೆಯುವ ಭರವಸೆಯೊಂದಿಗೆ ಕಾರ್ಮಿಕ ಹಕ್ಕುಗಳನ್ನು ಅಮಾನತುಗೊಳಿಸಲು ಮುಂದಾಗಿವೆ. ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ಪ್ರಯತ್ನದಲ್ಲಿ, ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಮತ್ತು ಖಾಸಗಿ ಪಾಲುದಾರರ ಸಹಾಯದಿಂದ ಜಿಲ್ಲಾ ಆಸ್ಪತ್ರೆ ಸೌಲಭ್ಯಗಳನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ನೀತಿ ಆಯೋಗವು ಸೂಚನೆ ನೀಡಿದೆ. ಕೆಲವು ತಿಂಗಳುಗಳ ಈ ಹಿಂದೆ ಮೂಲತಃ ಈ ಪ್ರಸ್ತಾಪ ಇಟ್ಟಾಗ ಇದು ಪ್ರತಿರೋಧಕ ನಡೆ ಎಂಬ ಟೀಕೆ ಕೇಳಿ ಬಂದಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಈ ಆರ್ಥಿಕ ಉತ್ತೇಜನ ಪ್ಯಾಕೇಜ್ ಅನ್ನು ತಮ್ಮ 'ಆತ್ಮನಿರ್ಭರ ಭಾರತ್ ಅಭಿಯಾನ'ದ ಭಾಗವಾಗಿ ವಿವರಿಸಿರುವುದು ಮತ್ತಷ್ಟು ಸರ್ವತೋಮುಖ ಅಸಂಬದ್ಧತೆಯನ್ನ ಎತ್ತಿ ತೋರಿಸುತ್ತಿದೆ. ರಕ್ಷಣಾ ಉತ್ಪಾದನೆಯಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಿತಿಯನ್ನು 49% ರಿಂದ 74% ಕ್ಕೆ ಹೆಚ್ಚಿಸಿರುವ ಯಾವ ವಿಧದಲ್ಲಿ ಸ್ವಾವಲಂಬನೆಯತ್ತ ಸಾಗಿಸುವ ದೃಷ್ಟಿ ಹೊಂದಿದೆ, ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಮತ್ತಷ್ಟು ಖಾಸಗೀಕರಣಗೊಳಿಸುವ ನೀತಿ ಆಯೋಗದ ಪ್ರಯತ್ನದ ಬಗ್ಗೆ ಕಿಡಿ ಕಾರಿರುವ ಮಾಜಿ ಆರೋಗ್ಯ ಕಾರ್ಯದರ್ಶಿ ಕೆ. ಸುಜಾತಾ ರಾವ್‌, ನೀತಿ ಆಯೋಗದ ಬಗ್ಗೆ ಟೀಕಿಸಿದ್ದ ಅವರು ಆತ್ಮನಿರ್ಭರ್ ಎಂದರೆ ಸರ್ಕಾರಿ ಆಸ್ಪತ್ರೆಗಳನ್ನು ಜನರ ತೆರಿಗೆ ಹಣ ಸಮೇತ ಖಾಸಗಿಗೆ ವಹಿಸುವುದು ಎಂದರ್ಥವೇ ಎಂಬುದಾಗಿ ಪ್ರಶ್ನಿಸಿದ್ದು, ಆಯೋಗವು ಎಚ್ಚೆತ್ತುಕೊಂಡು ಕಣ್ಣು ತೆರೆದು ನೋಡಬೇಕು‌ ಎಂದು ಒತ್ತಾಯಿಸಿದ್ದಾರೆ.

