ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ಧುಗೊಂಡ ಬಳಿಕ ಕಣಿವೆ ನಾಡಿನಲ್ಲಿ ಹೈಸ್ಪೀಡ್ 4ಜಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಬರೋಬ್ಬರಿ 2 ವರ್ಷದ ಬಳಿಕ ಈ ಸೇವೆ ಪುನಾರಂಭಗೊಳಿಸಲಾಗಿದೆ.
-
4G mobile internet services being restored in entire J&K @diprjk
— Rohit Kansal (@kansalrohit69) February 5, 2021 " class="align-text-top noRightClick twitterSection" data="
">4G mobile internet services being restored in entire J&K @diprjk
— Rohit Kansal (@kansalrohit69) February 5, 20214G mobile internet services being restored in entire J&K @diprjk
— Rohit Kansal (@kansalrohit69) February 5, 2021
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಮತ್ತೆ 4ಜಿ ಅಂತರ್ಜಾಲ ಸೇವೆಗಳನ್ನು ಪುನರ್ ಸ್ಥಾಪನೆ ಮಾಡಲು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕಳೆದ ಕೆಲ ದಿನಗಳ ಹಿಂದೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದರು. ಇದೀಗ ಜಮ್ಮು-ಕಾಶ್ಮೀರದಲ್ಲಿ 4ಜಿ ಅಂತರ್ಜಾಲ ಸೇವೆ ನೀಡಿರುವ ಕುರಿತು ಅಲ್ಲಿನ ಅಧಿಕಾರಿ ರೋಹಿತ್ ಕನ್ಸಾಲ್ ಟ್ವೀಟ್ ಮಾಡಿದ್ದಾರೆ.
ಓದಿ: ಜಮ್ಮು-ಕಾಶ್ಮೀರದಲ್ಲಿ ಸದ್ಯದ್ರಲ್ಲೇ ಹೈಸ್ಪೀಡ್ 4 ಜಿ ಇಂಟರ್ನೆಟ್ ಲಭ್ಯ
ಭಯೋತ್ಪಾದಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 4ಜಿ ಸೇವೆ ಸ್ಥಗಿತಗೊಳಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸ್ಥಿತಿ ಸೂಕ್ಷ್ಮವಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಜನವರಿ ತಿಂಗಳಿಂದ 2ಜಿ ಇಂಟರ್ನೆಟ್ ಸೇವೆ ನೀಡಲಾಗಿತ್ತು.