ಐಜ್ವಾಲ್ (ಮಿಜೋರಾಂ): ಗೆಳೆತನ ಎಂಬುದು ಎಲ್ಲಕ್ಕಿಂತ ಶ್ರೇಷ್ಠ ಮಾನವ ಸಂಬಂಧ. ಅಂಥ ಗೆಳೆತನಕ್ಕೆ ತಕ್ಕಂತೆ ಗೆಳೆಯನ ಪಾತ್ರ ನಿರ್ವಹಿಸಿದ ಗೆಳೆಯನೊಬ್ಬನ ಕಥೆ ಇಲ್ಲಿದೆ. ಇದು ಲಾಕ್ಡೌನ್ನಲ್ಲಿನ ಸಂಕಷ್ಟದ ಮಧ್ಯೆ ಸಾಗುವ ಸತ್ಯ ಕಥೆ.
-
Thank you from the bottom of our hearts!
— Zoramthanga (@ZoramthangaCM) April 28, 2020 " class="align-text-top noRightClick twitterSection" data="
You've just shown what every Mizo heartbeat means when it comes to the term "Tlawmngaihna"!@CMOTamilNadu@NDTVTamilCinema#selflessheroes #tlawmngaihna pic.twitter.com/TVwnAQWoTj
">Thank you from the bottom of our hearts!
— Zoramthanga (@ZoramthangaCM) April 28, 2020
You've just shown what every Mizo heartbeat means when it comes to the term "Tlawmngaihna"!@CMOTamilNadu@NDTVTamilCinema#selflessheroes #tlawmngaihna pic.twitter.com/TVwnAQWoTjThank you from the bottom of our hearts!
— Zoramthanga (@ZoramthangaCM) April 28, 2020
You've just shown what every Mizo heartbeat means when it comes to the term "Tlawmngaihna"!@CMOTamilNadu@NDTVTamilCinema#selflessheroes #tlawmngaihna pic.twitter.com/TVwnAQWoTj
ರಾಫೇಲ್ ಎವಿಎಲ್ ಮಲ್ಚಾನ್ಹಿಮಾ ಎಂಬ 23 ವರ್ಷದ ಯುವಕನ ಸ್ನೇಹಿತ ವಿವಿಯನ್ ಲಾಲರೆಮ್ಸಂಗಾ ಎಂಬಾತ ಚೆನ್ನೈನಲ್ಲಿ ಏ.23 ರಂದು ಹೃದಯಾಘಾತದಿಂದ ಸಾವಿಗೀಡಾಗಿದ್ದ. ಪೋಸ್ಟ್ ಮಾರ್ಟಮ್ ಆದ ನಂತರ ಚೆನ್ನೈನ ಸ್ಥಳೀಯ ಆಡಳಿತಾಧಿಕಾರಿಗಳು ಚೆನ್ನೈನಲ್ಲೇ ಮೃತನ ಶವಸಂಸ್ಕಾರ ಮಾಡಬೇಕೆಂದು ಹೇಳಿದರು. ಲಾಕ್ಡೌನ್ ಇರುವುದರಿಂದ ಶವವನ್ನು ದೂರದೂರಿಗೆ ಒಯ್ಯಲು ಅವಕಾಶವಿಲ್ಲ ಎಂದು ತಿಳಿಸಿದ್ದರು.
ಆದರೆ ತನ್ನ ಗೆಳೆಯನನ್ನು ಆತನ ಮನೆಯಿಂದ 3 ಸಾವಿರ ಕಿಮೀ ದೂರದ ಚೆನ್ನೈನಲ್ಲಿ ದಿಕ್ಕಿಲ್ಲದಂತೆ ಶವಸಂಸ್ಕಾರ ನೆರವೇರಿಸುವುದಕ್ಕೆ ಮನಸು ಒಪ್ಪಲೇ ಇಲ್ಲ. ಹೋಟೆಲ್ ಮ್ಯಾನೇಜಮೆಂಟ್ ಕೋರ್ಸ್ ಮುಗಿಸಿ ಇನ್ನೇನು ಪ್ರಮಾಣಪತ್ರಗಳನ್ನು ಪಡೆದು ಹೊಸ ಜೀವನ ಆರಂಭಿಸುವ ನಿರೀಕ್ಷೆಯಲ್ಲಿದ್ದ 28 ವರ್ಷದ ಗೆಳೆಯ ವಿವಿಯನ್ ಲಾಕ್ಡೌನ್ ಮಧ್ಯೆಯೇ ವಿಧಿಯಾಟಕ್ಕೆ ಬಲಿಯಾಗಿದ್ದ. ಇಂಥ ಪರಿಸ್ಥಿತಿಯಲ್ಲಿ ಹೇಗಾದರೂ ಮಾಡಿ ಗೆಳೆಯನ ಶವವನ್ನು ಮಿಜೋರಾಂ ರಾಜ್ಯದ ಆತನ ಊರಿಗೆ ಕಳುಹಿಸಲೇಬೇಕು ಎಂದು ರಾಫೇಲ್ ತೀರ್ಮಾನಿಸಿದ್ದ.