ಈ ಬಿಕ್ಕಟ್ಟಿನಿಂದ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಏನನ್ನೂ ಕಲಿತಿಲ್ಲ ಎಂಬುದು ಸ್ಪಷ್ಟ. ಜೊತೆಗೆ ಎಂದಿನಂತೆ ಉದ್ಯಮದ ಜೊತೆ ಮುಂದುವರಿಯಲು ಉತ್ಸುಕವಾಗಿದೆ ಎಂಬುದು ತೋರುತ್ತಿದೆ. ವಾಸ್ತವವಾಗಿ, ಬಂಡವಾಳಶಾಹಿ ಲಾಬಿಯ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ, ಸಾಮಾನ್ಯ ಕಾಲದಲ್ಲಿ ಸಾಧ್ಯವಾದದ್ದಕ್ಕಿಂತ ಹೆಚ್ಚಿನದನ್ನು ತನ್ನ ನವ-ಉದಾರವಾದಿ ಆರ್ಥಿಕ ಕಾರ್ಯಸೂಚಿಗೆ ತಳ್ಳಲು ಬಿಕ್ಕಟ್ಟಿನ ಲಾಭವನ್ನು ಪಡೆದುಕೊಳ್ಳುತ್ತಿರುವಂತೆ ತೋರುತ್ತಿದೆ.

ವಿದೇಶಿ ನೇರ ಹೂಡಿಕೆಯನ್ನು ಆಹ್ವಾನಿಸುವುದು ಖಾಸಗೀಕರಣ, ಜಾಗತೀಕರಣ ಮತ್ತು ಉದಾರೀಕರಣದ ಆರ್ಥಿಕ ನೀತಿಗಳ ಒಂದು ಭಾಗವಾಗಿದೆ, ಇದು ನೇರವಾಗಿ ವೈರಸ್‌ನ ಹರಡುವಿಕೆಗೆ ಕಾರಣ ಅಲ್ಲದಿದ್ದರೂ, ಖಂಡಿತವಾಗಿಯೂ ವಿಶ್ವದಾದ್ಯಂತದ ಅನೇಕ ದೇಶಗಳ ನೀತಿ ನಿರೂಪಿಸುವ ತಪ್ಪು ನಿರ್ವಹಣೆ ಮತ್ತು ಸೂಕ್ಷ್ಮತೆ ಇಲ್ಲದ ವರ್ತನೆಗೆ ಕಾರಣವಾಗಿದೆ. ಇದಕ್ಕೆ ಒಂದು ಗಮನಾರ್ಹ ಉದಾಹರಣೆಯೆಂದರೆ, ವಲಸೆ ಕಾರ್ಮಿಕರು ಹೊರ ಹೋಗದಂತೆ ತಡೆಯಲು ಸರ್ಕಾರವು ಕೇವಲ ಖಾಸಗಿ ಉದ್ಯಮದ ಒತ್ತಡಕ್ಕೆ ಒಳಗಾಗಿದ್ದರಿಂದ ಭಾರತೀಯ ವಲಸೆ ಕಾರ್ಮಿಕರು ಹೆದ್ದಾರಿಗಳಲ್ಲಿ ಕಾಲ್ನಡಿಗೆಯಲ್ಲಿ ಅಥವಾ ಕೆಟ್ಟದಾಗಿ ರೈಲ್ವೆ ಹಳಿಗಳಲ್ಲಿ ಹೇಗೆ ಕಠಿಣ ಪ್ರಯಾಣವನ್ನು ಕೈಗೊಳ್ಳಬೇಕಾಯಿತು. ನಿರಂತರ ಈ ಅಮಾನವೀಯ ಶಕ್ತಿ ಮತ್ತು ಪ್ರಭಾವದ ಸಿದ್ಧಾಂತದಂತಹ ಈ ಪ್ರಸ್ತುತ ಬಿಕ್ಕಟ್ಟಿನಿಂದ ಬೆಳಕಿಗೆ ಬಂದ ಕಠಿಣ ಸತ್ಯಗಳು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ.

