ಲಕ್ನೋ(ಉತ್ತರ ಪ್ರದೇಶ): ವಿಶ್ವ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್ ಬಚ್ಚನ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರದ ಹಜರತ್ಗಂಜ್ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ರಂಜಿತ್ ಬಚ್ಚನ್ ತಲೆಗೆ ಗುಂಡಿಕ್ಕಿ ಕೊಲೆಗೈದಿದ್ದಾರೆ. ದಾಳಿ ವೇಳೆ ರಂಜಿತ್ ಅವರ ಸಹೋದರ ಕೂಡ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋರಖ್ಪುರ್ದ ನಿವಾಸಿಯಾಗಿರುವ ರಂಜಿತ್ ಅವರ ಕೊಲೆ ಪ್ರಕರಣ ರಾಜಧಾನಿಯಲ್ಲಿ ಆತಂಕ ಮೂಡಿಸಿದೆ. ರಂಜಿತ್ ಕೊಲೆಗೈದವರ ಪತ್ತೆಗೆ ತಂಡ ರಚಿಸಿ, ತನಿಖೆ ಕೈಗೊಂಡಿದ್ದಾಗಿ ಲಕ್ನೋ ಡಿಸಿಪಿ ದಿನೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.