ETV Bharat / bharat

ಚೆನ್ನೈನಲ್ಲಿ ಭೀಕರ ಬರಗಾಲ... ಕಂಪನಿಗಳಿಗೆ ಬೀಗ, ಹೈಕೋರ್ಟ್​ನಿಂದ ಸರ್ಕಾರಕ್ಕೆ ಛೀಮಾರಿ..! - ಮಳೆಯ ಅಭಾವ

ಮಳೆಯ ಅಭಾವದಿಂದ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಿದ್ದು ಚೆನ್ನೈ ಮಹಾನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಖಾಸಗಿ ನೀರಿನ ಟ್ಯಾಂಕರ್​​ಗಳು ದರವನ್ನು ದುಪ್ಪಟ್ಟು ಮಾಡಿದ್ದು ನಿವಾಸಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬರಗಾಲ
author img

By

Published : Jun 19, 2019, 9:16 PM IST

ಚೆನ್ನೈ: ದಕ್ಷಿಣ ಭಾರತದ ಪ್ರಮುಖ ರಾಜ್ಯ ತಮಿಳುನಾಡಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಶಾಲಾ-ಕಾಲೇಜು ಮಾತ್ರವಲ್ಲದೇ ಐಟಿ ಕಂಪನಿಗಳು ಅನಿರ್ಧಿಷ್ಟಾವಧಿಗೆ ಬೀಗ ಹಾಕಿವೆ.

ಮಳೆಯ ಅಭಾವದಿಂದ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಿದ್ದು ಚೆನ್ನೈ ಮಹಾನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಖಾಸಗಿ ನೀರಿನ ಟ್ಯಾಂಕರ್​​ಗಳು ದರವನ್ನು ದುಪ್ಪಟ್ಟು ಮಾಡಿದ್ದು ನಿವಾಸಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಚೆನ್ನೈ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಕಂಪನಿಗಳು ನೀರಿನ ಕೊರತೆಯಿಂದ ಶಟರ್​ ಎಳೆದಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಇತ್ತ ಹೋಟೆಲ್​​ಗಳು ವ್ಯವಹಾರದ ಸಮಯವನ್ನು ಕಡಿತಗೊಳಿಸಿವೆ.

ಚೆನ್ನೈನಲ್ಲಿ ಸದ್ಯ ಉಂಟಾಗಿರುವ ನೀರಿನ ಸಮಸ್ಯೆಯ ಬಗ್ಗೆ ಮದ್ರಾಸ್ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ನಡೆದಿದೆ.

  • Tamil Nadu: Locals in Chennai complain of water crisis in the city, alleging that water supply through tankers is not regular in their area. Say, "Water supply has become erratic now, earlier it was regular. We're suffering. This locality doesn't have piped water supply." (18.06) pic.twitter.com/VZMvQiIJII

    — ANI (@ANI) June 19, 2019 " class="align-text-top noRightClick twitterSection" data=" ">

ರಾಜ್ಯ ರಾಜಧಾನಿಯಲ್ಲಿ ಉಂಟಾಗಿರುವ ನೀರಿನ ಕೊರತೆ ಏಕಾಏಕಿಯಾಗಿ ಆಗಿದ್ದಲ್ಲ. ನೀರಿನ ಕೊರತೆ ಉದ್ಭವಿಸಲು ಸರ್ಕಾರವೇ ಕಾರಣ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಅರ್ಜಿಯಲ್ಲಿದ್ದ ಮಾತನ್ನೇ ಪುನರುಚ್ಚರಿಸಿರುವ ಹೈಕೋರ್ಟ್, ಸರ್ಕಾರ ಅತಿಕ್ರಮಣ ಮಾಡಿರುವ ಹಾಗೂ ಬತ್ತಿಹೋಗಿರುವ ಸರೋವರ ಮಾಹಿತಿಯ ವಿವರವನ್ನು ಸಲ್ಲಿಸುವಂತೆ ಖಡಕ್ ಆದೇಶ ಮಾಡಿದೆ.

Intro:Body:

ಚೆನ್ನೈನಲ್ಲಿ ಭೀಕರ ಬರಗಾಲ... ಕಂಪನಿಗಳಿಗೆ ಬೀಗ, ಹೈಕೋರ್ಟ್​ನಿಂದ ಸರ್ಕಾರಕ್ಕೆ ಛೀಮಾರಿ..!

ಚೆನ್ನೈ: ದಕ್ಷಿಣ ಭಾರತದ ಪ್ರಮುಖ ರಾಜ್ಯ ತಮಿಳುನಾಡಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಶಾಲಾ-ಕಾಲೇಜು ಮಾತ್ರವಲ್ಲದೆ ಐಟಿ ಕಂಪೆನಿಗಳು ಅನಿರ್ಧಿಷ್ಟಾವಧಿಗೆ ಬೀಗ ಹಾಕಿವೆ.

ಮಳೆಯ ಅಭಾವದಿಂದ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಿದ್ದು ಚೆನ್ನೈ ಮಹಾನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಖಾಸಗಿ ನೀರಿನ ಟ್ಯಾಂಕರ್​​ಗಳು ದರವನ್ನು ದುಪ್ಪಟ್ಟು ಮಾಡಿದ್ದು ನಿವಾಸಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಚೆನ್ನೈ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಕಂಪನಿಗಳು ನೀರಿನ ಕೊರತೆಯಿಂದ ಶಟರ್​ ಎಳೆದಿದ್ದು, ಉದ್ಯೋಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಇತ್ತ ಹೋಟೆಲ್​​ಗಳು ವ್ಯವಹಾರದ ಸಮಯವನ್ನು ಕಡಿತಗೊಳಿಸಿದೆ.

ಚೆನ್ನೈನಲ್ಲಿ ಸದ್ಯ ಉಂಟಾಗಿರುವ ನೀರಿನ ಸಮಸ್ಯೆಯ ಬಗ್ಗೆ ಮದ್ರಾಸ್ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ನಡೆದಿದೆ.

ರಾಜ್ಯ ರಾಜಧಾನಿಯಲ್ಲಿ ಉಂಟಾಗಿರುವ ನೀರಿನ ಕೊರತೆ ಏಕಾಏಕಿಯಾಗಿ ಆಗಿದ್ದಲ್ಲ. ನೀರಿನ ಕೊರತೆ ಉದ್ಭವಿಸಲು ಸರ್ಕಾರವೇ ಕಾರಣ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಅರ್ಜಿಯಲ್ಲಿದ್ದ ಮಾತನ್ನೇ ಪುನರುಚ್ಚರಿಸಿರುವ ಹೈಕೋರ್ಟ್, ಸರ್ಕಾರ ಅತಿಕ್ರಮಣ ಮಾಡಿರುವ ಹಾಗೂ ಬತ್ತಿಹೋಗಿರುವ ಸರೋವರ ಮಾಹಿತಿಯ ವಿವರವನ್ನು ಸಲ್ಲಿಸುವಂತೆ ಖಡಕ್ ಆದೇಶ ಮಾಡಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.