ವೈದ್ಯಕೀಯ ಸಲಕರಣೆಗಳ ಉತ್ಪಾದನಾ ಉದ್ಯಮದ ಉದಾಹರಣೆಯು ಪ್ರಸ್ತುತ ಸನ್ನಿವೇಶದಲ್ಲಿ ಎಫ್‌ಡಿಐ ಮತ್ತು ಸಾಂಪ್ರದಾಯಿಕ ನವ-ಉದಾರವಾದಿ ನೀತಿಗಳು ಸ್ವಾವಲಂಬನೆಯ ಅನ್ವೇಷಣೆಯಲ್ಲಿ ಹೇಗೆ ಪ್ರತಿರೋಧಕವಾಗಿವೆ ಎಂಬುದನ್ನು ವಿವರಿಸಲು ವಿಶೇಷವಾಗಿ ಸೂಕ್ತವಾಗಿದೆ. ವೈದ್ಯಕೀಯ ಸಾಧನಗಳ ಉತ್ಪಾದನಾ ವಲಯವು 2015 ರಿಂದ 100% ಎಫ್‌ಡಿಐಗೆ ಮುಕ್ತವಾಗಿದೆ. ಅಂದಿನಿಂದ, ದೇಶಕ್ಕೆ ಬಂದ ಹೆಚ್ಚಿನ ಎಫ್‌ಡಿಐಗಳು ಆಮದು ಮತ್ತು ವ್ಯಾಪಾರಕ್ಕೆ ಹಣಕಾಸು ಒದಗಿಸುವುದು, ಸಂಗ್ರಹಣೆ ಮತ್ತು ವಿತರಣಾ ಮೂಲಸೌಕರ್ಯಗಳನ್ನು ನಿರ್ಮಿಸುವುದೇ ಆಗಿವೆ. ಆದರೆ ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಆಗಿಲ್ಲ. ಇದು ಅಂತಾರಾಷ್ಟ್ರೀಯ ವೈದ್ಯಕೀಯ ಸಲಕರಣೆಗಳ ತಯಾರಕರು, ಸ್ಥಳೀಯ ಕೈಗಾರಿಕಾ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದೆ ತಮ್ಮ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಭಾರಿ ಲಾಭವನ್ನು ಗಳಿಸಲು ಅನುವು ಮಾಡಿಕೊಟ್ಟಿದೆ.

ನಮ್ಮಲ್ಲಿ ಇಂದಿಗೂ, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ನಮ್ಮ ದೇಶದಲ್ಲಿ ಬಳಸಲಾಗುವ 80% ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಎಲೆಕ್ಟ್ರಾನಿಕ್ ಅಲ್ಲದ ವೈದ್ಯಕೀಯ ಸಾಧನಗಳಲ್ಲಿ ಕೆಲವು ಉತ್ಪಾದನಾ ಸಾಮರ್ಥ್ಯವಿದ್ದರೂ, 90% ಕ್ಕೂ ಹೆಚ್ಚು ವೈದ್ಯಕೀಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕಂಪ್ಯೂಟೆಡ್ ಟೊಮೊಗ್ರಫಿ (ಸಿಟಿ) ಸ್ಕ್ಯಾನ್‌ಗೆ ಬಳಸುವ ಸಾಧನಗಳಿಂದ, ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್‌ಐ), ಅಲ್ಟ್ರಾಸೌಂಡ್ ಸ್ಕ್ಯಾನ್, ಆಂಜಿಯೋಪ್ಲ್ಯಾಸ್ಟಿ, ಎಂಡೋಸ್ಕೋಪಿ, ಕೊಲೊನೋಸ್ಕೋಪಿ, ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿಗೆ ಔಷಧಗಳು, ಶಸ್ತ್ರಚಿಕಿತ್ಸೆಗೆ ಬಳಸುವ ಚಾಕು ಮತ್ತು ಕತ್ತರಿ. ಎಲ್ಲವನ್ನೂ ಜರ್ಮನಿ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಿಂದ ತರಿಸಲಾಗುತ್ತದೆ.

