ನವದೆಹಲಿ: ಕೊರೊನಾ ವೈರಸ್ ರೋಗಲಕ್ಷಣಗಳ ಹರಡುವಿಕೆ ಬಗ್ಗೆ ನಾಗರಿಕರಿಂದ ಪ್ರತಿಕ್ರಿಯೆ ಪಡೆಯಲು ಕೈಗೊಳ್ಳುತ್ತಿರುವ ಸಮೀಕ್ಷೆಯಲ್ಲಿ ಜನರು ಭಾಗವಹಿಸಬೇಕೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೇಳಿಕೊಂಡಿದೆ.
-
#CoronaUpdate
— Ministry of Health 🇮🇳 #StayHome #StaySafe (@MoHFW_INDIA) April 22, 2020 " class="align-text-top noRightClick twitterSection" data="
A Telephonic Survey on #COVID19 is being undertaken where you shall receive calls on your mobile from 1921 number.
Please participate in this survey with your information.#SwasthaBharat #IndiaFightsCorona pic.twitter.com/EEJqX9MPyi
">#CoronaUpdate
— Ministry of Health 🇮🇳 #StayHome #StaySafe (@MoHFW_INDIA) April 22, 2020
A Telephonic Survey on #COVID19 is being undertaken where you shall receive calls on your mobile from 1921 number.
Please participate in this survey with your information.#SwasthaBharat #IndiaFightsCorona pic.twitter.com/EEJqX9MPyi#CoronaUpdate
— Ministry of Health 🇮🇳 #StayHome #StaySafe (@MoHFW_INDIA) April 22, 2020
A Telephonic Survey on #COVID19 is being undertaken where you shall receive calls on your mobile from 1921 number.
Please participate in this survey with your information.#SwasthaBharat #IndiaFightsCorona pic.twitter.com/EEJqX9MPyi
'ಕೋವಿಡ್-19 ಕುರಿತು ದೂರವಾಣಿ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು,1921 ಸಂಖ್ಯೆಯಿಂದ ನಿಮ್ಮ ಮೊಬೈಲ್‌ಗೆ ದೂರವಾಣಿ ಕರೆ ಬರುತ್ತದೆ. ದಯವಿಟ್ಟು ಈ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿ' ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಟ್ವೀಟ್ ಮಾಡಿದೆ.
ಈ ಸಮೀಕ್ಷೆಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ನಡೆಸಲಿದ್ದು, 1921 ಸಂಖ್ಯೆಯಿಂದ ಮೊಬೈಲ್ ಫೋನ್‌ಗಳಿಗೆ ಕರೆಗಳು ಬರಲಿವೆ. ಇಂತಹ ಹೆಸರಿನಲ್ಲಿ ಯಾರಾದರು ಕಿಡಿಗೇಡಿಗಳು ಅಥವಾ ಬೇರೆ ಯಾವುದೇ ಸಂಖ್ಯೆಗಳಿಂದ ಬರುವ ಕರೆಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದೆ.