ಪಶ್ಚಿಮ ಬಂಗಾಳ: ರಾಜ್ಯದಲ್ಲಿ ರೈಲು ಮತ್ತು ವಿಮಾನ ಸೇವೆಗಳು ಪುನರಾರಂಭವಾಗುತ್ತಿದ್ದಂತೆಯೇ, 344 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,536ಕ್ಕೆ ತಲುಪಿದೆ.
20 ರೈಲುಗಳು ಮತ್ತು 11 ವಿಮಾನಗಳು ಲಾಕ್ ಡೌನ್ನಿಂದಾಗಿ ಅನ್ಯರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಜನರನ್ನು ಮತ್ತೆ ರಾಜ್ಯಕ್ಕೆ ಕರೆತಂದವು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರೈಲ್ವೆ ಸಚಿವಾಲಯವು ತಮ್ಮ ರಾಜಕೀಯ ಅನುಕೂಲಕ್ಕಾಗಿ ರೈಲುಗಳನ್ನು ಕಳುಹಿಸುತ್ತಿರುವುದು ಬೇಜವಾಬ್ದಾರಿಯುತ ನಡೆಯಾಗಿದೆ ಎಂದು ಟೀಕಿಸಿದ್ದಾರೆ.
ತಮ್ಮ ಮನೆಗಳಿಗೆ ಮರಳುವ ವಲಸೆ ಕಾರ್ಮಿಕರಿಗೆ ಸರಿಯಾದ ಆರೋಗ್ಯ ಸೌಲಭ್ಯಗಳನ್ನು ನಿರ್ಮಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.