ETV Bharat / bharat

ಭಾರತದೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ: ಟ್ರಂಪ್​ ಕೊಟ್ಟ ಭರವಸೆಗಳೇನು?

author img

By

Published : Sep 26, 2019, 9:10 PM IST

ನರೇಂದ್ರ ಮೋದಿ ಸಮರ್ಥ ನಾಯಕ. ಇವರಿಂದಲೇ ನಮ್ಮ ಮತ್ತು ಭಾರತದ ಸ್ನೇಹ ಸಂಬಂಧ ಮತ್ತಷ್ಟು ಬಲವಾಗಿದೆ. ಮುಂದಿನ ದಿನಗಳಲ್ಲಿ ಭಾರೀ ದೊಡ್ಡ ಪ್ರಮಾಣದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್​ ಹೇಳಿದ್ದಾರೆ.

ಮೋದಿ ಮತ್ತು ಟ್ರಂಪ್​

ಹೈದರಾಬಾದ್: ಹ್ಯೂಸ್ಟನ್​ನಲ್ಲಿ ನಡೆದ ಮೋದಿ- ಟ್ರಂಪ್​ ಸಭೆಯಿಂದ ಭಾರತ ಮತ್ತು ಅಮೆರಿಕದ ವ್ಯಾಪಾರ ಸಂಬಂಧಗಳು ಪ್ರಗತಿಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಬೆನ್ನೆಲೆ ಕ್ಯಾಲಿಫೋರ್ನಿಯಾದಿಂದ ವಾಷಿಂಗ್ಟನ್ ಡಿಸಿಗೆ ಹಿಂದಿರುಗುವಾಗ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏರ್ ಫೋರ್ಸ್ ಒನ್​​​ನಲ್ಲಿ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಮೋದಿ ಮತ್ತು ಟ್ರಂಪ್​ 50,000 ಅನಿವಾಸಿ ಭಾರತೀಯನ್ನು ಭೇಟಿ ಮಾಡಿ, ಅವರನ್ನು ಕುರಿತು ಭಾಷಣ ಕೂಡ ಮಾಡಿದ್ರು. ಬಳಿಕ ಉಭಯ ನಾಯಕರು ಎರಡನೇ ಸುತ್ತಿನ ಸಭೆಯನ್ನು ನಡೆಸಿದ್ರು. ಇದರಲ್ಲಿ ಟ್ರಂಪ್​​ ಭಾರತದೊಂದಿಗೆ ಅಮೆರಿಕ ಹೊಂದಿರುವ 30 ಬಿಲಿಯನ್ ಡಾಲರ್ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡುವ ಬಗ್ಗೆ ಅಧ್ಯಕ್ಷ ಟ್ರಂಪ್ ತಿಳಿಸಿದ್ರು.

ಈ ಕುರಿತು ಮಾತನಾಡಿದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಎರಡು ದೇಶಗಳು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆಯನ್ನು ನಡೆಸುತ್ತಿವೆ. ಇದರ ಬಗ್ಗೆ ಸದ್ಯದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲದೇ ಅಮೆರಿಕನ್ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿರುವ ಬಗ್ಗೆ ಟ್ರಂಪ್​ ಗಮನಕ್ಕೆ ಬಂದಿದೆ. ಇದರ ಮೇಲೂ ಅವರೊಂದು ಕಣ್ಣಿಟ್ಟಿದ್ದು, ಸುಂಕ ಕಡಿತದ ಬಗ್ಗೆ ಚಿಂತಿಸಲಾಗುತ್ತಿದೆ ಎಂದಿದ್ದಾರೆ. ಇದರ ಜೊತೆ ಸ್ಥಳೀಯ ವ್ಯಾಪಾರ ಮತ್ತು ಉದ್ಯೋಗಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಜೂನ್‌ನಲ್ಲಿ ಟ್ರಂಪ್​​​ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫ್ರೆನ್ಸ್​​​​ (ಜಿಎಸ್‌ಪಿ) ಕಾರ್ಯಕ್ರಮದಡಿ ಭಾರತದ ಅತ್ಯಾಪ್ತ ಸ್ಥಾನಮಾನ ತೆಗೆದುಹಾಕಿದ್ದರು. ಇದರಿಂದ ಉಭಯ ದೇಶಗಳ ನಡುವೆ ವ್ಯಾಪಾರ ಉದ್ವಿಗ್ನತೆ ಉಂಟಾಗಿತ್ತು. ಈ ಯೋಜನೆಯಡಿ 4, 800 ಸರಕುಗಳು ಯುಎಸ್​ ಮಾರುಕಟ್ಟೆಗೆ ಸುಂಕ ರಹಿತವಾಗಿ ಪ್ರವೇಶಿಸುತ್ತಿದ್ದವು. ಇದನ್ನು ರದ್ದುಗೊಳಿಸಿದಾಗ ಭಾರತೀಯ ಸುಂಕದ ಲಾಭದ ಹೊರತಾಗಿ, ಭಾರತೀಯ ರಫ್ತುದಾರರು ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳುತ್ತಿದ್ದರು. ಮೊನ್ನೆ ನಡೆದ ಉಭಯ ನಾಯಕರ ಸಭೆಯಿಂದ ಈ ಇದನ್ನು ಟ್ರಂಪ್​ ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ.

