ದೇಶದಲ್ಲಿ ಸಾಂಸ್ಥಿಕ ಸಂಶೋಧನೆಯೂ ತುಂಬಾ ಹಳೆಯ ಇತಿಹಾಸವನ್ನು ಹೊಂದಿದ್ದು, 1880ರಲ್ಲಿ ಭಾರತದ ಪ್ರತಿ ಪ್ರಾಂತ್ಯದಲ್ಲಿ ಕೃಷಿ ಇಲಾಖೆಯನ್ನು ಸ್ಥಾಪಿಸುವುದರೊಂದಿಗೆ ಆರಂಭವಾಯಿತು. 1919ರ ಮೊಂಟಾಗು-ಚೆಲ್ಮ್ಸ್ಫರ್ಡ್ ಸುಧಾರಣೆ ಇದರ ಪ್ರತೀಕವಾಗಿದೆ. ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಬೆಳೆಸಲು ಇಂಪೀರಿಯಲ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಐಎಆರ್ಐ)ನನ್ನು ಸ್ಥಾಪಿಸಲಾಯಿತು.
ಹಿಂದೆ ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಎಂದು ಕರೆಯಲಾಗುತ್ತಿತ್ತು. ಇದನ್ನು ರಾಯಲ್ ಕಮಿಷನ್ ಆನ್ ಅಗ್ರಿಕಲ್ಚರ್‌ನ ವರದಿಯ ಅನುಸಾರವಾಗಿ 1860ರ ಜುಲೈ 16ರಂದು ಸೊಸೈಟೀಸ್ ನೋಂದಣಿ ಕಾಯ್ದೆ, 1860ರ ಅಡಿಯಲ್ಲಿ ನೋಂದಾಯಿತ ಸೊಸೈಟಿಯಾಗಿ ಸ್ಥಾಪಿಸಲಾಯಿತು. ಕೃಷಿ ಅಭಿವೃದ್ಧಿ ಚಟುವಟಿಕೆಗಳನ್ನು ವಿಕೇಂದ್ರೀಕರಿಸಲಾಯಿತು ಮತ್ತು ಪ್ರಾಂತೀಯ ಸರ್ಕಾರಗಳಿಗೆ ವಹಿಸಲಾಯಿತು.
ಸ್ವತಂತ್ರ ಭಾರತದಲ್ಲಿ, ಯುಎಸ್ಡಿಎ (1963) ಎಂಡಬ್ಲ್ಯೂ ಪಾರ್ಕರ್ ಅವರ ಅಧ್ಯಕ್ಷತೆಯಲ್ಲಿ ಕೃಷಿ ವಿಮರ್ಶೆ ತಂಡವು ದೇಶದಲ್ಲಿ ಕೃಷಿ ಸಂಶೋಧನೆಯ ಸಂಘಟನೆ ಮತ್ತು ನಿರ್ವಹಣೆಯಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತಂದಿತು. ದೇಶಾದ್ಯಂತ ಸಂಶೋಧನಾ ಕೇಂದ್ರಗಳು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಅಡಿಯಲ್ಲಿ ಬಂದವು.
ಇಡೀ ದೇಶದಲ್ಲಿ ತೋಟಗಾರಿಕೆ, ಮೀನುಗಾರಿಕೆ ಮತ್ತು ಪ್ರಾಣಿ ವಿಜ್ಞಾನ ಸೇರಿದಂತೆ ಕೃಷಿಯಲ್ಲಿ ಸಂಶೋಧನೆ ಮತ್ತು ಶಿಕ್ಷಣವನ್ನು ನೀಡಲು, ಮಾರ್ಗದರ್ಶನ ಮಾಡಲು ಇವೆಲ್ಲವನ್ನು ನಿರ್ವಹಿಸಲು ಕೌನ್ಸಿಲ್ ಅತ್ಯುನ್ನತ ಸಂಸ್ಥೆಯಾಗಿದೆ. 101 ಐಸಿಎಆರ್ ಸಂಸ್ಥೆಗಳು ಮತ್ತು 71 ಕೃಷಿ ವಿಶ್ವವಿದ್ಯಾಲಯಗಳು ದೇಶಾದ್ಯಂತ ಇವೆ. ಇದು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಕೃಷಿ ವ್ಯವಸ್ಥೆಗಳಲ್ಲಿ ಒಂದಾಗಿದೆ.
