ಸುಜನ್ಪುರ: ಸೆಪ್ಟೆಂಬರ್ 13 ರಂದು ನಿಧಿ ದೋಗ್ರಾ ಎಂಬ ಬಾಲಕಿ ಕೇವಲ ಒಂದು ನಿಮಿಷದಲ್ಲಿ ಯೋಗದ 35 ವಿಭಿನ್ನ ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗದಲ್ಲಿ ವಿಶೇಷ ದಾಖಲೆ ಮಾಡಿದ್ದಾಳೆ.
ಅಖಿಲ ಭಾರತ ಯೋಗ ಒಕ್ಕೂಟದ (ಎಬಿವೈಎಂ) ವತಿಯಿಂದ ಆಯೋಜನೆಗೊಂಡಿದ್ದ ವರ್ಚುವಲ್ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿದ ಯೋಗಪಟು ನಿಧಿ, 45 ನಿಮಿಷಗಳ ಕಾಲ ಪ್ರಣವ್ ಆಸನವನ್ನು ಪ್ರದರ್ಶಿಸಿದ ಳು. ಅಲ್ಲದೆ, ಯೋಗ ರತ್ನ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದಾಳೆ. ಈ ಪೋರಿ ಇದುವರೆಗೂ ಎರಡೂ ಬಾರಿ ವಿಶ್ವದಾಖಲೆ ನಿರ್ಮಿಸಿದ್ದಾಳೆ.
ಹಿಮಾಚಲ ಪ್ರದೇಶದ ಚೇರಿ ಖಿಯುಂಡ್ ಗ್ರಾಮದ ನಿವಾಸಿಯಾದ ನಿಧಿಗೆ ಬಾಲ್ಯದಿಂದಲೂ ಯೋಗದ ಬಗ್ಗೆ ವಿಶೇಷ ಒಲವಿತ್ತು. ಹೀಗಾಗಿ ತಂದೆ ಶಶಿಕುಮಾರ್ ಜೊತೆ ಮನೆಯಲ್ಲಿ ತಾನೂ ಯೋಗ ಅಭ್ಯಾಸ ಮಾಡುತ್ತಿದ್ದಳು.
ಮಗಳ ಸಾಧನೆ ಕುರಿತು ಪ್ರತಿಕ್ರಿಯಿಸಿದ ತಂದೆ ಶಶಿಕುಮಾರ್, ಟೆಕ್ನಿಕಲ್ ಕಮಿಟಿ ಅನುಮೋದನೆಯ ನಂತರ, ನಿಧಿಗೆ ವಿಶ್ವ ದಾಖಲೆ ಸ್ಥಾನ ನೀಡಲಾಗಿದೆ ಎಂದು ತಿಳಿಸಿದ್ರು.
ಇದೇ ವೇಳೆ ಮಾತನಾಡಿದ ನಿಧಿ ತಾಯಿ ನಿಶಾದೇವಿ, ಮಗಳ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಕೊರೊನಾ ಹಿನ್ನೆಲೆ ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ, ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಂದು ಅವಕಾಶ ಸಿಕ್ಕಂತಾಗಿದೆ ಎಂದು ಹೇಳಿದರು.