ಫ್ರೆಂಚ್​​ ನಗರದ ಬಿಯರಿಟ್ಜ್​ನಲ್ಲಿ ನಡೆದ ಜಿ 7 ಶೃಂಗಸಭೆಯ ಬಳಿಕ 40 ನಿಮಿಷಗಳ ಕಾಲ ಸಭೆ ನಡೆಸಿದ್ದ ಮೋದಿ ಮತ್ತು ಟ್ರಂಪ್​ ಯುಎಸ್​ನಿಂದ ತೈಲ ಸೇರಿದಂತೆ ಬೇರೆ ವಸ್ತುಗಳ ಆಮದನ್ನು ಹೆಚ್ಚಿಸುವ ಕುರಿತು ಮಾತನಾಡಿದ್ದಾರೆ. ಈಗಾಗಲೇ 4 ಬಿಲಿಯನ್​ ನಷ್ಟು ತೈಲವನ್ನು ಪೈಪ್​ಲೈನ್​ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿದೆ. ಇನ್ನು ಹೆಚ್ಚು ಆಮದು ಮಾಡಿಕೊಳ್ಳುವ ಕುರಿತು ಮಾತುಕತೆ ನಡೆದಿದೆ. ಅಲ್ಲದೇ ಇದೇ ವೇಳೆ, ಅಮೆರಿಕ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸುವ ಕುರಿತು ಚರ್ಚೆ ನಡೆಸಲಾಗಿದೆ.

ಭಾರತ ಮತ್ತು ಅಮೆರಿಕ ನಡುವೆ 4.50 ಲಕ್ಷ ಕೋಟಿ ರೂ. ವ್ಯಾಪಾರದ ಸಂಬಂಧ ಒಡಂಬಡಿಕೆ ರೂಪುಗೊಳ್ಳಲಿದೆ. ಎರಡೂ ದೇಶಗಳಲ್ಲಿ 50 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಟ್ರಂಪ್​​ ತಿಳಿಸಿದ್ದಾರೆ. ವೈದ್ಯಕೀಯ ಮತ್ತು ಡೈರಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಕ್ರಮಗಳನ್ನ ತೆಗೆದುಕೊಳ್ಳಲಾಗುವುದೆಂದು ಮೋದಿ ಹೇಳಿದ್ದಾರೆ. ಅತೀ ದೊಡ್ಡ ಮತ್ತು ಹೆಚ್ಚಾಗಿ ಅಸಂಘಟಿತ ಭಾರತೀಯ ಡೈರಿ ವಲಯವನ್ನು ರಕ್ಷಿಸುವ ರಾಜಕೀಯ ಮತ್ತು ಆರ್ಥಿಕ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮೋದಿಯವರು ಡೈರಿ ಕೈಗಾರಿಕೆಗಳ ಬೇಡಿಕೆಗಳು ಈಡೇರಿಸಲು ಮುಂದಾಗಿದ್ದಾರೆ.

