ಬಾರ್ಮರ್: ರಾಜಸ್ಥಾನದ ರಾಥೋಡ್ ಕುಟುಂಬವು ಕುದುರೆ ಸವಾರಿ ಮೂಲಕವೇ ಲಕ್ಷಾಂತರ ರೂಪಾಯಿ ಆದಾಯ ಗಳಿಸುವುದಲ್ಲದೇ, ತಮ್ಮ ರಾಜಮನೆತನಕ್ಕೆ ಹಲವು ಪ್ರಶಸ್ತಿಗಳನ್ನು ತಂದು ಕೊಟ್ಟಿದೆ.
ಖ್ಯಾತ ಕುದುರೆ ಸವಾರ ಚುಗ್ ಸಿಂಗ್ ರಾಥೋಡ್ ಅವರು ತಮ್ಮ ಐವರು ಗಂಡು ಮಕ್ಕಳಿಗೆ ಕುದುರೆ ಕುದುರೆ ರೇಸ್ ಕಲಿಯಬೇಕೆಂದು ಆಶಿಸಿದ್ದರು. ವಿದೇಶಿ ನೆಲದಲ್ಲಿ ಭಾರತವನ್ನು ಪ್ರತಿನಿಧಿಸಿ ತಮ್ಮ ತಂದೆಯ ಕನಸುಗಳನ್ನು ಈಡೇರಿಸುವಲ್ಲಿ ಪುತ್ರರು ಯಶಸ್ವಿಯಾಗಿದ್ದಾರೆ.
ಜಪಾನ್, ದುಬೈ ಮತ್ತು ನ್ಯೂಜಿಲೆಂಡ್ನಲ್ಲಿ ನೆಲೆಸಿರುವ ಇವರ ಪುತ್ರರು, ಕುದುರೆ ರೇಸ್ನಲ್ಲಿ ಭಾಗವಹಿಸಿ ಹಣ ಸಂಪಾದಿಸುತ್ತಾರೆ. ಅಲ್ಲದೇ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕುದುರೆ ಸವಾರಿ ಶಾಲೆಯನ್ನು ಈ ಕುಟುಂಬ ಪ್ರಾರಂಭಿಸಿದ್ದು, ಅನೇಕ ಜನರು ಇಲ್ಲಿ ತರಬೇತಿ ಪಡೆಯಲು ಬರುತ್ತಾರೆ. ಕುದುರೆ ಸವಾರಿಯ ಕಲೆಯನ್ನು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಉತ್ತೇಜಿಸುವುದು ನಮ್ಮ ಏಕೈಕ ಗುರಿಯಾಗಿದೆ ಎನ್ನುತ್ತಾರೆ ಚುಗ್ ಸಿಂಗ್.
ಇದನ್ನೂ ಓದಿ: ಹಿಂದೂ ಮಹಾಸಾಗರ ವ್ಯಾಪ್ತಿಯ ದೇಶಗಳಿಗೆ ಸಹಾಯ ಮಾಡಲು ಭಾರತ ಸಿದ್ಧ: ರಾಜನಾಥ್ ಸಿಂಗ್
ನಮ್ಮ ಮನೆಯಲ್ಲಿಯೇ ಕುದುರೆಗಳು ಇದ್ದಿದ್ದರಿಂದ ನಾವು ಅವುಗಳ ಸವಾರಿ ತ್ವರಿತವಾಗಿ ಕಲಿತೆವು. ತರಬೇತಿ ಪಡೆದು ಇಂದು ಉತ್ತಮ ಸವಾರರಾಗಿದ್ದೇವೆ. ಸರ್ಕಾರ ಸಹಕರಿಸಿದರೆ, ನಮ್ಮ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕುದುರೆ ಸವಾರಿ ಸ್ಪರ್ಧೆಗಳನ್ನು ಆಯೋಜಿಸುತ್ತೇವೆ. ಇದರಿಂದ ನಮ್ಮ ದೇಶದ ಅನೇಕ ಪ್ರತಿಭಾನ್ವಿತರು ಬೆಳಕಿಗೆ ಬರುತ್ತಾರೆ. ಪ್ರಸ್ತುತ ಮಾರ್ವಾರಿ ಮತ್ತು ಸಿಂಧಿ ತಳಿಗಳ ಕುದುರೆಗಳು ಅಳಿವಿನ ಅಪಾಯವನ್ನು ಎದುರಿಸುತ್ತಿವೆ. ವಿದೇಶದಲ್ಲಿ ಕಂಡುಬರುವ ಇತರ ಕುದುರೆಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರುವ ಈ ಕುದುರೆಗಳನ್ನು ಸರ್ಕಾರ ಉಳಿಸಬೇಕಿದೆ ಎಂದು ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಬಂದಿರುವ ರಾಥೋಡ್ ಅವರ ಪುತ್ರ ಜಸ್ವಂತ್ ಸಿಂಗ್ ಹೇಳುತ್ತಾರೆ.