ETV Bharat / bharat

ಪ್ರೀತಿಸಿದವಳನ್ನು ಮದುವೆಯಾದ ಗಂಟೆಯಲ್ಲೇ ಆತ್ಮಹತ್ಯೆಗೆ ಶರಣಾದ ಮದುಮಗ! - ಪ್ರೀತಿಸಿದವಳನ್ನು ಮದುವೆಯಾದ ಗಂಟೆಯಲ್ಲೇ ಆತ್ಮಹತ್ಯೆಗೆ ಶರಣಾದ ವರ

ಪ್ರೀತಿಸಿ ತನ್ನಿಷ್ಟದಂತೆ ಹಿರಿಯರನ್ನು ಮನೆಯಲ್ಲಿ ಒಪ್ಪಿಸಿ ಮದುವೆಯಾದ ಗಂಟೆಯಲ್ಲೇ ಮದುಮಗ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Hours after wedding, Hours after wedding groom found hanging, Hours after wedding groom found hanging in bareilly, bareilly crime news, ಆತ್ಮಹತ್ಯೆಗೆ ಶರಣಾದ ವರ, ಮದುವೆಯಾದ ಗಂಟೆಯಲ್ಲೇ ಆತ್ಮಹತ್ಯೆಗೆ ಶರಣಾದ ವರ, ಬರೇಲಿಯಲ್ಲಿ ಮದುವೆಯಾದ ಗಂಟೆಯಲ್ಲೇ ಆತ್ಮಹತ್ಯೆಗೆ ಶರಣಾದ ವರ, ಪ್ರೀತಿಸಿದವಳನ್ನು ಮದುವೆಯಾದ ಗಂಟೆಯಲ್ಲೇ ಆತ್ಮಹತ್ಯೆಗೆ ಶರಣಾದ ವರ,
ಸಾಂದರ್ಭಿಕ ಚಿತ್ರ
author img

By

Published : Feb 14, 2020, 8:19 AM IST

Updated : Feb 14, 2020, 8:34 AM IST

ಬರೇಲಿ(ಉತ್ತರ ಪ್ರದೇಶ): ಹುಡುಗಿಯನ್ನು ಇಷ್ಟಪಟ್ಟ ಬಳಿಕ ಹಿರಿಯರನ್ನು ಒಪ್ಪಿಸಿದ. ಇಷ್ಟಪಟ್ಟ ಹುಡುಗಿಯನ್ನು ಮದುವೆ ಸಹ ಆದ. ಆದ್ರೆ ಏನಾಯ್ತೋ, ಏನೋ ತಿಳಿಯಲಿಲ್ಲ. ಮದುವೆಯಾದ ಗಂಟೆಯೊಳಗೆ ಮದುಮಗ ನೇಣಿಗೆ ಶರಣಾದ. ಈ ದುರಂತ ನಡೆದಿರೋದು ಬರೇಲಿಯ ಮೇರಠ್​​ನಲ್ಲಿ.

ಹೌದು, ಇಲ್ಲಿನ ನಿವಾಸಿ ದುಷ್ಯಂತ್​ ಗಿರಿ (22) ನಗರದ ಪೆಟ್ರೋಲ್​ ಬಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಬರೇಲಿ ನಿವಾಸಿಯಾಗಿರುವ ಯುವತಿಯನ್ನು ಮನಸಾರೆ ಪ್ರೀತಿಸಿದ. ಆಕೆಯನ್ನು ಮದುವೆಯಾಗುವುದಕ್ಕೆ ಎಷ್ಟೋ ಕಷ್ಟಪಟ್ಟ. ಕೊನೆಗೂ ಹಿರಿಯರನ್ನು ಒಪ್ಪಿಸಿ ಮದುವೆ ಮಾಡಿಕೊಂಡ.

ಮದುವೆ ಮಾಡಿಕೊಂಡು ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಟೀ ಕುಡಿಯಲು ಹೊಟೇಲ್​ಗೆ ತೆರಳಿದ್ದರು. ಅಲ್ಲಿ ಟೀ ಆರ್ಡರ್​ ಮಾಡಿ ದುಷ್ಯಂತ್​ ಗಿರಿ ದಿಢೀರ್​​ ನಾಪತ್ತೆಯಾಗಿದ್ದ. ಎಲ್ಲರೂ ಎಷ್ಟೇ ಹುಡುಕಿದ್ರೂ ಆತನ ಸುಳಿವು ಸಿಗದಿದ್ದಾಗ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿ ಮನೆಗೆ ತೆರಳಿದರು. ಅಷ್ಟರಲ್ಲೇ ಮದುಮಗ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ದುಷ್ಯಂತ್​ನ​​ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆಯಿಂದ ವಧು-ವರನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಮದುವೆ ಬಳಿಕ ದುಷ್ಯಂತ್​ ಗಿರಿ ಬಹಳ ಸಂತೋಷದಿಂದಲೇ ಇದ್ದ. ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆ ಇರಲಿಲ್ಲವೆಂದು ವಧು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಈ ಘಟನೆ ಬಗ್ಗೆ ಎರಡೂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿರುವುದರಿಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated : Feb 14, 2020, 8:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.