ವಿವಿಧ ಡಿಜಿಟಲ್ ಪಾವತಿ ಸೇವೆಗಳ ಭಾರತೀಯ ಬಳಕೆದಾರರಿಗೆ ಸೇರಿದ ಎಲ್ಲಾ ಸೂಕ್ಷ್ಮ ದತ್ತಾಂಶಗಳ ಸ್ಥಳೀಕರಣಕ್ಕಾಗಿ ರಿಸರ್ವ್ ಬ್ಯಾಂಕ್ ಹೊಸ ಕಾಯ್ದೆಯನ್ನು ಹೊರಡಿಸಿದೆ, ಕಾರ್ಡ್ ಪಾವತಿ ಸೇವೆಗಳಾದ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಮತ್ತು ಪೇಟಿಎಂ, ವಾಟ್ಸ್​ಆ್ಯಪ್​ಮತ್ತು ಗೂಗಲ್‌ನಂತಹ ಕಂಪನಿಗಳು ಇದನ್ನು ಪಾಲಿಸುತ್ತವೆ. ಗೂಗಲ್, ಮಾಸ್ಟರ್‌ಕಾರ್ಡ್, ವೀಸಾ ಮತ್ತು ಅಮೆಜಾನ್‌ನಂತಹ ಅನೇಕ ಯುಎಸ್ ಕಂಪನಿಗಳು ತಮ್ಮ ಕಾರ್ಯಾಚರಣೆಗಳ ಮೇಲೆ ಹೊಸ ನಿಯಮಗಳ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಆದ್ರೆ ಭಾರತೀಯ ಬಳಕೆದಾರರ ಡೇಟಾವನ್ನು ದೇಶದ ಹೊರಗೆ ಸಂಗ್ರಹಿಸಲು ಅನುಮತಿ ಇಲ್ಲ. ಎರಡನೇಯದಾಗಿ ದತ್ತಾಂಶ ಸ್ಥಳೀಕರಣವೂ ಭಾರತದ ಪ್ರಾರಂಭಿಕ ವಲಯಕ್ಕೂ ಒಂದು ಉತ್ತೇಜನವನ್ನು ನೀಡುತ್ತದೆ. ಈ ಡೇಟಾ ಸ್ಥಳೀಕರಣ ನಿಯಮಗಳನ್ನು ಪಾಲಿಸಲು ಸರ್ವರ್‌ಗಳಿಗೆ, ಯುಪಿಎಸ್, ಜನರೇಟರ್‌ಗಳಿಗೆ ಸಾಧ್ಯವಿಲ್ಲ. ಭಾರತವು ವಾರ್ಷಿಕವಾಗಿ 4 ಬಿಲಿಯನ್ ಅಮೆರಿಕನ್ ಇಂಧನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಈ ಪ್ರದೇಶದಲ್ಲಿ ಯುಎಸ್ ಜೊತೆ ನಿಕಟ ಸಂಬಂಧವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಈ ಕುರಿತು ಕಳೆದ ತಿಂಗಳು ಫ್ರೆಂಚ್ ನಗರ ಬಿಯರಿಟ್ಜ್​ನಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಮೋದಿ ಮತ್ತು ಟ್ರಂಪ್ ಚರ್ಚಿಸಿದ್ದಾರೆ.

-

Intro:KN_BNG_01_26_KIAL_Plastic Road_Ambarish
Slug: ಏರ್ಪೋರ್ಟ್ ನಲ್ಲಿ ಪ್ಲಾಸ್ಟಿಕ್ ರಸ್ತೆ ನಿರ್ಮಾಣ
೫೦ ಟನ್ ಪ್ಲಾಸ್ಟಿಕ್ ನಲ್ಲಿ ೫೦ ಕಿ.ಮಿ ರಸ್ತೆ ನಿರ್ಮಾಣ
ಬಿಐಎಎಲ್ ಜೊತೆ ಕೈ ಜೊಡಿಸಿದ ಐಟಿಸಿ

ಬೆಂಗಳೂರು: ಹೊಸ ತಂತ್ರಜ್ಞಾನದ ಮೂಲಕ ಪರಿಸರ ಸ್ನೇಹಿಯಾಗಿ ಪ್ರಯಾಣಿಕರನ್ನು ಸೆಳೆಯುತ್ತಾ‌ ಹಲವು‌ ಸಾಧನೆಗಳನ್ನು ಮಾಡುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಮತ್ತೊಂದು ಆವಿಷ್ಕಾರ ಮಾಡಲು‌ ಮುಂದಾಗಿದೆ. ಅದು ಕೂಡ ಪರಿಸರ ಸ್ನೇಹಿಯಾಗಿದೆ. ಅದು ಏ‌ನು ಅಂತಿರಾ..? ಹಾಗಾದ್ರೆ ಈ ಸ್ಟೋರಿ ನೋಡಿ..

ಕೆಲವು ರಾಜ್ಯಗಳಲ್ಲಿ ಪ್ಲಾಸ್ಟಿಕ್​ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಅದೇ ಬೆಂಗಳೂರಿನ ಕೆಲವು ರಸ್ತೆಗಳನ್ನು ಪ್ಲಾಸ್ಟಿಕ್ ನಲ್ಲೇ ನಿರ್ಮಾಣ ಮಾಡಲಾಗಿದೆ... ಆದರೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಏರ್​ಪೋರ್ಟ್​​ ರಸ್ತೆಗೆ ಪ್ಲಾಸ್ಟಿಕ್​ ಬಳಸಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲು ಅದು ನಮ್ಮ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ. ಹೌದು, ಬೆಂಗಳೂರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ರಸ್ತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ.

