ನವದೆಹಲಿ: ದೇಶಾದ್ಯಂತ ಹೇರಿಕೆ ಮಾಡಲಾಗಿರುವ ಲಾಕ್ಡೌನ್ ಇದೀಗ ಮತ್ತಷ್ಟು ಸಡಿಲಗೊಂಡಿದ್ದು ಜೂನ್ 8ರಿಂದ ದೇಶಾದ್ಯಂತ ಮಾಲ್, ಹೋಟೆಲ್, ರೆಸ್ಟೋರೆಂಟ್ ಓಪನ್ ಆಗ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ನಿಯಮ ಪ್ರಕಟಗೊಳಿಸಿದೆ.
ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಮಾಲ್ಗಳು,ರೆಸ್ಟೋರೆಂಟ್ಗಳು ಇದೀಗ ಓಪನ್ ಆಗುತ್ತಿರುವ ಕಾರಣ ಕೇಂದ್ರ ಸರ್ಕಾರ ಮಹತ್ವದ ನಿಯಮ ಜಾರಿಗೊಳಿಸಿದ್ದು, ಇವುಗಳ ಪಾಲನೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.
ಪ್ರಮುಖವಾಗಿ ರೆಸ್ಟೋರೆಂಟ್ ಮತ್ತು ಹೋಟೆಲ್ಗಳಿಗೆ ಕೊರೊನಾ ರೋಗಲಕ್ಷಣ ಇರದ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲು ಕೇಂದ್ರ ಸೂಚನೆ ನೀಡಿದೆ.
ಪ್ರಮುಖ ನಿಯಮಾವಳಿಗಳು ಇಂತಿವೆ
- 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷದೊಳಗಿನ ಮಕ್ಕಳು ಹೋಗುವಂತಿಲ್ಲ.
- 6 ಅಡಿ ಅಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
- ಮಾಸ್ಕ್ ಹಾಗೂ ಫೇಸ್ ಕವರ್ ಬಳಕೆ ಕಡ್ಡಾಯ
- ಸ್ಯಾನಿಟೈಸರ್ನಿಂದ ನಿಯಮಿತವಾಗಿ ಕೈತೊಳೆದುಕೊಳ್ಳುವುದು
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧ
- ಆರೋಗ್ಯ ಸೇತು ಬಳಕೆ ಕಡ್ಡಾಯ
ಶಾಪಿಂಗ್ ಮಾಲ್ ನಿಯಮ ಇಂತಿವೆ
- ಶಾಪಿಂಗ್ ಮಾಲ್ ಪ್ರವೇಶ ದ್ವಾರದ ಬಳಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯ
- ಶಾಪಿಂಗ್ ಮಾಲ್ ಒಳಗಡೆ ಮಾಸ್ಕ್ ಧರಿಸುವುದು ಕಡ್ಡಾಯ
- ಕೊರೊನಾ ನಿಯಂತ್ರಣ ಪೋಸ್ಟರ್, ವಿಡಿಯೋ ಪ್ರದರ್ಶನ
- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ
- ಪಾರ್ಕಿಂಗ್ ಸ್ಥಳಗಳಲ್ಲಿ ಜನದಟ್ಟನೆ ನಿಯಂತ್ರಣ
- ಪ್ರತ್ಯೇಕವಾಗಿ ಪ್ರವೇಶ ಹಾಗೂ ನಿರ್ಗಮನ ದ್ವಾರ ನಿರ್ಮಾಣ
- ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ ಸಂಖ್ಯೆಯಲ್ಲಿ ಗ್ರಾಹಕರನ್ನ ಒಳಗಡೆ ಬಿಡುವುದು
ರೆಸ್ಟೋರೆಂಟ್ನಲ್ಲಿ ಪಾಲಿಸಬೇಕಾದ ನಿಯಮ
- ರೆಸ್ಟೋರೆಂಟ್ ಸಿಬ್ಬಂದಿ, ವೇಟರ್ ಮಾಸ್ಕ್ ಹಾಗೂ ಗ್ಲೌಸ್ ಕಡ್ಡಾಯವಾಗಿ ಧರಿಸಿರಬೇಕು
- ಕುಳಿತುಕೊಳ್ಳುವ ಆಸನಗಳ ಮಧ್ಯೆ ಸಾಮಾಜಿಕ ಅಂತರ
- ಡಿಜಿಟಲ್ ಪಾವತಿ ಮಾಡಲು ಪ್ರೋತ್ಸಾಹ
- ಗ್ರಾಹಕರು ಹೊರಟಾಗ ಟೇಬಲ್ ಸ್ಯಾನಿಟೈಸರ್ ಮೂಲಕ ಸ್ವಚ್ಛ
- ಗ್ರಾಹಕರು ಕೂಡ ಎಲ್ಲ ಸಂದರ್ಭದಲ್ಲಿ ಮಾಸ್ಕ್ ಧರಿಸಲೇಬೇಕು.
- ಹೋಟೆಲ್, ರೆಸ್ಟೋರೆಂಟ್ಗಳಿಗೆ ಬರುವವರಿಗೆ ಪ್ರತ್ಯೇಕ ಪ್ರವೇಶ ಮತ್ತು ಪ್ರತ್ಯೇಕ ನಿರ್ಗಮನದ ವ್ಯವಸ್ಥೆ
- ಹೋಟೆಲ್ ಮತ್ತು ರೆಸ್ಟೋರೆಂಟ್ ಬರುವ ಗ್ರಾಹಕರ ಐಡಿ, ವಿಳಾಸ, ಪ್ರಯಾಣದ ಹಿನ್ನೆಲೆ, ವೈದ್ಯಕೀಯ ಸ್ಥಿತಿ ಬಗ್ಗೆ ಸರಿಯಾದ ದಾಖಲೆ ಅಥವಾ ಮಾಹಿತಿ ಪಡೆದುಕೊಳ್ಳಬೇಕು