ಐಸಿಎಆರ್ ತನ್ನ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ಹಸಿರು ಕ್ರಾಂತಿಯನ್ನು ಮತ್ತು ಭಾರತದಲ್ಲಿ ಕೃಷಿಯಲ್ಲಿನ ನಂತರದ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದಾಗಿ 1950-51 ರಿಂದ 2017-18ರವರೆಗೆ ದೇಶವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ 5.6 ಪಟ್ಟು, ತೋಟಗಾರಿಕಾ ಬೆಳೆಯಲ್ಲಿ 10.5 ಪಟ್ಟು, 16.8 ಪಟ್ಟು ಮೀನು, 10.4 ಪಟ್ಟು ಹಾಲು ಹಾಗೂ 52.9 ಪಟ್ಟು ಮೊಟ್ಟೆ ಉತ್ಪಾದನೆ ಹೆಚ್ಚಿಸಲು ಶಕ್ತವಾಗಿದೆ.
ಕೃಷಿಯಲ್ಲಿ ಉನ್ನತ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಉತ್ತೇಜಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿದೆ. ಐಸಿಎಂಆರ್ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಅತ್ಯಾಧುನಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ.
ಕೃಷಿ ಸಂಶೋಧನೆಯ ಮಹತ್ವ ಮತ್ತು ಕೃಷಿಗಾಗಿ ಭಾರತ ಮಾಡಿರುವ ವೆಚ್ಚ:
ದೇಶದಲ್ಲಿ ಬಹುಪಾಲು ಜನರು ಕೃಷಿಯನ್ನೇ ಅವಲಂಭಿಸಿರುವುದರಿಂದ, ಈ ಕ್ಷೇತ್ರದಲ್ಲಿ ಸಂಶೋಧನೆಯ ಅಗತ್ಯವಿದೆ. ಅಗ್ರಿ ಆರ್ & ಡಿ ಮೇಲಿನ ಖರ್ಚು, ಸಂಪನ್ಮೂಲಗಳನ್ನು ಸಮಾನವಾಗಿ ವಿತರಣೆ ಮಾಡುವುದರಿಂದ ಸುಸ್ಥಿರ ಅಭಿವೃದ್ಧಿಗೆ ಕಾರಣವಾಗುತ್ತದೆ.
ಕೃಷಿಯ ಮೇಲಿನ ಆರ್ & ಡಿ ವೆಚ್ಚವನ್ನು ಹೆಚ್ಚಿಸುವುದರಿಂದ, ಆಹಾರ ಭದ್ರತೆಯ ಜೊತೆಗೆ ಸಾಮಾಜಿಕ-ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಬಹುದಾಗಿದೆ.
ವಾಷಿಂಗ್ಟನ್ ಡಿಸಿ ಮೂಲದ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ (ಐಎಫ್‌ಪಿಆರ್‌ಐ) ಮಹಾನಿರ್ದೇಶಕರಾದ ಶೆಂಗ್ಜೆನ್ ಫ್ಯಾನ್ ಪ್ರಕಾರ, 2030ಕ್ಕೆ ನಿಗದಿಪಡಿಸಿರುವ 17 ಸುಸ್ಥಿರ ಅಭಿವೃದ್ಧಿ (ಎಸ್‌ಡಿಜಿ) ಗುರಿಗಳಲ್ಲಿ ಅರ್ಧದಷ್ಟು ಪೂರೈಸಲು ಕೃಷಿ ಮುಖ್ಯವಾಗಿದೆ (2018ರಲ್ಲಿ ನೀಡಿದ ಹೇಳಿಕೆ).
