ಮಹಾರಾಷ್ಟ್ರ : ಈಗಾಗಲೇ ಕೊರೊನಾ ವೈರಸ್ ಮತ್ತು ಮಿಡತೆ ಹಾವಳಿಯಿಂದ ಕಂಗೆಟ್ಟಿರುವ ಮಹಾರಾಷ್ಟ್ರ ಜನತೆಗೆ ಇದೀಗ ಮಳೆ ಕೂಡ ಹೊಡೆತ ನೀಡುತ್ತಿದೆ. ಥಾಣೆ ಸೇರಿ ಹಲವೆಡೆ ಧಾರಾಕಾರ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಜೂನ್ 8ರೊಳಗೆ ಮಹಾರಾಷ್ಟ್ರಕ್ಕೆ ಮಾನ್ಸೂನ್ ಪ್ರವೇಶಿಸಲಿದೆ ಎನ್ನಲಾಗಿತ್ತು. ಆದರೆ, ಮಳೆ ಈಗಾಗಲೇ ತನ್ನ ಉಗ್ರರೂಪ ತೋರಿಸಲು ಪ್ರಾರಂಭಿಸಿದೆ. ಇಂದು ಬೆಳಗ್ಗೆ 6.30ರಿಂದ ಮಳೆ ಶುರುವಾಗಿದೆ. ಮುಂಬೈನ ದಾದರ್, ಮಾಟುಂಗಾ, ಸಿಯಾನ್, ಕುರ್ಲಾ, ಕಿಂಗ್ಸ್ ಸರ್ಕಲ್, ಗೋರೆಗಾಂವ್, ಮಲಾಡ್, ಕಂಡಿವಲಿ,ಬೊರಿವಾಲಿ, ವಿಖ್ರೋಲಿ, ಘಾಟ್ಕೋಪರ್, ಮುಲುಂಡ್, ಪೊವಾಯಿಯಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಗಳು ತುಂಬಿ ತುಳುಕುತ್ತಿವೆ.
ಮುಂದಿನ 24 ಗಂಟೆಗಳಲ್ಲಿ ಕೊಂಕಣ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.