ಆಮದು ಮಾಡಿದ ವೈದ್ಯಕೀಯ ಸಾಧನ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವು ತುಂಬಾ ಕಡಿಮೆಯಾಗಿದೆ (0-7.5%) ಮತ್ತು ಆಮದು ಮಾಡಿಕೊಳ್ಳುವ ವೈದ್ಯಕೀಯ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ 40% ಪೂರ್ವ ಸ್ವಾಮ್ಯದವು (ಅಂದರೆ ಬಳಸಿದ, ನವೀಕರಿಸಿದ ಉತ್ಪನ್ನಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ). ಸರ್ಕಾರದ ಖರೀದಿಯಲ್ಲಿ ಈ ವಲಯದ ಅನೇಕ ಎಂಎಸ್‌ಎಂಇಗಳಿಗೆ ಸಮಯೋಚಿತ ಪಾವತಿಗಳನ್ನು ನೀಡಲಾಗುವುದಿಲ್ಲ, ಹಲವಾರು ತಿಂಗಳುಗಳ ವಿಳಂಬವು ಸಾಮಾನ್ಯ ವಿಷಯವಲ್ಲ, ಆದರೆ, ಆಮದುದಾರರಿಗೆ ಮಾತ್ರ ತ್ವರಿತವಾಗಿ ಪಾವತಿಸಲಾಗುತ್ತದೆ. ಈ ನೀತಿಗಳು ಮತ್ತು ಅಭ್ಯಾಸಗಳು ವಿದೇಶಿ ಕಂಪನಿಗಳಿಗೆ ವೈದ್ಯಕೀಯ ಸಾಧನಗಳನ್ನು ಭಾರತಕ್ಕೆ ರಫ್ತು ಮಾಡುವ ದೇಶೀಯ ಉತ್ಪಾದಕರಿಗಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಇದಲ್ಲದೆ, ಪ್ರಸ್ತುತ ಭಾರತದಲ್ಲಿ ತಯಾರಾದ ಉಪಕರಣಗಳು ಸಹ ಸಾಮಾನ್ಯವಾಗಿ ಗುಣಮಟ್ಟದ್ದಾಗಿಲ್ಲ. ಭಾರತೀಯ ಉಪಕರಣಗಳು ಮತ್ತು ಔಷಧಿಗಳು ವಿಶ್ವಾಸಾರ್ಹತೆ ಇಲ್ಲದ ಕಾರಣ, ವೈದ್ಯರು ತಮ್ಮ ವಿದೇಶಿ ಕಂಪನಿಗಳ ಪ್ರತಿರೂಪದ ಔಷಧಿಗಳಿಗೆ ಆದ್ಯತೆ ನೀಡುತ್ತಾರೆ. ಇದು ನಮ್ಮ ಸ್ವಾವಲಂಬನೆಯ ಕಲ್ಪನೆಯನ್ನು ಅಪಹಾಸ್ಯ ಮಾಡುವಂತೆ ತೋರುತ್ತದೆ. ಕೆಲವೊಮ್ಮೆ ಅವರು ವೈದ್ಯಕೀಯ ವಸ್ತುಗಳನ್ನು ಖರೀದಿಸಲು ಟೆಂಡರ್‌ಗಳನ್ನು ಭಾರತೀಯ ಕಂಪನಿಗಳು ಅರ್ಜಿ ಸಲ್ಲಿಸಲು ಅನರ್ಹಗೊಳಿಸುವ ನಿರ್ಬಂಧಗಳೊಂದಿಗೆ ಆಹ್ವಾನಿಸುತ್ತಾರೆ.