ಚೆನ್ನೈನಲ್ಲಿರುವ ಮಿಜೋ ವೆಲ್ಫೇರ್ ಅಸೋಸಿಯೇಷನ್ ಸಹಾಯದಿಂದ ರಾಫೇಲ್ ಮಿಜೋರಾಂ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿದ. ಕೊನೆಗೆ ಇಬ್ಬರು ಆ್ಯಂಬುಲೆನ್ಸ್ ಚಾಲಕರು ರಾಫೇಲ್ ನೆರವಿಗೆ ಬಂದರು. ಹಿಂದೆ ಲಾರಿ ಚಾಲಕರಾಗಿದ್ದಾಗ ಅಸ್ಸಾಂವರೆಗೂ ಹೋಗಿದ್ದ ಅನುಭವವಿದ್ದ ಅವರು ಆ್ಯಂಬುಲೆನ್ಸ್ನಲ್ಲಿ ಶವ ಒಯ್ಯಲು ತಯಾರಾದರು.
ಆದರೆ, ಅವರಿಗೆ ದಾರಿ ಸರಿಯಾಗಿ ಗೊತ್ತಿಲ್ಲದ್ದರಿಂದ ಹಾಗೂ ಮಧ್ಯದಲ್ಲಿ ಬರುವ ಪೊಲೀಸ್ ತಪಾಸಣೆಗಳನ್ನು ಎದುರಿಸಲು ಮಿಜೋರಾಂನ ಒಬ್ಬರಾದರೂ ತಮ್ಮ ಜೊತೆಗೆ ಬರಬೇಕೆಂದರು. ಗೆಳೆಯನಿಗಾಗಿ ರಾಫೇಲ್ ಮಿಜೋರಾಂಗೆ ಹೊರಟು ನಿಂತ.
ಕೊನೆಗೂ ಚಾಲಕರಾದ ಚಿನ್ನತಂಬಿ ಹಾಗೂ ಜೆಯಂದಿರನ್ ಅವರೊಂದಿಗೆ ಶವ ತೆಗೆದುಕೊಂಡು ಏ,25 ರಂದು ಹೊರಟರು. ನಿರ್ಜನ ಹೈವೇಗಳು, ಚಿಕ್ಕ ದಾರಿಗಳನ್ನು ಬಳಸಿ ಸಾಗುವ ಮಧ್ಯೆ ಅದೆಷ್ಟೋ ಬಾರಿ ಆಹಾರ ನೀರಿಲ್ಲದೇ ಉಪವಾಸ ಕಳೆದರೂ ಪ್ರಯಾಣ ಮಾತ್ರ ನಿಲ್ಲಲಿಲ್ಲ. ಕೊನೆಗೂ ನಾಲ್ಕು ದಿನಗಳ ಅತಿ ಪ್ರಯಾಸಕರ 3 ಸಾವಿರ ಕಿಮೀ ಪ್ರಯಾಣದ ನಂತರ ಮೃತ ಗೆಳೆಯ ವಿವಿಯನ್ ಲಾಲರೆಮ್ಸಂಗಾನನ್ನು ಮಿಜೋರಾಂನ ಒಂದು ಮೂಲೆಯಲ್ಲಿದ್ದ ಆತನ ಮನೆಗೆ ತಲುಪಿಸಿದ್ದರು.
ರಾಫೇಲ್ ಎವಿಎಲ್ ಮಲ್ಚಾನ್ಹಿಮಾ ಈತನ ಪ್ರಯತ್ನಕ್ಕೆ ಮಿಜೋರಾಂ ಮುಖ್ಯಮಂತ್ರಿ ಜೋರಮ್ಥಂಗಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, "ನಿಮಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು! ಮಿಜೋ ಜನತೆಯ ಹೃದಯದ ಮಿಡಿತವನ್ನು ನೀನು ಜಗತ್ತಿಗೆ ತೋರಿಸಿರುವೆ." ಎಂದು ಟ್ವೀಟ್ ಮಾಡಿದ್ದಾರೆ.
ರಾಫೇಲ್ ಎವಿಎಲ್ ಮಲ್ಚಾನ್ಹಿಮಾ ಸದ್ಯಕ್ಕೆ 14 ದಿನಗಳ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಇನ್ನು ಆತ್ಮೀಯ ಗೆಳೆಯ ಲಾಲರೆಮ್ಸಂಗಾ ಐಜ್ವಾಲ್ನ ತನ್ನ ಮನೆ ಬಳಿಯ ಮಾಡೆಲ್ ವೆಂಗ್ ಸ್ಮಶಾನದಲ್ಲಿ ಚಿರಶಾಂತಿ ಪಡೆದಿದ್ದಾರೆ.