ನೂತನವಾಗಿ ನಿರ್ಮಾಣವಾಗಿರುವ ಟರ್ಮಿನಲ್​-2ರಲ್ಲಿ 50 ಲೇನ್​ ಕಿ.ಮೀ.ರಸ್ತೆ ನಿರ್ಮಾಣವಗುತ್ತಿದೆ.. ಈ ರಸ್ತೆಗೆ 50 ಟನ್​​ ತ್ಯಾಜ್ಯ ಬಳಕೆ ಮಾಡಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಪ್ಲಾಸ್ಟಿಕ್​ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಆದರೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಏರ್​ಪೋರ್ಟ್​​ ರಸ್ತೆಗೆ ಪ್ಲಾಸ್ಟಿಕ್​ ಬಳಸಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಕೆಐಎಎಲ್ ನಲ್ಲಿ ಮಾತ್ರ.. ಬಿಐಎಎಲ್ ಸಂಸ್ಥೆ 50 ಕಿ.ಮೀ ರಸ್ತೆಗೆ ಶೇ. 7 ರಿಂದ 8 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಿ ಡಾಂಬರೀಕರಣ ಮಾಡಲು ಮುಂದಾಗಿದೆ. ವಿಮಾನ ನಿಲ್ದಾಣದ ಪಥ ಸೇರಿದಂತೆ 50 ಕಿ.ಮೀ ರಸ್ತೆ ನಿರ್ಮಾಣ ಮಾಡಲು 50 ಟನ್ ಪ್ಲಾಸ್ಟಿಕ್ ಅಗತ್ಯವಿದ್ದು, ಬಿಬಿಎಂಪಿ ಸೇರಿದಂತೆ ಹಲವು ಕಡೆಗಳಿಂದ ಪ್ಲಾಸ್ಟಿಕ್ ಪಡೆದುಕೊಳ್ಳಲಾಗಿತ್ತಿದೆ.. ಕೆಲವು ಕಡೆಗಳಿಂದ ಈಗಾಗಲೇ ಪ್ಲಾಸ್ಟಿಕ್ ಬಂದಿದ್ದು, ಇನ್ನು ಕೆಲವು ಕಡೆಯಿಂದ ಕೊಡುವುದಾಗಿ ಹೇಳಿದ್ದಾರೆ.. ಇದರಿಂದ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಏರ್ಪೋರ್ಟ್ ನ ವೈಸ್ ಪ್ರೆಸಿಡೆಂಟ್ ಸುಂದರ್ ಚಂದ್ರ ಮೌಳಿ ತಿಳಿಸಿದ್ರು..

ಬೈಟ್: ಸುಂದರ್ ಚಂದ್ರ ಮೌಳಿ, ಏರ್ಪೋರ್ಟ್ ವೈಸ್ ಪ್ರೆಸಿಡೆಂಟ್

ಬಿಐಎಎಲ್ ಜೊತೆಗೆ ಐಟಿಸಿ ಲಿಮಿಟೆಡ್ ಕೈ ಜೋಡಿಸಿದ್ದು, ಬಿಬಿಎಂಪಿ‌ ಅಪ್ರೂ ಆಗಿರುವ ಕೆ.ಕೆ ಪ್ಲಾಸ್ಟಿಕ್ ಕಂಪನಿಗೆ ಪ್ಲಾಸ್ಟಿಕ್ ಅನ್ನು ನೀಡುತ್ತಿದ್ದು, ಅಲ್ಲಿಂದ ಪ್ಲಾಸ್ಟಿಕ್ ಕ್ಲೀನ್ ಅಗಿ ಇಲ್ಲಿಗೆ ಬರುತ್ತದೆ.. ಇಲ್ಲಿ ಸೀಮೆಂಟ್ ಬದಲಿಗೆ ಪ್ಲಾಸ್ಟಿಕ್ ಅನ್ನು ಮಿಕ್ಸ್ ಮಾಡಿ ನಂತರ ಏರ್ಪೋರ್ಟ್ ರಸ್ತೆ ಡಾಂಬರು ಅನ್ನು ಹಾಕಲಾಗುತ್ತಿದೆ.. ಇದಕ್ಕೆ ಯಾವುದೇ ದುಬಾರಿ ವೆಚ್ಚ ತಗಲುವುದಿಲ್ಲ.. ಮೊದಲ ರಸ್ತೆ ಗಿಂತ ೨೦ ಪರ್ಸೆಂಟ್ ಹೆಚ್ಚಿಗೆ ಬಾಳಿಕೆ ಬರುತ್ತದೆ ಎಂದರು..