ಅಸೋಸಿಯೇಷನ್ ​​ಆಫ್ ಇಂಡಿಯನ್ ಮೆಡಿಕಲ್ ಡಿವೈಸಸ್ ಇಂಡಸ್ಟ್ರಿಯಂತಹ ವೈದ್ಯಕೀಯ ಸಲಕರಣೆಗಳ ಉತ್ಪಾದನಾ ಸಂಸ್ಥೆಗಳು, ದೇಶೀಯವಾಗಿ ತಯಾರಿಸಿದ ಉತ್ಪನ್ನಗಳ ಆದ್ಯತೆಯ ಬೆಲೆ ಮತ್ತು ಆಮದು ಮಾಡಿದ ಸಾಧನಗಳ ಎಂಆರ್‌ಪಿಗಳ ನಿಯಂತ್ರಣ, ಗುಣಮಟ್ಟ ಮತ್ತು ಪ್ರಮಾಣಕ್ಕೆ ಅನುಗುಣವಾಗಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಪೂರ್ವ ಸ್ವಾಮ್ಯದ ಉತ್ಪನ್ನಗಳ ಆಮದು ನಿಷೇಧ, ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ನೀತಿ ಬದಲಾವಣೆಗಳನ್ನು ತಡೆಯಲು ಆಮದುದಾರರ ಲಾಬಿಗಳು ತಮ್ಮ ಪ್ರಭಾವವನ್ನು ಬೀರಿವೆ ಎಂದು ಆಗಾಗ್ಗೆ ವರದಿ ಆಗುತ್ತಲೇ ಇವೆ.

ಚೀನಾದಿಂದ ಆಮದು ಮಾಡಿಕೊಂಡಿದ್ದ ಕ್ಷಿಪ್ರ ಪ್ರತಿಕಾಯ ಪರೀಕ್ಷಾ ಕಿಟ್‌ಗಳಲ್ಲಿ ದೋಷಯುಕ್ತವಾಗಿರುವುದು, ಎಲ್ಲಾ ಆಮದು ಮಾಡಿದ ಉತ್ಪನ್ನಗಳು ಉತ್ತಮ ಗುಣಮಟ್ಟದ್ದಾಗಿಲ್ಲ ಎಂಬುದನ್ನ ಎತ್ತಿ ತೋರಿಸಿದೆ. ಇದಲ್ಲದೆ, ವಿದೇಶದಲ್ಲಿ ಉತ್ಪಾದಿಸಲಾಗುತ್ತಿರುವ ಉತ್ಪನ್ನಗಳ ಮೇಲೆ ಗುಣಮಟ್ಟದ ಮಾನದಂಡಗಳನ್ನು ಹೇರುವುದು ಕಷ್ಟ. ಭಾರತವು ಸ್ಥಳೀಯವಾಗಿ ಉತ್ತಮ ಗುಣಮಟ್ಟದ ಗುಣಮಟ್ಟವನ್ನು ನೀಡುವ ಉತ್ಪನ್ನಗಳನ್ನು ತಯಾರಿಸಲು ಮುಂದಾಗುತ್ತಿಲ್ಲ ಎಂಬುದಕ್ಕೆ ಯಾವುದೇ ಕಾರಣಗಳಿಲ್ಲ.

ಉತ್ಪಾದನಾ ಗುಣಮಟ್ಟವನ್ನು ಸುಧಾರಿಸುವ ಒಂದು ಪ್ರಮುಖ ಮಾರ್ಗವೆಂದರೆ ಸ್ಥಳೀಯ ಸಂಶೋಧನೆ ಮತ್ತು ವಿನ್ಯಾಸವನ್ನು ಉತ್ತೇಜಿಸುವುದು. ವಿಶೇಷವಾಗಿ ವೈದ್ಯಕೀಯ ಸಂಶೋಧನೆಯ ಸಂದರ್ಭದಲ್ಲಿ, ಸ್ಥಳೀಯ ಸಂಶೋಧನೆಯು ಮುಖ್ಯವಾಗಿದೆ. ಏಕೆಂದರೆ ಇದು ಆರೋಗ್ಯ ತಂತ್ರಜ್ಞಾನದಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಹೊಂದಿಕೊಳ್ಳುವ ಮತ್ತು ಸ್ಥಳೀಯ ಜನಸಂಖ್ಯೆಗೆ ಸಂಬಂಧಿಸಿದ ವೈದ್ಯಕೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ನಮಗೆ ಸಹಾಯ ಮಾಡುತ್ತದೆ. ಪ್ರಸ್ತುತ, ಭಾರತದಲ್ಲಿ ವೈದ್ಯಕೀಯ ಸಂಶೋಧನೆಯನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿದೆ. 