ETV Bharat / bharat

ಟಿಕ್​​ಟಾಕ್​​ ನೋಡಿ ಕೊರೊನಾ ಔಷಧ ತಯಾರಿಸಿ ಆಸ್ಪತ್ರೆ ಸೇರಿದ 10 ಜನ

author img

By

Published : Apr 8, 2020, 10:14 PM IST

ಟಿಕ್​​ಟಾಕ್​​ ವಿಡಿಯೋವೊಂದರಲ್ಲಿ ಸೂಚಿಸಿದ್ದಂತೆ, ಅಲಪಲ್ಲಿ ಗ್ರಾಮದ ಎರಡು ಕುಟುಂಬಗಳು ವಿಷಕಾರಿ ಗುಣವನ್ನು ಹೊಂದಿರುವ ಸ್ಥಳೀಯವಾಗಿ ಲಭ್ಯವಾಗುವ ದತ್ತೂರಿ ಸ್ಟ್ರಾಮೋನಿಯಂ ಬೀಜಗಳಿಂದ ಮಾಡಿದ ರಸವನ್ನು ಸೇವಿಸಿದ್ದಾರೆ. ಬಳಿಕ ಅಸ್ವಸ್ಥರಾದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊರೊನಾ
ಕೊರೊನಾ

ಅಮರಾವತಿ: ಕೊರೊನಾ ವೈರಸ್​​​ಗೆ ತುತ್ತಾಗದಂತೆ ರಕ್ಷಿಸಿಕೊಳ್ಳಲು,ಟಿಕ್​ಟಾಕ್​​ ವಿಡಿಯೋವೊಂದರಲ್ಲಿ ಸೂಚಿಸಲಾದ ಮನೆಮದ್ದು ಪ್ರಯತ್ನಿಸಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಹತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಟಿಕ್​​ಟಾಕ್​​ ವಿಡಿಯೋವೊಂದರಲ್ಲಿ ಸೂಚಿಸಿದ್ದಂತೆ, ಅಲಪಲ್ಲಿ ಗ್ರಾಮದ ಎರಡು ಕುಟುಂಬಗಳು ವಿಷಕಾರಿ ಗುಣವನ್ನು ಹೊಂದಿರುವ ಸ್ಥಳೀಯವಾಗಿ ಲಭ್ಯವಾಗುವ ದತ್ತೂರಿ ಸ್ಟ್ರಾಮೋನಿಯಂ ಬೀಜಗಳಿಂದ ಮಾಡಿದ ರಸವನ್ನು ಸೇವಿಸಿದ್ದಾರೆ.

ರಸವನ್ನು ಸೇವಿಸಿದ ಕೂಡಲೇ 10 ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೆರೆಹೊರೆಯವರು ಅವರು ಅರೆ ಪ್ರಜ್ಞಾವಸ್ಥೆಯಲ್ಲಿರುವಾಗ ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳೀಯ ಆರೋಗ್ಯ ಅಧಿಕಾರಿಗಳು ಈ ಘಟನೆಯನ್ನು ಗಮನಿಸಿ ಯಾವುದೇ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತೋರಿಸಿರುವ ಅವೈಜ್ಞಾನಿಕ ಪರಿಹಾರಗಳನ್ನು ಅನುಸರಿಸದಂತೆ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್ -19 ಗೆ ಯಾವುದೇ ಲಸಿಕೆ ಅಥವಾ ತಡೆಗಟ್ಟುವ ಡ್ರಗ್​​​ ಇಲ್ಲದಿರುವುದರಿಂದ, ಭೀತಿಗೊಳಿಸುವ ವೈರಸ್‌ಗೆ ಮನೆ ಮದ್ದುಗಳನ್ನು ನೀಡುವ ಯಾವುದೇ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದನ್ನು ಜನರು ನಂಬಬಾರದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.