ಬೈಟ್: : ಸುಂದರ್ ಚಂದ್ರ ಮೌಳಿ, ಏರ್ಪೋರ್ಟ್ ವೈಸ್ ಪ್ರೆಸಿಡೆಂಟ್

ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುತ್ತಿರುವ ಪರಿಸರ ಸ್ನೇಹಿ ಕಾರ್ಯಕ್ಕೆ ನಾವು ಕೈ ಜೋಡಿಸುತ್ತಿರುವುದು ತುಂಬಾ ಖುಷಿಯಾಗಿದೆ.. ಕಸ ವಿಂಗಡಣೆ ಮಾಡಿ ಒಣ ಕಸವನ್ನು ಮರುಬಳಕೆ ಕುರಿತು ಜಾಗೃತಿ ಮೂಡಿಸುತ್ತಿರುವ ವಿಮಾನ ನಿಲ್ದಾಣ, ಪ್ಲಾಸ್ಟಿಕ್ ಅನ್ನು ಮರು ಬಳಕೆ ಮಾಡಿ ರಸ್ತೆ ನಿರ್ಮಾಣ ಮಾಡುತ್ತಿದೆ..ಇದು ಸಮಾಜದ ಪರಿಸರ ಸೃಷ್ಟಿ ಹಾಗೂ ಸಮಾಜ ಕ್ಕೆ ಒಂದು ಉತ್ತಮ‌ ಸಂದೇಶ ನೀಡುತ್ತಿದೆ.. ಇದರಿಂದ ಇದರ ಜೊತೆಯಲ್ಲಿ ಸೇರಿಕೊಂಡು ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಅದೇ ರೀತಿ ಬೆಂಗಳೂರಿನ ಜನರು ಪ್ಲಾಸ್ಟಿಕ್ ಮುಕ್ತಗೊಳಿಸುವ ಏರ್ಪೋರ್ಟ್ ನ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂದು ಐಟಿಸಿ ಲಿಮಿಟೆಡ್ ನ ಮುಖ್ಯ ಅಧಿಕಾರಿ ಕವಿತಾ ಚತುರ್ವೇದಿ ತಿಳಿಸಿದ್ರು..

ಬೈಟ್: ಕವಿತಾ ಚತುರ್ವೇದಿ, ಐಟಿಸಿ ಅಧಿಕಾರಿ(ಸಿಇಒ)

ಒಟ್ಟಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಂದಲ್ಲ ಒಂದು ರೀತಿಯಲ್ಲಿ ಪರಿಸರ ಸಂರಕ್ಷಣೆ ಮಾಡುತ್ತಾ ಬರುತ್ತಿದೆ.. ಸೋಲಾರ್ ಸಿಸ್ಟಮ್ ಆಯ್ತು, ಲೇಕ್ ನಿರ್ಮಾಣ, ಮರಗಳನ್ನು ರೀಸೈಕ್ಲೀನ್ ಮಾಡಿದ್ದು, ಸುತ್ತಮುತ್ತ ಮರಗಿಡಗಳ ನ್ನು ಬೆಳೆಸಿ ಪರಿಸರ ಪ್ರೇಮ ಮೆರೆದ ಕೆಐಎಎಲ್ ಇಂದು ಪ್ಲಾಸ್ಟಿಕ್ ಬ್ಯಾನ್ ಮಾಡುತ್ತಾ ರಸ್ತೆಗೆ ಪ್ಲಾಸ್ಟಿಕ್ ಬಳಸಲು ಮುಂದಾಗಿದೆ.. ಇದನ್ನು ರಾಜ್ಯ ಸರ್ಕಾರ ಎಲ್ಲಾ ರಸ್ತೆಗಳ ನಿರ್ಮಾಣಕ್ಕೆ ಈ ಮಾರ್ಗ ಬಳಸಿದ್ರೆ, ಪ್ಲಾಸ್ಟಿಕ್ ಮುಕ್ತ ರಾಜ್ಯ ಮಾಡುವು ಕನಸು ಬೇಗ ಈಡೇರಲಿದೆ..

ಅಂಬರೀಶ್, ಈ ಟಿವಿ ಭಾರತ ಬೆಂಗಳೂರು

Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.