ಈ ಎಸ್‌ಡಿಜಿ ಗುರಿಗಳಲ್ಲಿ ಬಡತನ ಮತ್ತು ಹಸಿವನ್ನು ಹೋಗಲಾಡಿಸುವುದು ಮತ್ತು ಅಸಮಾನತೆಯನ್ನು ಕಡಿಮೆ ಮಾಡುವುದು ಸೇರಿದೆ.
ಕೃಷಿ ಸಂಶೋಧನೆಗಾಗಿ 2018ರಲ್ಲಿ ಭಾರತದ ಖರ್ಚು 0.3% (ಕೃಷಿ ಜಿಡಿಪಿಯ ಶೇಕಡಾವಾರು) ಆಗಿದೆ. ಚೀನಾ ಭಾರತಕ್ಕಿಂತ ಎರಡು ಪಟ್ಟು ಹೆಚ್ಚು, ಯುಎಸ್ ನಾಲ್ಕು ಪಟ್ಟು, ಬ್ರೆಜಿಲ್ ಆರು ಮತ್ತು ದಕ್ಷಿಣ ಆಫ್ರಿಕಾ ಭಾರತಕ್ಕಿಂತ 10 ಪಟ್ಟು ಹೆಚ್ಚು ಖರ್ಚು ಮಾಡುತ್ತಿದೆ.
ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸೂಚಕಗಳ (ಎಎಸ್‌ಟಿಐ) ದತ್ತಾಂಶದಂತೆ ಭಾರತವು ಪ್ರಸ್ತುತ ಕೃಷಿ ಜಿಡಿಪಿಯ ಶೇ.0.30ರಷ್ಟು ಕೃಷಿ ಸಂಶೋಧನೆಗಾಗಿ ಖರ್ಚು ಮಾಡಿದೆ. ಚೀನಾ ಹೂಡಿಕೆ ಮಾಡಿದ ಅರ್ಧದಷ್ಟು ಪಾಲು (ಶೇಕಡಾ 0.62) ಇದಾಗಿದೆ.
'ಸಪೋರ್ಟಿಂಗ್ ಇಂಡಿಯನ್ ಫಾರ್ಮ್ಸ್ ದಿ ಸ್ಮಾರ್ಟ್ ವೇ' ಪುಸ್ತಕದಲ್ಲಿ ಉಲ್ಲೇಖಿಸಲಾದ ಗಣಿತದ ಮಾದರಿಯ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡುವ ಪ್ರತಿ ರೂಪಾಯಿಯು ಉತ್ತಮ ಆದಾಯವನ್ನು ನೀಡುತ್ತದೆ.
ಕೃಷಿ ಸಂಶೋಧನೆ ಖರ್ಚು (ಕೃಷಿ ಜಿಡಿಪಿಯ ಶೇಕಡಾವಾರು):
ಭಾರತ - ಶೇ. 0.30
ಚೀನಾ- ಶೇ. 0.62
ಯುಎಸ್- ಶೇ.1.20
ಬ್ರೆಜಿಲ್- ಶೇ.1.82
ದಕ್ಷಿಣ ಆಫ್ರಿಕಾ-ಶೇ.-3.06
ಒಟ್ಟು ಕೃಷಿಯಲ್ಲಿನ ಖಾಸಗಿ ಹೂಡಿಕೆಯ ಪಾಲು ಆರ್ & ಡಿ ಖರ್ಚು 1995ರಲ್ಲಿ, ಕೇವಲ ಶೇ. 3ರಷ್ಟು. ಇದು 2000ರಲ್ಲಿ ಶೇ. 9ರಷ್ಟು ಮತ್ತು 2006ರಲ್ಲಿ ಚೀನಾದಲ್ಲಿ ಶೇ. 16ಕ್ಕೆ ಏರಿಕೆಯಾಗಿದೆ.