ETV Bharat / bharat

ಜೀವನದಲ್ಲಿ ಬೆಳಕಿಲ್ಲದವರು ದೀಪ ಹಚ್ಚಿದ್ರು: ಮೋದಿ ಕರೆಗೆ ನಿರಾಶ್ರಿತರು ಸಾಥ್​​ ನೀಡಿದ್ದು ಹೀಗೆ.. - ಗುಜರಾತ್​

ಮೋದಿ ಕರೆಗೆ ಓಗೊಟ್ಟ ಜನತೆ ಭಾನುವಾರ ರಾತ್ರಿ ತಮ್ಮ ಮನೆಗಳಲ್ಲಿ ದೀಪ ಹಚ್ಚಿ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದರು. ಇದೇ ವೇಳೆ ಗುಜರಾತ್​ನ ಭರೂಚ್​​ನ ನಿರಾಶ್ರಿತರೂ ಕೂಡಾ ದೀಪ ಹಚ್ಚಿ ಕೊರೊನಾ ವಿರುದ್ಧ ಜಾಗೃತಿಗೆ ಸಾಥ್ ಕೊಟ್ಟರು.

Homeless people
ನಿರಾಶ್ರಿತರು
author img

By

Published : Apr 6, 2020, 3:28 PM IST

ಭರೂಚ್​(ಗುಜರಾತ್​): ಕೊರೊನಾ ವಿರುದ್ಧ ಪ್ರಧಾನಿ ಮೋದಿ ಕರೆ ನೀಡಿದ್ದ ಬೆಳಕಿನ ಯುದ್ಧಕ್ಕೆ ರಾಷ್ಟ್ರಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಪ್ರಧಾನಿ ಮೋದಿಯ ಕರೆಗೆ ಓಗೊಟ್ಟ ಜನತೆ ತಮ್ಮ ತಮ್ಮ ಮನೆಗಳಲ್ಲಿ ವಿದ್ಯುತ್​ ದೀಪಗಳನ್ನು ಆರಿಸಿ, ಮೊಂಬತ್ತಿ, ಮೊಬೈಲ್​ ಲೈಟ್ ಹಾಗೂ ಮಣ್ಣಿನ ಹಣತೆಗಳನ್ನು ಬೆಳಗಿಸಿದರು. ಈ ವೇಳೆ ಗುಜರಾತ್​ನ ಭರೂಚ್​ನಲ್ಲಿ ನಿರಾಶ್ರಿತರು ಪ್ರತಿದಿನ ತಾವು ಮಲಗುತ್ತಿದ್ದ ಫುಟ್​ಪಾತ್​ನಲ್ಲಿಯೇ ದೀಪಗಳನ್ನು ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿದ್ದಾರೆ.

ನಿರಾಶ್ರಿತರು

ರಾಜಕೀಯ ನಾಯಕರೂ ಕೂಡಾ ಪಕ್ಷ ಭೇದ ಮರೆತು ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿದ್ದರು. ಈ ಮೂಲಕ ಕೊರೊನಾ ವಿರುದ್ಧದ ಸಮರಕ್ಕೆ ಕೈಜೋಡಿಸಿದ್ದರು. ಈಗ ಗುಜರಾತ್​ನ ಭರೂಚ್​ನಲ್ಲಿ ನಿರಾಶ್ರಿತರೂ ಕೂಡಾ ಮೊಂಬತ್ತಿ ಬೆಳಗಿಸಿ ಕೊರೊನಾ ವಿರುದ್ಧ ಹೋರಾಟಕ್ಕೆ ಸಾಥ್​ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.