ETV Bharat / bharat

ಕೋವಿಡ್​ ಲಸಿಕೆ ಪಡೆಯಲು ಯುವಕರು 2022ರವರೆಗೆ ಕಾಯಬೇಕು: ವಿಶ್ವ ಆರೋಗ್ಯ ಸಂಸ್ಥೆ

ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟ ಮುಂದುವರೆದಿದೆ. ಇದರ ಮಧ್ಯೆ ಮುಂದಿನ ವರ್ಷದ ಆರಂಭದ ವೇಳೆಗೆ ವ್ಯಾಕ್ಸಿನ್​ ಹೊರ ಬರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಲಸಿಕೆ ಪಡೆದುಕೊಳ್ಳಲು ಯವಕರು 2022ರವರೆಗೆ ಕಾಯಬೇಕಾಗಿದೆ.

Dr Soumya Swaminathan
Dr Soumya Swaminathan
author img

By

Published : Oct 15, 2020, 5:16 PM IST

ಜೀನಿವಾ: ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇಲ್ಲಿಯವರೆಗೆ ಅದಕ್ಕಾಗಿ ಯಾವುದೇ ದೇಶಗಳು ಲಸಿಕೆ ಕಂಡು ಹಿಡಿದಿಲ್ಲ. ಆದರೆ ಫ್ರಾನ್ಸ್​, ರಷ್ಯಾ, ಯುಕೆ,ಅಮೆರಿಕ ಹಾಗೂ ಭಾರತ ಸೇರಿದಂತೆ ಅನೇಕ ದೇಶಗಳು ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಮಗ್ನವಾಗಿವೆ. ಮುಂದಿನ ವರ್ಷದ ವೇಳೆಗೆ ವ್ಯಾಕ್ಸಿನ್​ ರಿಲೀಸ್​ ಆಗುವ ಸಾಧ್ಯತೆ ದಟ್ಟವಾಗಿದೆ.

ಇದೇ ವಿಷಯವಾಗಿ ಮಾತನಾಡಿರುವ ವಿಶ್ವ ಆರೋಗ್ಯ ಸ್ಥಂಸ್ಥೆ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್​, ಆರೋಗ್ಯವಂತ ಯುವಕರು ಕೋವಿಡ್​ ವ್ಯಾಕ್ಸಿನ್​​ ಪಡೆದುಕೊಳ್ಳಬೇಕಾದರೆ 2022ರವರೆಗೆ ಕಾಯಬೇಕು ಎಂದಿದ್ದಾರೆ. ಲಸಿಕೆ ಬಿಡುಗಡೆಗೊಳ್ಳುತ್ತಿದ್ದಂತೆ ಆರಂಭದಲ್ಲಿ ಹೆಲ್ತ್​ ಕೇರ್​​ ಸಿಬ್ಬಂದಿ, ಕೊರೊನಾ ವಾರಿಯರ್ಸ್​​, ವೃದ್ಧರು ಹಾಗೂ ಹೈರಿಸ್ಕ್​ ವ್ಯಕ್ತಿಗಳಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿರುವ ಕಾರಣ ಯುವ ಪೀಳಿಗೆ ಇದಕ್ಕಾಗಿ ಮತ್ತಷ್ಟು ವರ್ಷ ಕಾಯಬೇಕಾಗಿದೆ ಎಂದು ತಿಳಿಸಿದ್ದಾರೆ.

ಲಸಿಕೆಗೆ ಬಿಡುಗಡೆಗೊಳ್ಳುತ್ತಿದ್ದಂತೆ ಕೆಲವೊಂದು ಮಾರ್ಗಸೂಚಿ ರಿಲೀಸ್​ ಆಗಲಿದ್ದು, 2022ರವರೆಗೆ ಯುವಕರು ಕಾಯುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ಜನವರಿ ಅಥವಾ ಏಪ್ರಿಲ್​ ತಿಂಗಳ ವೇಳೆಗೆ ಕೋವಿಡ್​ ವ್ಯಾಕ್ಸಿನ್​ ಲಸಿಕೆ ನಮ್ಮ ಕೈಗೆ ಸಿಗಲಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ, ಇದು ಅಸಾಧ್ಯ ಎಂದಿರುವ ಸ್ವಾಮಿನಾಥ್​ನ ರಷ್ಯಾದಂತಹ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳು, ಅಂಗಡಿ ಸಿಬ್ಬಂದಿಗಳಿಗೆ ಈ ಲಸಿಕೆ ನೀಡಲು ನಿರ್ಧರಿಸಿದ್ದು, ಚೀನಾದಲ್ಲಿ ಯೋಧರಿಗೆ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಭಾರತದಲ್ಲಿ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರದ ವೈದ್ಯರು, ದಾದಿಯರು, ನೈರ್ಮಲ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಧಿಕಾರಿಗಳಿಗೆ ಆರಂಭದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.