ಬಿಲಾಸ್ಪುರ (ಹಿಮಾಚಲ ಪ್ರದೇಶ): ಉತ್ತರ ಭಾರತದ ಪ್ರವಾಸಿಗರಿಗೆ ಅದರಲ್ಲೂ ಹಿಮಾಚಲ ಪ್ರದೇಶಕ್ಕೆ ಹೋಗಬೇಕೆನ್ನುವವರಿಗೆ ಸಿಹಿ ಸುದ್ದಿಯೊಂದು ಬಂದಿದೆ. ರೈಲ್ವೇ ಮಾರ್ಗವೊಂದು ಸಿದ್ಧವಾಗುತ್ತಿದ್ದು ಎರಡು ಕಿಲೋಮೀಟರ್ನಿಂದ 10 ಕಿಲೋಮೀಟರ್ಗಳ ಅಂತರದಲ್ಲಿ ಸುಮಾರು 13 ಪ್ರವಾಸಿ ಸ್ಥಳಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.
ಹಿಮಾಚಲಪ್ರದೇಶದ ಬಿಲಾಸ್ಪುರ ಹಾಗೂ ಲಡಾಖ್ನ ಲೇಹ್ ನಡುವೆ ರೈಲ್ವೆ ಮಾರ್ಗವೊಂದು ಸಿದ್ಧವಾಗುತ್ತಿದೆ. ಈ ರೈಲ್ವೆಯು ಹಿಮಾಚಲ ಪ್ರದೇಶದ 10 ವನ್ಯ ಸಂರಕ್ಷಣಾ ತಾಣಗಳನ್ನು ಹಾಗೂ ಲಡಾಖ್ನ ಮೂರು ವನ್ಯ ಜೀವಿ ಸಂರಕ್ಷಣಾ ತಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಈ ಸಂರಕ್ಷಣಾ ತಾಣಗಳಲ್ಲಿ ಹಿಮಾಚಲ ಪ್ರದೇಶ ಏಳು ಹಾಗೂ ಲಡಾಖ್ನ ಎರಡು ವನ್ಯಜೀವಿ ಸಂರಕ್ಷಣಾ ತಾಣಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಕಂಡು ಬರುತ್ತವೆ. ಎಲ್ಲಾ ಸಂರಕ್ಷಣಾ ತಾಣಗಳಿಗೂ ಉತ್ತರ ರೈಲ್ವೆ ಸಂಪರ್ಕ ಕಲ್ಪಿಸಲಿದ್ದು, ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗಿವೆ. ಈ ಮೂಲಕ ಪ್ರವಾಸಿಗರಿಗೆ ಒಂದೇ ಬಾರಿಗೆ ಹಲವು ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಅವಕಾಶ ಸಿಗಲಿದೆ.
ಬಂದಾಳಿ, ಚಂದ್ರತಾಲ್, ಕ್ಯಾಶ್, ಕನ್ವರ್, ಖೋಖಾನ್, ಕಿಬ್ಬರ್, ಕುಗಾಟಿ, ಮನಾಲಿ, ನಾಗಾರು ವನ್ಯಜೀವಿ ಮೃಗಾಲಯಗಳು ಹಿಮಾಚಲ ಪ್ರದೇಶದಲ್ಲಿದ್ದರೆ, ಹೆಮಿಷ್ ನ್ಯಾಷನಲ್ ಪಾರ್ಕ್, ಕಾರಾಕೋರಂ ವನ್ಯಜೀವಿ ಸಂರಕ್ಷಣಾಲಯ ಹಾಗೂ ಛಂಗ್ಥಾಂಗ್ ಕೋಲ್ಡ್ ಡೆಸರ್ಟ್ ಫಾರೆಸ್ಟ್ಗಳು ಲಡಾಖ್ನಲ್ಲಿವೆ.
ರಕ್ಷಣಾ ಇಲಾಖೆಯಿಂದ ಮಹತ್ತರವಾದ ಯೋಜನೆಯೊಂದರ ಕಾಮಗಾರಿಯೂ ಕೂಡಾ ನಡೆಯುತ್ತಿದ್ದು ಹೆಚ್ಚು ಒತ್ತು ನೀಡಲಾಗಿದೆ. ಪ್ರವಾಸೋದ್ಯಮ ಹಾಗೂ ವ್ಯವಹಾರ ಉದ್ದೇಶದಿಂದಲೂ ಬಹುಮುಖ್ಯ ಪಾತ್ರ ವಹಿಸಲಿದ್ದು, ಉತ್ತರ ರೈಲ್ವೆ ಈ ರೈಲ್ವೆ ಮಾರ್ಗದ ಮೇಲೆ ಸಾಕಷ್ಟು ಗಮನ ವಹಿಸುತ್ತಿದೆ.