2005 ಮತ್ತು 2014ರ ನಡುವೆ 579 ಭಾರತೀಯ ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಂಶೋಧನಾ ಫಲಿತಾಂಶವನ್ನು ಗಮನಿಸಿದ ಅಧ್ಯಯನದ ಪ್ರಕಾರ, ಕೇವಲ 25 (4.3%) ಸಂಸ್ಥೆಗಳು ವರ್ಷಕ್ಕೆ 100 ಕ್ಕೂ ಹೆಚ್ಚು ಸಂಶೋಧನೆಯನ್ನು ಪ್ರಸ್ತುಪಡಿಸುತ್ತವೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್, ಯುಎಸ್ಎ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನಂತಹ ಉನ್ನತ ದರ್ಜೆಯ ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರತಿವರ್ಷ ಪ್ರಕಟಿಸುವ ಸಾವಿರಾರು ಸಂಶೋಧನಾ ಪ್ರಬಂಧಗಳೊಂದಿಗೆ ಇದನ್ನು ಹೋಲಿಕೆ ಮಾಡಿ. ಸ್ಪಷ್ಟವಾಗಿ, ನಮ್ಮ ಸಾರ್ವಜನಿಕ ಸಂಶೋಧನಾ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸಲು ಸರ್ಕಾರವು ಹೆಚ್ಚಿನ ಹೂಡಿಕೆ ಮಾಡಬೇಕಾಗಿದೆ.

ಸ್ಥಳೀಯ ಸಾಧನಗಳ ಉತ್ಪಾದನೆಯನ್ನು ಉತ್ತೇಜಿಸಲು ಎಫ್‌ಡಿಐ ಹೇಗೆ ಪರಿಣಾಮಕಾರಿ ಕಾರ್ಯವಿಧಾನವಲ್ಲ ಎಂಬುದನ್ನು ವೈದ್ಯಕೀಯ ಸಾಧನಗಳ ಉದ್ಯಮವು ಪ್ರತಿಬಿಂಬಿಸುತ್ತದೆ. ನಮ್ಮ ಸ್ವಾವಲಂಬನೆಯ ಹೊಸ ಧ್ಯೇಯವಾಕ್ಯವು ಆಮದುಗಳ ಮೇಲಿನ ನಮ್ಮ ಅತಿಯಾದ ಅವಲಂಬನೆಯ ಸಮಸ್ಯೆಯನ್ನು ಸರಿಯಾಗಿ ಗುರುತಿಸುತ್ತಿಲ್ಲ. ಇದು ನಮ್ಮ ಆರ್ಥಿಕ ವ್ಯವಸ್ಥೆಯ ದುರ್ಬಲತೆ ಮತ್ತು ಅಸಮಾನತೆಗೆ ಕಾರಣವಾಗುತ್ತದೆ. ಆದರೂ, ಉದ್ದೇಶಿತ ಪರಿಹಾರಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಬಹುರಾಷ್ಟ್ರೀಯ ಸಂಸ್ಥೆಗಳ ಹಿತಾಸಕ್ತಿಗಳನ್ನು ತೊಡೆದುಹಾಕುವ ಮತ್ತು ಸ್ಥಳೀಯ ಆರ್ಥಿಕತೆಗಳನ್ನು ಸುಧಾರಿಸುವ, ಉದ್ಯೋಗದ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಸಾರ್ವಜನಿಕ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಬೆಂಬಲಿಸುವ ಕೈಗಾರಿಕೀಕರಣಕ್ಕೆ ಜನ ಕೇಂದ್ರಿತ, ವಿಕೇಂದ್ರೀಕೃತ ವಿಧಾನವನ್ನು ಅಳವಡಿಸಿಕೊಳ್ಳುವ ನೀತಿ ಬದಲಾವಣೆಗಳ ಮೂಲಕವೇ ಸ್ವಾವಲಂಬನೆ ಸಾಧಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.